ರಾಧೆ….(ಸೌಮ್ಯ ಕೋಠಿ ಮೈಸೂರರ ಭಾವಪೂರ್ಣ ಕವಿತೆ)

ರಾಧೆ………….

ಆಕೆಯದು ನಿಷ್ಕಲ್ಮಶ ಪ್ರೇಮ ಅವಳು ಬಯಸಿದ್ದು ಕೇವಲ ಅವನ ಪ್ರೀತಿಯನ್ನು ||

ಪ್ರತಿ ಉಸಿರಲು ಅವನ ಹೆಸರನ್ನು ಬೇರಿಸಿದವಳು ಅವನ ಉಸಿರಿಗೆ ಹೆಸರಾದವಳು ||

ಅಂಕುಡೊಂಕಿನ ಸಮಾಜದಲ್ಲಿ ಪ್ರೀತಿಯ ಹೆಸರು ಉಳಿಸಿದವಳು ಮಾದರಿಯಾದವಳು ||

ಪ್ರೇಮವೆಂದರೆ ಹೀಗಿರಬೇಕು ಎನ್ನುವುದಕ್ಕಿಂತ ಹೀಗೂ ಇರಬಹುದು ಎಂದವಳು ತೋರಿಸಿದವಳು ||

ಅವಳ ಪ್ರೀತಿಯ ಪರಿ ಅವಳನ್ನು ಪ್ರೀತಿಸಿದ ಕೃಷ್ಣನಿಗೆ ಹೃದಯದ ಬಡಿತವಾಗಿ ಇದ್ದವಳು ||

ಜೀವಿಸಲು ನಿನ್ನ ಹೆಸರು ಒಂದೇ ಸಾಕು ಎಂದು ನಕ್ಕವಳು ಆ ನಗುವಿನಲ್ಲಿ ಪ್ರೀತಿಯ ಕಂಡವಳು||

ಸೌಮ್ಯ ಕೋಠಿ
ಮೈಸೂರು