ಧರ್ಮಸ್ಥಳದಲ್ಲಿ ಯುಗಾದಿ ಸ್ನೇಹಪರ್ವ – 2 ಯಶಸ್ವಿ!
ಧರ್ಮಸ್ಥಳದಲ್ಲಿ ಯುಗಾದಿ ಸ್ನೇಹಪರ್ವ – 2 ಯಶಸ್ವಿ! ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ “ಯುಗಾದಿ ನವ ಪಲ್ಲವಕೆ ನಾಂದಿ” ಸ್ನೇಹ ಪರ್ವ- 2 ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮ ಬೆಳಿಗ್ಗೆ ಶ್ರೀ ಗಣಪತಿ ದೇವರ ಪೂಜೆಯಿಂದ ಪ್ರಾರಂಭಗೊಂಡಿತು. ನಂತರ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಭಾಧ್ಯಕ್ಷರಾದ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ಇದೇ ವೇಳೆ ಬಳಗದ ಸದಸ್ಯರಿಗೆ ಅಭಿನಂದನೆ, ಹಾಗೂ ಸಕ್ರಿಯ ಬರಹಗಾರರಿಗೆ ಯುಗಾದಿ ಮಾಣಿಕ್ಯ, ಸಿರಿಮನದ ಸಿರಿವಂತರು,…


