ಕುಂಸಿಯಲ್ಲಿ ಕೊಲೆ* *ಇಬ್ಬರ ಬಂಧನ* *ಕೊಲೆಗೆ ಅನೈತಿಕ ಸಂಬಂಧ ಕಾರಣವೇ?*
*ಕುಂಸಿಯಲ್ಲಿ ಕೊಲೆ* *ಇಬ್ಬರ ಬಂಧನ* *ಕೊಲೆಗೆ ಅನೈತಿಕ ಸಂಬಂಧ ಕಾರಣವೇ?* ಕುಂಸಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. 32 ವರ್ಷದ ಕುರುಬ ಸಮುದಾಯದ ವಾಸು ಕೊಲೆಯಾದ ವ್ಯಕ್ತಿ. ಇಬ್ಬರು ಪರಿಚಯಸ್ಥರೇ ಮಚ್ಚಿನಿಂದ ಆತನನ್ನು ಕೊಚ್ಚಿ ಕೊಂದಿದ್ದಾರೆ. ಪ್ರಾಥಮಿಕ ಕಾರಣ ಅಕ್ರಮ ಸಂಬಂಧವಾಗಿರಬಹುದು, ಇನ್ನೂ ದೃಢಪಟ್ಟಿಲ್ಲ ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.