ಅಶ್ವತ್ಥ್  ಕಲ್ಲೇದೇವರಹಳ್ಳಿ ಅಂಕಣ- ರಸ್ತೆ ನದಿ ಮರ ನೆರಳು ಇವಿಷ್ಟೇ ಡೊಂಕು ಮನಸ್ಸುಗಳು..?

ಬದುಕಿನ ಅನೇಕ ಮಜಲುಗಳಲ್ಲಿ ನಮ್ಮ ದೃಷ್ಟಿಕೋನಗಳು ಕಾಲ ಕಾಲಕ್ಕೆ ಬದಲಾಗುವುದು ಎಷ್ಟು ಸತ್ಯವೂ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಅಷ್ಟೇ ಸತ್ಯ ಹೀಗಿರುವಾಗ ನಮ್ಮ ನಡುವಿನ ಸಂಬಂಧಗಳು ತಿದ್ದಿ ತೀಡಿದಷ್ಟು ಡೊಂಕಾಗಿಯೇ ಉಳಿದುಬಿಡುವುದು ಮತ್ತೊಂದು ರೀತಿಯ ವಿಪರ್ಯಾಸ. ಯಾವಾಗಲೋ ಕರಗಿ ಹೋಗುವ ಮೇಣದಬತ್ತಿಗೆ  ಅಡ್ಡಲಾಗಿ ಏನನ್ನಾದರೂ ಮರೆಮಾಚುತ್ತೇವೆ. ಇದರ ಉದ್ದೇಶ ಬೆಳಕು ಇಡೀ ಕೋಣೆಗೆ ಆವರಿಸುತ್ತದೆ ಅನ್ನುವುಕ್ಕಿಂತ ಆ ಮೇಣದಬತ್ತಿಯ ಕ್ಷಣಕಾಲದ ಜೊತೆಗಾರಿಕೆ ಕತ್ತಲೆಯ ಭಯವನ್ನು ಹೋಗಲಾಡಿಸಿ ಒಂದಷ್ಟು ಧೈರ್ಯ ಮತ್ತು ಭರವಸೆಯನ್ನು ಕೊಡುತ್ತದೆ. ಬೆಳಕಿನ ಜೊತೆ ಬದುಕುತ್ತಿದ್ದೇವೆನ್ನುವ…

Read More

ಸಾಸ್ವೆಹಳ್ಳಿ ರಂಗರಾಜ್ ರ ಹೊಸ ಕವಿತೆ ‘ಮಾಯಾವಿ’ ನಿಮಗಾಗಿ…

*ಮಾಯಾವಿ* “””””””””””””””” ಗೆಳತಿ ಮೊದಲ ನೋಟದಲೇ ದಿಟ್ಟಿಸಿ ನಂತರ ಮೋಹಿಸಿ ನಿರಂತರ ಪ್ರೀತಿಸಿ ಅರ್ಥೈಸಿ ಒಪ್ಪಿಸಿ ಸಹಿಸಿ ಸೈರೈಸಿ ಹಂಬಲಿಸಿ ಹುರಿದುಂಬಿಸಿ ಚೇತರಿಸಿ ಪರವಶವಾಗಿ‌ಸಿ ಕನವರಿಸಿ ಗರಿಗೆದರಿಸಿ ಹಾರಾಡಿಸಿ ಈಗ ರೆಕ್ಕೆ ಕತ್ತರಿಸಿ ನೋಯಿಸಿ ಗಹಗಹಿಸಿ ಸ್ನೇಹ ಪ್ರೀತಿ ಇಲ್ಲವಾಗಿಸಿ ಅದೆಲ್ಲಿಗೆ ಮಾಯವಾದೆ ಪಲಾಯನವಾದಿ ?   # ಸಾರಂಗರಾಜ್ 28/02/2024

Read More

ಇವತ್ತಿನ ಕವಿಸಾಲು

Gm ಶುಭೋದಯ💐 *ಕವಿಸಾಲು* ನಿನ್ನನ್ನು ಗೌರವಿಸಲೆಂದು ಬಾಗಿದ್ದೆ; ನೀ ಬೆನ್ನ ಹುರಿ ಮೇಲೆ ಕಾಲಿಟ್ಟು ತೆರಳಿದ್ದೆ! *ಕವಿಸಾಲು- 2* ಪ್ರೇಮ ಧ್ಯಾನ ನೆಮ್ಮದಿ ಬದುಕು ಏನೆಲ್ಲಾ ಅನ್ನುತ್ತಿರುತ್ತಾರೆ ಜನ ಮಾತಿನಲ್ಲಿ; ನಾನಂತೂ ನೀನು ಎಂದುಬಿಡುತ್ತೇನೆ ಮುಗುಳ್ನಕ್ಕು ಮೌನದಲ್ಲಿ… ಜನ ಮತ್ತು ನಾನು ಎಷ್ಟೊಂದು ವಿರುದ್ಧ ದಿಕ್ಕಿನಲ್ಲಿದ್ದೇವೆ ಈ ಜಗತ್ತಿನಲ್ಲಿ! – *ಶಿ.ಜು.ಪಾಶ* 8050112067 (28/2/24)

Read More

ಸಂಗೀತ ರವಿರಾಜ್ ಅಂಕಣ- ಪಯಸ್ವಿನಿಯ ತೀರದಲ್ಲಿ!

             ಪಯಸ್ವಿನಿಯ ತೀರದಲ್ಲಿ…… ಸರಾಗವಾಗಿ, ಸರಳವಾಗಿ, ನಿಧಾನಗತಿಯಲ್ಲಿ , ಹದವಾಗಿ ಬಳುಕುತ್ತಾ, ಏರಿಳಿತವ ಬಯಸುತ್ತಾ,  ಶುಭ್ರವಾಗಿ ಸಾಗುವ ನನ್ನೂರ ಚೆಲುವೆ ಪಯಸ್ವಿನಿಯ ಸೌಂದರ್ಯದ ಎದುರು ಲೋಕದಲ್ಲಿ ಬೇರೇನಿರಲು ಸಾಧ್ಯವೇ ಇಲ್ಲ ಎಂಬ ಭಾವನೆ ಪ್ರತಿದಿನ ಮೂಡುತ್ತದೆ. ಸುತ್ತಮುತ್ತ ಅಂದನೆಯ ಹಸಿರು, ದಡದಲ್ಲಿ ಹಳದಿ ಹೂವುಗಳು, ಉರುಟುರುಟಾದ ಕಲ್ಲುಗಳು, ಲಲ್ಲೆ ಹೊಡೆಯುತ್ತ ಈಜಾಡುವ ಮೀನುಗಳು ಈ ಸುಂದರಿಗೆ ಇನ್ನು ಹೆಚ್ಚಿನ ಸಾಥ್ ನೀಡುತ್ತವೆ. ಯಾವ ಅಡೆತಡೆಯು ಇಲ್ಲದೆ,  ನಿರ್ವಿಕಾರವಾಗಿ  ಮನೆಯ ಆಜುಬಾಜಿನಲ್ಲಿಯೆ ಹರಿಯುವ ಈ ಪಯಸ್ವಿನಿಗೆ ಅಣೆಕಟ್ಟು ಕಟ್ಟುವಾಗ…

Read More