ಆರ್.ಟಿ.ವಿಠಲಮೂರ್ತಿ- ವಿಜಯ ಯಾತ್ರೆ ಇವರಿಗೆಲ್ಲ ಮಾತ್ರೆ- ವಿಜಯೇಂದ್ರ ಲೆಕ್ಕಾಚಾರ ಏನು?- ಅಮಿತ್ ಷಾ ಆಟಕ್ಕೇನು ಕಾರಣ?- ಬದಲಾದ ಐರನ್ ಮ್ಯಾನ್ ಪ್ಲಾನು- ಇವರಿಗೆ ಜೆಡಿಎಸ್ ಏಕೆ ಬೇಕು?
ವಿಜಯ ಯಾತ್ರೆ ಇವರಿಗೆಲ್ಲ ಮಾತ್ರೆ ಮೊನ್ನೆ ಕರ್ನಾಟಕ ಬಿಜೆಪಿಯ ಉಸ್ತುವಾರಿ ರಾಧಾ ಮೋಹನ ದಾಸ್ ಅಗರ್ವಾಲ್ ಅವರನ್ನು ಸಂಪರ್ಕಿಸಿದ ರಾಜ್ಯ ಬಿಜೆಪಿಯ ನಾಯಕರೊಬ್ಬರು ಕಂಪ್ಲೇಂಟುಗಳ ಸುರಿಮಳೆ ಸುರಿಸಿದ್ದಾರೆ.ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇಡುತ್ತಿರುವ ಹೆಜ್ಜೆ ನಮಗೆ ಮುಳುವಾಗಲಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ವಿಜಯೇಂದ್ರ ನೇತೃತ್ವದಲ್ಲಿ ಆರಂಭವಾಗಿರುವ ಜನಾಕ್ರೋಶ ಯಾತ್ರೆ ಒಂದು ಮಟ್ಟದ ಹವಾ ಎಬ್ಬಿಸಿರುವುದು ನಿಜ. ಏಕತಾನತೆಯ ಹೋರಾಟಗಳಿಂದ ಮಂಕಾಗಿದ್ದ ರಾಜ್ಯ ಬಿಜೆಪಿಗೆ ವಿಜಯೇಂದ್ರ ನೇತೃತ್ವದ ಜನಾಕ್ರೋಶ…