
ಆಪರೇಷನ್ ಕಮಲ ಬೇಡ ಅಂದ್ರು ಮೋದಿ? ;ಆರ್.ಟಿ.ವಿಠಲಮೂರ್ತಿ ಬರಹ
ಆಪರೇಷನ್ ಕಮಲ ಬೇಡ ಅಂದ್ರು ಮೋದಿ? ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಮೊನ್ನೆ ದಿಲ್ಲಿಗೆ ಹೋಗಿದ್ದ ರಾಜ್ಯ ಬಿಜೆಪಿಯ ಟಾಪ್ ಲೀಡರುಗಳಿಗೆ ವರಿಷ್ಟರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವನ್ನು ಯಾವ ಕಾರಣಕ್ಕೂ ಅಲುಗಾಡಿಸುವುದಿಲ್ಲ ಎಂಬುದು ಈ ಸಂದೇಶ. ಅಂದ ಹಾಗೆ ಕೆಲವೇ ಕಾಲದ ಹಿಂದೆ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ವಿಷಯದಲ್ಲಿ ರಾಜ್ಯದ ಕೆಲ ಬಿಜೆಪಿ ನಾಯಕರು ಉತ್ಸುಕರಾಗಿದ್ದರು.ವರಿಷ್ಟರು ಅನುಮತಿ ನೀಡಿದರೆ ಸಾಕು,ಸರ್ಕಾರ ಉರುಳಿಸುವ ಜವಾಬ್ದಾರಿ ನಮ್ಮದು ಅಂತ ಆಪ್ತ ವಲಯಗಳಲ್ಲಿ ರಣೋತ್ಸಾಹ…

ಕುವೆಂಪು ವಿವಿಯಲ್ಲಿ ಸಂವಿಧಾನ ಜಾಗೃತಿ ಜಾಥಾ
*ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಜಾಗೃತಿ ಜಾಥಾ* ಶಂಕರಘಟ್ಟ ಫೆ.19: ಸಂವಿಧಾನ ಕುರಿತು ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಸೋಮವಾರ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಸಂಚರಿಸಿತು. ಭಾರತದ ಸಂವಿಧಾನದ ಹಿರಿಮೆಯನ್ನು ಮತ್ತು ಸಂವಿಧಾನದ ಆಶಯಗಳ ಅರಿವನ್ನು ಮೂಡಿಸುವ ಜಾಥಾವನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವೆಂಟೇಶ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಕುಲಪತಿ ಪ್ರೊ.ಎಸ್.ವೆಂಕಟೇಶ್, ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಎಂ.ಗೋಪಿನಾಥ್, ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ…

ಶಾಹಿ ಗಾರ್ಮೆಂಟ್ಸ್ ನಿಂದ ಶಾಲಾ ಮಕ್ಕಳಿಗೆ ಸೈಕಲ್, ಬ್ಯಾಗ್ ವಿತರಣೆ ನಾಳೆ
ನಾಳೆ ಶಾಹಿ ಎಕ್ಸ್ ಪೋರ್ಟ್ ನಿಂದ ಶಾಲಾ ಮಕ್ಕಳಿಗೆ ಸೈಕಲ್, ಕಿಟ್ ವಿತರಣೆ ಸೇರಿದಂತೆ ಮಹತ್ತರ ಸೇವಾ ಕಾರ್ಯಕ್ರಮ ಶಿವಮೊಗ್ಗ,ಫೆ.19: ಮಾಚೇನಹಳ್ಳಿಯಲ್ಲಿರುವ ಶಾಹಿ ಎಕ್ಸ್ ಪೋರ್ಟ್ ಪ್ರವೈಟ್ ಲಿಮಿಟೆಡ್ ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಜೊತೆಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ ಎಂದು ಶಾಹಿ ಎಕ್ಸ್ ಪೋರ್ಟ್ ನ ಕಮ್ಯುನಿಕೇಷನ್ ಮ್ಯಾನೇಜರ್ ಶ್ರೀಮತಿ ನಿವೇದಿತಾ ತಿಳಿಸಿದರು. ಇಂದು ಮದ್ಯಾಹ್ನ ಶಾಹಿ ಎಕ್ಸ್ ಪೋರ್ಟ್ ಆವರಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಅದರಂತೆ ಅನೇಕ ಸಮಾಜಮುಖಿ…

