ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ಸಾವು*
*ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ಸಾವು* ಅಕ್ಟೋಬರ್ 2 ರ ಗಾಂಧಿ ಜಯಂತಿಯ ದಿನ ಸಂಜೆ ಶಿವಮೊಗ್ಗದ ಮಾರ್ನವಮಿ ಬೈಲ್( ಆರ್ ಎಂ ಎಲ್ ನಗರ) ನಲ್ಲಿ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆಗೊಳಗಾಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಮ್ಜದ್(34) ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ ಎಂದು ಆಸ್ಪತ್ರೆ ಮೂಲಗಳು ದೃಢೀಕರಿಸಿವೆ. ಚಾಕುವಿನಿಂದ ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ನ ಕೈ ಬೆರಳುಗಳು ಕತ್ತರಿಸಲ್ಪಟ್ಟಿದ್ದವು. ಹೊಟ್ಟೆಗೆ ತಿವಿದಿದ್ದರಿಂದ ಕಿಡ್ನಿ ಮತ್ತು ಕರುಳು ಕತ್ತರಿಸಲ್ಪಟ್ಟಿತ್ತು. ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅಮ್ಜದ್ ಕೊನೆಯುಸಿರೆಳೆದಿದ್ದಾನೆ….