ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ಸುಪ್ರೀಂ ಕೋರ್ಟಲ್ಲಿ ವಜಾ* – *ಚುನಾವಣೆಯಲ್ಲಿ ಸೋತಾಗ ಇವಿಎಂ ತಿರುಚಲಾಗುತ್ತದೆ ಎನ್ನುತ್ತೀರಿ, ಗೆದ್ದಾಗ ಏನೂ ಹೇಳುವುದಿಲ್ಲ ಎಂದ ವಿಭಾಗೀಯ ಪೀಠ*

*ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ಸುಪ್ರೀಂ ಕೋರ್ಟಲ್ಲಿ ವಜಾ* – *ಚುನಾವಣೆಯಲ್ಲಿ ಸೋತಾಗ ಇವಿಎಂ ತಿರುಚಲಾಗುತ್ತದೆ ಎನ್ನುತ್ತೀರಿ, ಗೆದ್ದಾಗ ಏನೂ ಹೇಳುವುದಿಲ್ಲ ಎಂದ ವಿಭಾಗೀಯ ಪೀಠ* ಮತಯಂತ್ರಗಳ (ಇವಿಎಂ) ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಬ್ಯಾಲೆಟ್ ಪೇಪರ್ ಬದಲು ಇವಿಎಂ ಜಾರಿಗೊಳಿಸಿದ ಕ್ರಮ ಪ್ರಶ್ನಿಸಿ ಡಾ.ಕೆ.ಎ.ಪೌಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಂ ನಾಥ್ ಮತ್ತು ನ್ಯಾಯಮೂರ್ತಿ ಪಿ.ಬಿ.ವರಾಳೆ…

Read More

ಸಂವಿಧಾನ ಪೀಠಿಕೆ ಪ್ರತಿಷ್ಟಾಪನೆಗೆ ಸಚಿವರಿಂದ ಅಡಿಗಲ್ಲು;ಸಂವಿಧಾನದ ಮೂಲಧ್ಯೇಯ ಎಲ್ಲರಿಗೂ ಒಂದೇ ಕಾನೂನು, ಸರ್ವ ಧರ್ಮ ಸಮನ್ವತೆ

ಸಂವಿಧಾನ ಪೀಠಿಕೆ ಪ್ರತಿಷ್ಟಾಪನೆಗೆ ಸಚಿವರಿಂದ ಅಡಿಗಲ್ಲು; ಸಂವಿಧಾನದ ಮೂಲಧ್ಯೇಯ ಎಲ್ಲರಿಗೂ ಒಂದೇ ಕಾನೂನು, ಸರ್ವ ಧರ್ಮ ಸಮನ್ವತೆ ಶಿವಮೊಗ್ಗ ಭಾರತೀಯರೆಲ್ಲರೂ ಒಂದೇ ಎಂಬ ಐಕ್ಯತೆ, ಸಮಗ್ರತೆ, ಭಾವೈಕ್ಯತೆ ಸಾರುವ ಸಂವಿಧಾನದ ಪೀಠಿಕೆಯನ್ನು ಪ್ರತಿಷ್ಟಾಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದರು. ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಅಲ್ಲಮ ಪ್ರಭು ಮೈದಾನದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ 10*6 ಅಡಿ ಅಳತೆಯ ಮುದ್ರಿತ ಸಂವಿಧಾನ ಪೀಠಿಕೆಯನ್ನು…

Read More

ಕುವೆಂಪು ವಿವಿಯಲ್ಲಿ 75ನೇ ಸಂವಿಧಾನ ದಿನಾಚರಣೆಸಂವಿಧಾನದ ಆಶಯಗಳು ಭಾವನಾತ್ಮಕ ಆಚರಣೆಗೆ ಸೀಮಿತವಾಗದಿರಲಿ: ಡಾ. ಎಂ. ಎಸ್. ಶೇಖರ್

ಕುವೆಂಪು ವಿವಿಯಲ್ಲಿ 75ನೇ ಸಂವಿಧಾನ ದಿನಾಚರಣೆ ಸಂವಿಧಾನದ ಆಶಯಗಳು ಭಾವನಾತ್ಮಕ ಆಚರಣೆಗೆ ಸೀಮಿತವಾಗದಿರಲಿ: ಡಾ. ಎಂ. ಎಸ್. ಶೇಖರ್ ಶಂಕರಘಟ್ಟ ಅಂಬೇಡ್ಕರ್ ಅವರ ವಿಚಾರಧಾರೆಗಳು ಮತ್ತು ಸಂವಿಧಾನದ ಆಶಯಗಳನ್ನು ಭಾವನಾತ್ಮಕ ಮಾತುಗಳಿಗೆ ಸೀಮಿತಗೊಳಿಸದೆ, ಬದ್ಧತೆಯೊಂದಿಗೆ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆಯನ್ನು ನಾವೆಲ್ಲರೂ ನಿರ್ವಹಿಸಬೇಕೆಂದು ಸಾಹಿತಿ ಮತ್ತು ಚಿಂತಕ ಡಾ. ಎಂ. ಎಸ್. ಶೇಖರ್ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರವು ಜ್ಞಾನಸಹ್ಯಾದ್ರಿಯ ಬಸವ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ 75ನೇ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ…

