ಶಿವಮೊಗ್ಗ ಜಿಲ್ಲಾ ಕ.ರಾ.ಸ.ನಿವೃತ್ತ ನೌಕರರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಸ್.ಆರ್.ಚಂದ್ರಪ್ಪ*
*ಶಿವಮೊಗ್ಗ ಜಿಲ್ಲಾ ಕ.ರಾ.ಸ.ನಿವೃತ್ತ ನೌಕರರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಸ್.ಆರ್.ಚಂದ್ರಪ್ಪ*
ಶಿವಮೊಗ್ಗ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಟಿ.ಎ. ರವರ ಅನಾರೋಗ್ಯ ಕಾರಣದಿಂದಾಗಿ ಜಿಲ್ಲಾ ಸಂಘದ ಸಂಘಟನೆಯ ಹಿತದೃಷ್ಠಿಯಿಂದ ಕೇಂದ್ರ ಸಂಘದ ಉಪಾಧ್ಯಕ್ಷರಾದ ಎಸ್.ಆರ್. ಚಂದ್ರಪ್ಪರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಂಘದ ಜಿಲ್ಲಾಧ್ಯಕ್ಷರ ಹುದ್ದೆಯ ಪ್ರಭಾರವನ್ನು ವಹಿಸಿದ್ದು, ಅವರು ಇಂದು ಪದಗ್ರಹಣ ಮಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ, ಜಿಲ್ಲಾ ಅಧ್ಯಕ್ಷ ಮೊಹನ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಪಾಪಣ್ಣ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ, ವಿಭಾಗಿಯ ಕಾರ್ಯದರ್ಶಿ ಹನುಮಂತಪ್ಪ ಉಪಸ್ಥಿತರಿದ್ದರು.