ಕವಿಸಾಲು
01
ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾವೈಕ್ಯತೆಯ ರೋಮಾಂಚಕ ಕ್ಷಣಗಳು*
*ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾವೈಕ್ಯತೆಯ ರೋಮಾಂಚಕ ಕ್ಷಣಗಳು*
ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಬೈಲ್ ದುರ್ಗಮ್ಮ ದೇವಸ್ಥಾನ ಶ್ರೀ ಮಾರುತಿ ಮಲ್ಲೇಶ್ವರ ಗಣಪತಿ ಮೆರವಣಿಗೆ ಸಂಧರ್ಭದಲ್ಲಿ ವಿಶೇಷ ದೃಶ್ಯಗಳು ಕಂಡು ಬಂದವು.
* ಅನ್ನ ಸಂತರ್ಪಣೆಗೆ ಕುಡಿಯುವ ನೀರು ಮತ್ತು ತಂಪು ಪಾನೀಯ ವ್ಯವಸ್ಥೆ ಮಾಡಿದ ಮುಸ್ಲಿಂ ಬಾಂಧವರಿಗೆ ಸನ್ಮಾನ ಮಾಡಿದರು.
* ಸೂಳೇ ಬೈಲ್ ಮಲ್ಲಿಕ್ ದಿನಾರ್ ಮದರಸದಿಂದ ಹಬೀಬ್ ಹಾಗೂ ಮುನ್ನ ಗಣಪತಿಗೆ ಹೂವಿನ ಹಾರ ಹಾಕಿ ಭಾವೈಕ್ಯತೆ ಮೆರೆದರು.
* ಸುನ್ನಿ ಮಕ್ಕಾ ಮಸೀದಿ ಕ್ರಾಸ್ ಬಳಿ ರೆಹಮತ್, ಕೈಸರ್ ಹಾಗೂ ಇತರರಿಂದ ಹೂವಿನ ಹಾರ ಹಾಕಿ ಭಾವೈಕ್ಯತೆ ಮೆರೆಯಲಾಯ್ತು.
* ಈದ್ಗಾ ನಗರ ಹತ್ತಿರ ಈದ್ಗಾ ನಗರ ವಾಸಿಗಳಾದ ಅತಾವುಲ್ಲ, ಸಲೀಂ, ಸದ್ದಾಂ ರವರು ಹೂವಿನ ಹಾರ ಹಾಕಿ ಭಾವೈಕ್ಯತೆ ಮೆರೆದರು.
ಈ ಸಂದರ್ಭದಲ್ಲಿ ಶ್ರೀ ಮಾರುತಿ ಮಲ್ಲೇಶ್ವರ ಗಣಪತಿ ಕಮಿಟಿಯ ಮುಖಂಡರುಗಳಾದ ನಾಗರಾಜ್,ಸಂತೋಷ್, ಅಶೋಕ, ಮನು, ಪುಟ್ಟ, ಸುದೀಪ ಮುಂತಾದವರುಗಳು ಹಾಜರಿದ್ದು ಸಂಭ್ರಮಿಸಿದರು.