ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಾಗುತ್ತಿದ್ದರೆ ಮುಂದೆ ಕೆಟ್ಟ ಕಾಲವೂ ಹಿಂದೆ ಸರಿಯುವುದು 2. ಬಾಲ್ಯದಲ್ಲಿ ನಾನೂ ಬಹಳ ಶ್ರೀಮಂತ ನನ್ನದೇ ಹಡಗುಗಳು ಮಳೆ ನೀರಲ್ಲಿ ಸಾಗುತ್ತಿದ್ದವು! – *ಶಿ.ಜು.ಪಾಶ* 8050112067 (28/7/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಅದೊಂದು ಸಂಜೆಯಾದರೂ ನೆನಪಿಸಿಕೋ ನನ್ನನ್ನು… ಬದುಕಿದ್ದೇವೆಂದು ಗೊತ್ತಾಗಲಿ ಇಬ್ಬರೂ ಈ ಜಗತ್ತಿಗೆ! 2. ಮಾಯುವ ಗಾಯ ಅಪಘಾತದ ನೆನಪನ್ನೂ ಕೊಂಡೊಯ್ಯಬೇಕಿತ್ತು! – *ಶಿ.ಜು.ಪಾಶ* 8050112067 (26/7/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಂಬಂಧಿಗಳ ಸಂಬಂಧಗಳೆಲ್ಲ ಈಗೀಗ ಸೀಮಿತ ಮದುವೆಗೂ ಶವಯಾತ್ರೆಗೂ… 2. ಲೆಕ್ಕವಿಡುತ್ತಿದ್ದೇವೆ ನಾವು ವರ್ಷಗಳದ್ದೆಲ್ಲ… ಕ್ಯಾಲೆಂಡರುಗಳ ಹೊತ್ತು ಮೆರೆದ ಮೊಳೆಯೋ ಸುಮ್ಮನಿದೆ ಕಾಲವೇ ಇಲ್ಲ ಎಂಬಂತೆ! – *ಶಿ.ಜು.ಪಾಶ* 8050112067 (24/7/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಒಮ್ಮೆ ಕಲ್ಲು ಒಮ್ಮೆ ಕನ್ನಡಿಯು ಈ ಬದುಕು… 2. ಹೀಗೂ ಯೋಚಿಸಬಹುದು; ಬುದ್ಧ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗುವ ಬದಲು ಅವನ ಹೆಂಡತಿಯೇ ಗಂಡ ಮಕ್ಕಳನ್ನು ಬಿಟ್ಟು ಹೋಗಿದ್ದರೆ… ಬುದ್ಧನ ಬದಲು ಜಗತ್ತಿಗೆ ಬುದ್ದಿ ಸಿಗುತ್ತಿತ್ತಾ? – *ಶಿ.ಜು.ಪಾಶ* 8050112067 (23/7/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಜನ ವಿಚಿತ್ರ ಇಲ್ಲಿ; ಮುಗುಳ್ನಕ್ಕರೆ ಉರಿಯುವರು ಸುಮ್ಮನಿದ್ದರೆ ಪ್ರಶ್ನಿಸುವರು 2. ಒಂದು ಹನಿ ಸುಖಕ್ಕಾಗಿ ಅದೆಷ್ಟೊಂದು ದುಃಖಗಳನ್ನು ಹಿಂಡಬೇಕಾಯ್ತು… – *ಶಿ.ಜು.ಪಾಶ* 8050112067 (18/7/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಹೃದಯವೇ, ಮಾತಷ್ಟೇ ಚುಚ್ಚುವುದಿಲ್ಲ; ಮೌನವೂ ಬಹಳ ಗಂಭೀರ ಗಾಯ ಮಾಡುತ್ತೆ! 2. ಕನ್ನಡಿಯಲ್ಲಿರೋ ಮುಖಕ್ಕೆ ಸಂತೈಸುತ್ತಿದ್ದೇನೆ… – *ಶಿ.ಜು.ಪಾಶ* 8050112067 (16/7/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1 ಜೀವನದಲ್ಲಿ ಅತ್ಯಂತ ದೊಡ್ಡ ಕಪಾಳ ಮೋಕ್ಷ ಮಾಡುವುದು ಈ ನಂಬಿಕೆಯೇ! 2 ಕೆಲವು ಸಂಬಂಧಗಳು ಬಾಡಿಗೆ ಮನೆಯಂತೆ… ಯಾವತ್ತಿಗೂ ಸ್ವಂತದ್ದಾಗಲಿಲ್ಲ! – *ಶಿ.ಜು.ಪಾಶ* 8050112067 (14/7/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ದೇವರೆಂಬುದು ಮನುಷ್ಯನನ್ನು ಬದಲಾಯಿಸಲು ಆಗಲೇ ಇಲ್ಲ ಇಂದಿಗೂ… ಮನುಷ್ಯನೋ ಎಷ್ಟೊಂದು ದೇವರುಗಳ ಬದಲಾಯಿಸಿಬಿಟ್ಟ! 2. ಯಾರು ಪ್ರಾರ್ಥಿಸುತ್ತಿದ್ದಾರೋ ನನಗಾಗಿ? ಮುಳುಗುವಾಗೆಲ್ಲ ಎತ್ತೊಯ್ದು ದಡದಲ್ಲಿ ನಿಲ್ಲಿಸಿಬಿಡುತ್ತೆ ಸಮುದ್ರವೇ… – *ಶಿ.ಜು.ಪಾಶ* 8050112067 (11/7/2025)

Read More