ಫೆ.27; ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ; ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ (ಪತ್ರಿಕಾಗೋಷ್ಠಿಯ ವಿವರಗಳು)
ಫೆ.27ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ; ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ (ಪತ್ರಿಕಾಗೋಷ್ಠಿಯ ವಿವರಗಳು) ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಫೆ.27 ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರು ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನಕ್ಕೆ ಸುಮಾರು 2 ಲಕ್ಷ ಜನ ನೌಕರರು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಆಶಯ ನುಡಿಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನುಡಿಯಲಿದ್ದಾರೆ. ಅಧ್ಯಕ್ಷತೆ- ಸಿ.ಎಸ್.ಷಡಾಕ್ಷರಿ ಸಮ್ಮೇಳನದಲ್ಲಿ ಭಾಗವಹಿಸುವ ನೌಕರರಿಗೆ ಆಡಳಿತದಲ್ಲಿ ಕಾರ್ಯಕ್ಷಮತೆ ಹಾಗೂ ನೌಕರರ…

ಮಹಾನಗರ ಪಾಲಿಕೆ ಚುನಾವಣೆಗೆ ಕೆ.ಬಿ.ಪ್ರಸನ್ನ ಕುಮಾರ್ ಒತ್ತಾಯ
*ಮಾಜಿ ಶಾಸಕರೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಆಗಿರುವ ಕೆ.ಬಿ.ಪ್ರಸನ್ನ ಕುಮಾರ್ ರವರ ಪತ್ರಿಕಾಗೋಷ್ಠಿ* ಶಿವಮೊಗ್ಗ ಮಹಾನಗರ ಪಾಲಿಕೆ ಅವಧಿ ಮುಗಿದು ನಾಲ್ಕು ತಿಂಗಳಾದರೂ ಸರ್ಕಾರ ಗಮನ ಹರಿಸ್ತಿಲ್ಲ ಶುಗರ್ ಫ್ಯಾಕ್ಟರಿ ಮಾಲೀಕತ್ವದ ಜಮೀನಲ್ಲಿನ ಕೃಷಿಕರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಲಕ್ಷಾಂತರ ರೂ ವಸೂಲಿ ನಡೀತಿದೆ. ಜಿಲ್ಲಾಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳನ್ನ ಕಳೆದ 20 ವರ್ಷಗಳ ಹಿಂದೆಯೇ ಸೇರಿಸಿಕೊಂಡಿದ್ದರೂ ಯಾವುದೇ ಅಭಿವೃದ್ಧಿ ಆಗಿಲ್ಲ ಸೋಗಾನೆ, ಗೋವಿಂದಾಪುರ, ಅನುಪಿನಕಟ್ಟೆ ಗ್ರಾಮ ಪಂಚಾಯ್ತಿಗಳನ್ನು ಸೇರಿಸಿಕೊಳ್ಳಲು ಆಯುಕ್ರಿಗೆ…

ಏನಿದು ಪೊಲೀಸರ ಫುಟ್ ಪೆಟ್ರೋಲಿಂಗ್?
*ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ* ಓಲ್ಡ್ ಮಂಡ್ಲಿ, ನ್ಯೂ ಮಂಡ್ಲಿ, ಕುರುಬರ ಪಾಳ್ಯ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, *ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ* ಬಸವನ ಗುಡಿ, ಜಯನಗರ, ಎಎ ಕಾಲೋನಿ, ವಿಕಾಸ ಶಾಲೆ ಹತ್ತಿರ, ರಾಗಿಗುಡ್ಡ, ಆಯನೂರು, ಹಾರ್ನಳ್ಳಿ,* ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ* ಸೀಗೆ ಬಾಗಿ, ಭೋವಿ ಕಾಲೋನಿ, ಉಜನಿಪುರ, ವೀರಪುರ, ಅರೇಬಿಳಚಿ ಕ್ಯಾಂಪ್, *ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ* ಭದ್ರಾಪುರ, ಸಿದ್ದಿನ ಪುರ, ಆನವಟ್ಟಿ *ಸಾಗರ ಉಪ ವಿಭಾಗ ವ್ಯಾಪ್ತಿಯ*…