ಕವಿಸಾಲು
Gm ಶುಭೋದಯ💐 *ಕವಿಸಾಲು* 1. ನೆಮ್ಮದಿಯ ಮಾತಾಡಬೇಡ ಹೃದಯವೇ, ಬಾಲ್ಯದ ಆ ಭಾನುವಾರ ಮತ್ತೆಲ್ಲಿ ಬರುವುದು?! 2. ಹಸಿವು-ಮೃತ್ಯು-ಪ್ರೇಮ; ದೇವರಂತೆ ಕ್ರೂರಿಯೂ… 3. ಪ್ರತಿಯೊಬ್ಬರ ಗಡಿಯಾರವೂ ಬೇರೆ ಬೇರೆ… ಸಮಯ ಕೂಡ! 4. ಅವಳು ಸೂರ್ಯನಂತಿರಬೇಕು; ಕಂಡವರು ನೋಡಿದರೆ ಕಣ್ಣು ಕುರುಡಾಗಬೇಕು… ಚಂದಿರನಂತಿದ್ದರೂ ಅವತ್ತು ಅಮವಾಸ್ಯೆ ಆವರಿಸಿರಬೇಕು! 5. ಸೇಡು ತೀರಿಸಿಕೊಳ್ಳುವುದಕ್ಕಿಂತ ಸೇತುವೆ ಆಗಿಬಿಡಬೇಕು; ನಂಬಿಕೆಯಿಂದ ಹೆಜ್ಜೆಯಿಟ್ಟು ದಾಟುವರು ಜನ ಆಗಲಾದರೂ… – *ಶಿ.ಜು.ಪಾಶ* 8050112067 (9/12/24)