ಮಾರುಕಟ್ಟೆಯಲ್ಲಿ ಕಲಬೆರೆಕೆಯಾಗಿರುವ ರಸಗೊಬ್ಬರ!

ಮಾರುಕಟ್ಟೆಯಲ್ಲಿ ಕಲಬೆರೆಕೆಯಾಗಿರುವ ರಸಗೊಬ್ಬರ!

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ ಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ತಂಗಿರುವರು. ರೈತರಲ್ಲಿ ಅರಿವು ಮೂಡಿಸಲು ಕಲಬೆರಿಕೆ ಆಗಿರುವ ರಸಗೊಬ್ಬರಗಳನ್ನು ಪತ್ತೆ ಹಚ್ಚುವುದರ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿಯಾದ ಡಾಕ್ಟರ್ ಗಣಪತಿ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಮಾರುಕಟ್ಟೆಯಲ್ಲಿ ರಸಗೊಬ್ಬರಗಳಿಗೆ ಅನೇಕ ರೀತಿಯಲ್ಲಿ ಕಲಬೆರಕೆ ನಡೆಯುತ್ತಿದೆ. ರೈತರಿಗೆ ಈ ವಿಷಯದ ಅರಿವಿಲ್ಲದೆ ಮೋಸ ಹೋಗುತ್ತಿದ್ದಾರೆ.

ಸುಣ್ಣ, ಕಲ್ಲುಪುಡಿ ಮತ್ತಿತರ ಪದಾರ್ಥಗಳನ್ನು ರಸಗೊಬ್ಬರಗಳ ಜೊತೆ ಮಿಶ್ರಣ ಮಾಡಿ ಮಾರಲಾಗುತ್ತದೆ. ಇದರಿಂದಾಗಿ ಬೆಳೆಗಳಿಗೆ ಅವಶ್ಯಕತೆ ಇದ್ದಷ್ಟು ಪೋಷಕಾಂಶಗಳು ತಲುಪುವುದಿಲ್ಲ. ಇದನ್ನು ಪತ್ತೆ ಹಚ್ಚಲು ವಿವಿಧ ಪರೀಕ್ಷೆಗಳನ್ನು ರೈತರು ಮಾಡಬೇಕಾಗುತ್ತದೆ. ಈ ಪರೀಕ್ಷೆಗಳು ರೈತರಿಗೆ ನಡೆಸಲು ಸುಲಭವಾಗಿರುತ್ತದೆ.

ಉದಾಹರಣೆಗೆ ಸಾರಜನಕವನ್ನು ನೀರಿನಲ್ಲಿ ಕಲಸಿದಾಗ ತಂಪಾಗಿ ಭಾಸವಾಗುತ್ತದೆ ಮತ್ತು ಸಂಪೂರ್ಣವಾಗಿ ಕರಗುತ್ತದೆ. ಈ ಮೇಲಿನ ಫಲಿತಾಂಶ ಬರದಿದ್ದಲ್ಲಿ ಅದು ಕಲಬೆರಕೆಯಾಗಿರುವ ರಸಗೊಬ್ಬರ. ಹೀಗೆ ಒಂದು ಚಮಚ ಡಿ ಎ ಪಿ ಗೆ ಬೆಂಕಿಯ ಸ್ಪರ್ಶ ಮಾಡಿದಾಗ ಅದು ಉಬ್ಬಿಕೊಳ್ಳುತ್ತದೆ. ಉಬ್ಬ ದಿದ್ದಲ್ಲಿ ಅದು ಕಲಬೆರಕೆಯಾಗಿರುವ ಡಿಎಪಿ. ಕಾರ್ಯಕ್ರಮದಲ್ಲಿ
ಹೀಗೆ ಮತ್ತಿತರ ಕಿರುಪರೀಕ್ಷೆಗಳನ್ನು ರೈತರಿಗೆ ಹೇಳಿಕೊಟ್ಟರು. ರೈತರು ಈ ಕಾರ್ಯಕ್ರಮವು ಅವರಿಗೆ ತುಂಬಾ ಉಪಯೋಗವಾಯಿತೆಂದು ವ್ಯಕ್ತಪಡಿಸಿದರು.