ಕೃಷಿ ವಿದ್ಯಾರ್ಥಿಗಳಿಂದ ರಸಗುಲ್ಲ ಹಾಗೂ ರಸಮಲೈ ತಯಾರಿಕೆ..!
ಕೃಷಿ ವಿದ್ಯಾರ್ಥಿಗಳಿಂದ ರಸಗುಲ್ಲ ಹಾಗೂ ರಸಮಲೈ ತಯಾರಿಕೆ..! ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಕುರಿತು ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಸಗುಲ್ಲ ಮತ್ತು ರಸಮಲೈ ಎಂದರೆ ಏನು,ಹೇಗೆ ಮಾಡುವುದು ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿದರು. ರಸಗುಲ್ಲ ಒಂದು ಹಾಲಿನ ಮೌಲ್ಯವರ್ಧನೆಯಾಗಿದೆಇದನ್ನು ತಯಾರಿಸಲು ಹಾಲನ್ನು ಕುದಿಸಿ ಅದಕ್ಕೆ ನಿಂಬೆ…