Read More

ಸಂವಿಧಾನದ ಆಶಯದಂತೆ ನಡೆದಲ್ಲಿ ಸಂತೋಷ-ನೆಮ್ಮದಿ ಸಾಧ್ಯ : ಬಲ್ಕೀಶ್ ಬಾನು*

*ಸಂವಿಧಾನದ ಆಶಯದಂತೆ ನಡೆದಲ್ಲಿ ಸಂತೋಷ-ನೆಮ್ಮದಿ ಸಾಧ್ಯ : ಬಲ್ಕೀಶ್ ಬಾನು* ಶಿವಮೊಗ್ಗ ಸಮಾನತೆ, ಸೌಹಾರ್ದತೆ, ಭ್ರಾತೃತ್ವ, ಐಕ್ಯತೆ, ಭಾವೈಕ್ಯತೆ, ಸಮಗ್ರತೆಯಿಂದ ಭಾರತೀಯರೆಲ್ಲರೂ ಇರಬೇಕೆಂಬ ಆಶಯ ಹೊತ್ತ ನಮ್ಮ ಸಂವಿಧಾನದ ಪೀಠಿಕೆಯನ್ನು ನಾವೆಲ್ಲ ಪಾಲಿಸಿದರೆ ಸಂತೋಷ ಮತ್ತು ನೆಮ್ಮದಿಯಿಂದ ಇರಲು ಸಾಧ್ಯ ಎಂದು ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ಪ್ರೀತಿ ಮತ್ತು ಭೋಜನ ಹೆಚ್ಚಾದರೆ… ಜನ ಅಲ್ಲೇ ಬಿಟ್ಟು ಮುಂದಕ್ಕೆ ಸಾಗಿಬಿಡುತ್ತಾರೆ! 2. ಸಿಹಿ ಸುಳ್ಳು ಮತ್ತು ಕಹಿ ಸತ್ಯ ಇಬ್ಬರಿಗೂ ಯುದ್ಧ; ಸತ್ಯ ಸೋತೂ ಗೆಲ್ಲುತ್ತೆ ಸುಳ್ಳು ಗೆದ್ದೂ ಸೋಲುತ್ತೆ! 3. ಕಳೆದು ಕೊಳ್ಳದೇ ಏನೂ ಸಿಗುವುದಿಲ್ಲ ಇಲ್ಲಿ; ನಿಮ್ಮ ಸ್ವರ್ಗವೂ ಕೂಡ ಮರಣ ಬಯಸುತ್ತೆ! 4. ನನಗೆ ನನ್ನ ಭೇಟಿ ಮಾಡಬೇಕಿದೆ ಹೃದಯವೇ, ಸಿಕ್ಕರೆ ತಿಳಿಸು ಎಲ್ಲಾದರೂ… – *ಶಿ.ಜು.ಪಾಶ* 8050112067 (26/11/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಬದುಕು ಎಲ್ಲರಿಗೂ ದಕ್ಕಿದೆ; ಕೆಲವರಿಗೆ ದುಬಾರಿಯಾಗಿ, ಕೆಲವರಿಗೆ ಉಚಿತವಾಗಿ! 2. ಯಾರಿಗೆ ನೋಡಿ ಸಂತಸವಾಗುತ್ತೋ ಅವರೇ ಹೆಚ್ಚು ಅಳಿಸುವುದು; ಕಣ್ಣೀರ ಜಗತ್ತಿಗೆ ಕಳಿಸುವುದು… 3. ಕಳೆದ ಕಾಲ ಕೊಳ್ಳುವ ಶ್ರೀಮಂತನ ಹುಡುಕುತ್ತಿರುವೆ… – *ಶಿ.ಜು.ಪಾಶ* 8050112067 (25/11/24)

