ಸಾಕು ನಾಯಿಯನ್ನು ಭೀಕರವಾಗಿ ಕೊಂದ ಮನೆ ಕೆಲಸದವಳು*
*ಸಾಕು ನಾಯಿಯನ್ನು ಭೀಕರವಾಗಿ ಕೊಂದ ಮನೆ ಕೆಲಸದವಳು* ಮನೆ ಕೆಲಸಾದಳು ಲಿಫ್ಟ್ನಲ್ಲಿ ಸಾಕು ನಾಯಿಯನ್ನು ಮನಬಂದಂತೆ ಬಟ್ಟೆ ಸೆಳೆದಂತೆ ಎತ್ತಿ ಬಿಸಾಡಿ ಕ್ರೂರವಾಗಿ ಹತ್ಯೆಗೈದಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಣ್ಣೂರು ರಸ್ತೆಯ ಶೋಭಾ ಡ್ರೀಮ್ ಅಪಾರ್ಟ್ಮೆಂಟ್ನ ನಿರ್ದಯ ಮನೆಕೆಲಸದಾಳು ಪುಷ್ಪಲತಾ ಈ ಕೃತ್ಯ ಎಸಗಿದ್ದು, ಮನೆ ಮಾಲಿಕೆ ಕೆ.ಆರ್.ರಾಶಿಕಾ ದೂರಿನ ಮೇರೆಗೆ ಆಕೆಯನ್ನು ಬಂಧಿಸಿ ಎಫ್ಐಆರ್ ದಾಖಲಿಸಲಾಗಿದೆ. ಮನೆ ಮಾಲಿಕರು ಹೊರ ಹೋಗಿದ್ದಾಗ ನಾಯಿಯನ್ನು ಎಳೆತಂದು ಲಿಫ್ಟ್ನಲ್ಲಿ ಪುಷ್ಪಲತಾ ಕ್ರೌರ್ಯ ಮೆರೆದಿದ್ದಾಳೆ. ಕೆಲ…


