ಶವಪೆಟ್ಟಿಗೆಯಲ್ಲಿ ಮಲಗಿದ ಪೋಪ್ ಫ್ರಾನ್ಸಿಸ್; ಫಸ್ಟ್ ಫೋಟೋ!*
*ಶವಪೆಟ್ಟಿಗೆಯಲ್ಲಿ ಮಲಗಿದ ಪೋಪ್ ಫ್ರಾನ್ಸಿಸ್; ಫಸ್ಟ್ ಫೋಟೋ!* ಏಪ್ರಿಲ್ 21ರಂದು ನಿಧನರಾದ ಪೋಪ್ ಫ್ರಾನ್ಸಿಸ್ (Pope Francis) ಅವರ ಮೊದಲ ಫೋಟೋಗಳನ್ನು ವ್ಯಾಟಿಕನ್ ಬಿಡುಗಡೆ ಮಾಡಿದೆ. ಈ ಫೋಟೋಗಳಲ್ಲಿ ಅವರು ಮರದ ಶವಪೆಟ್ಟಿಗೆಯಲ್ಲಿ ಕೆಂಪು ವಸ್ತ್ರದೊಂದಿಗೆ, ಕೈಯಲ್ಲಿ ಜಪಮಾಲೆ ಹಿಡಿದ ಭಂಗಿಯಲ್ಲಿ ಮಲಗಿರುವುದನ್ನು ನೋಡಬಹುದು. ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಪೋಪ್ ಫ್ರಾನ್ಸಿಸ್ ಅವರ ಶವ ಪೆಟ್ಟಿಗೆಯ ಎದುರು ಪ್ರಾರ್ಥಿಸುತ್ತಿರುವುದನ್ನು ನೋಡಬಹುದು. ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ ಎಂದು ವ್ಯಾಟಿಕನ್ ತಿಳಿಸಿದೆ….