Read More

ಜಿಲ್ಲಾ ಸರ್ಕಾರಿ ನೌಕರರ ಸಂಘದ 66 ನೂತನ ನಿರ್ದೇಶಕರಿಗೆ ಸಚಿವ ಮಧು ಬಂಗಾರಪ್ಪರಿಂದ ಸನ್ಮಾನ

ಜಿಲ್ಲಾ ಸರ್ಕಾರಿ ನೌಕರರ ಸಂಘದ 66 ನೂತನ ನಿರ್ದೇಶಕರಿಗೆ ಸಚಿವ ಮಧು ಬಂಗಾರಪ್ಪರಿಂದ ಸನ್ಮಾನ ಇತ್ತೀಚೆಗೆ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಎಲ್ಲಾ ನೂತನ ನಿರ್ದೇಶಕರುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ  ಮಧು ಬಂಗಾರಪ್ಪನವರು ಇಂದು ಸನ್ಮಾನಿಸಿದರು. ಮುಂದಿನ ದಿನಗಳಲ್ಲಿ ನೌಕರರ ಕ್ಷೇಮಾಭಿವೃದ್ಧಿಗಾಗಿ ಎಲ್ಲಾ ನಿರ್ದೇಶಕರುಗಳು ಒಗ್ಗಟ್ಟಿನಿಂದ ತಮ್ಮ ಇಲಾಖಾವಾರು ಸಮಸ್ಯೆಗಳಿಗೆ ಸ್ಪಂದಿಸಿ ಮುಕ್ತ ಮನಸ್ಸಿನೊಂದಿಗೆ ನನ್ನೊಂದಿಗೆ ಚರ್ಚಿಸಿ ಎಂದು ಶುಭ ಹಾರೈಸಿದರು. ಚುನಾಯಿತರಾದ ಎಲ್ಲಾ 66 ನಿರ್ದೇಶಕರುಗಳು ಭಾಗವಹಿಸಿ ಮುಂದಿನ ದಿನಗಳಲ್ಲಿ ತಮ್ಮ ನೇತೃತ್ವದಲ್ಲಿ ಯಾವುದೇ…

Read More

ಶಿವಮೊಗ್ಗ ಹಜ್ರತ್ ಸೈಯದ್ ಶಾ ಅಲೀಮ್ ದರ್ಗಾದಲ್ಲಿ ನಾಳೆಯಿಂದ ಮೂರು ದಿನಗಳ ಉರುಸ್

ಶಿವಮೊಗ್ಗ ಹಜ್ರತ್ ಸೈಯದ್ ಶಾ ಅಲೀಮ್ ದರ್ಗಾದಲ್ಲಿ ನಾಳೆಯಿಂದ ಮೂರು ದಿನಗಳ ಉರುಸ್ ಶಿವಮೊಗ್ಗದ ಹಜ್ರತ್ ಸೈಯದ್ ಶಾ  ಅಲೀಮ್ ದಿವಾನ್  ಬಾಬಾ ದರ್ಗಾ ದಲ್ಲಿ ಮೂರು ದಿನಗಳ ಉರುಸ್ ಸಮಾರಂಭ ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ರೆಹಮಾನ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನ.24,25ಮತ್ತು 26ರಂದು ಕಾರ್ಯಕ್ರಮ ಏರ್ಪಡಿಸಲಾಗಿದ್ದು, 24 ಭಾನುವಾರ ರಂದು ಮಧ್ಯಾಹ್ನ 3 ಗಂಟೆಯಿಂದ ದರ್ಗಾ ಸಂದಲ್ ಮೆರವಣಿಗೆ ಪ್ರಾರಂಭವಾಗಲಿದ್ದು ನಗರದ ಟ್ಯಾಂಕ್ ಮೊಹಲ್ಲ, ಬಿ ಎಚ್ ರಸ್ತೆ ,  ಎಂಕೆ ಕೆ ರೋಡ್, ಗಾಂಧಿಬಜಾರ್, ನೆಹರು ರಸ್ತೆ ಮುಖಾಂತರವಾಗಿ ದರ್ಗಾದಲ್ಲಿ ಮುಕ್ತಾಯವಾಗಲಿದೆ. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ   , ಧರ್ಮ ಗುರುಗಳ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ. ನ.25 ರಂದು ಬೆಳಗ್ಗೆ 11ರಂದು ದರ್ಗಾ ಆವರಣದಲ್ಲಿ ಮುಸ್ಲಿಂ ವಧು-ವರರ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ವಿವಾಹದಲ್ಲಿ ಸುಮಾರು 15 ವಧು-ವರರ ಮದುವೆ ನಡೆಯಲಿದೆ ನಂತರ ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಮರುದಿನ ನವೆಂಬರ್ 26ರಂದು ಸೂಫಿ ಕವಾಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ . ಈ ಎಲ್ಲಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದರ್ಗಾ ಉರಸ್ ಕಮಿಟಿಯ ಅಧ್ಯಕ್ಷರಾದಂತಹ ಶ್ರೀ ಸೈಯದ್ ಮುಝಮ್ಮಿಲ್ ರವರ ನೇತೃತ್ವದಲ್ಲಿ ಹಾಗೂ ದರ್ಗಾ ಉರುಸ್ ಕಮಿಟಿ ಯ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದರು, ಹಾಗೂ ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯದ ದರ್ಗಾಗಳ ಧರ್ಮ ಗುರುಗಳು, ಸೂಫಿ ಸಂತರು, ದರ್ಗಾ ಶಾಪಿಂಗ್ ಕಾಂಪ್ಲೆಕ್ಸ್  ಮ್ಯಾನೇಜ್ಮೆಂಟ್ ಕಮಿಟಿ ಯ ಅಧ್ಯಕ್ಷರಾದಂತಹ  ಕೇಬಲ್ ಫೈರೋಜ್ ರವರು ಹಾಗೂ ಕಮಿಟಿಯ ಸದಸ್ಯರು ನಗರದ ಮುಸ್ಲಿಂ ಮುಖಂಡರು  ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದರ್ಗಾ ಉರುಸ್ ಕಮಿಟಿಯ ಕಾರ್ಯದರ್ಶಿ ರೆಹಮಾನ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More