ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಕೆಲ ಜನ
ಮಹಾಭಾರತದ
ಶಕುನಿಯಂತೆ…

ನಗುವರು ನಿನ್ನ ಜೊತೆ
ಆಟವಾಡುವರು
ನಿನ್ನದೇ ವಿರುದ್ಧ!

2.
ಪರೀಕ್ಷೆ
ಹೀಗೂ ಇರಬಾರದು
ಹೃದಯವೇ

ಫಲಿತಾಂಶದ
ಮೋಹ ಬಿಡುವಷ್ಟು!

3.
ಮನಸ್ಸು ನೋಡಿ ಅಲ್ಲ
ಮಹಲು ನೋಡಿ

ಅತಿಥಿಗಳು
ಬರುತ್ತಿದ್ದಾರೆ
ಈಗೀಗ!

– *ಶಿ.ಜು.ಪಾಶ*
8050112067
(8/10/2025)