Category: ಸುದ್ದಿ
ಸಫಾ ಬೈತುಲ್ ಮಾಲ್ ನಿಂದ 300ಕ್ಕೂ ಹೆಚ್ಚಿನ ಕುಟುಂಬಗಳಿಗೆ ರಮ್ ಝಾನ್ ಕಿಟ್ ವಿತರಣೆ
ಸಾಗರ : ಸಫಾ ಬೈತುಲ್ ಮಾಲ್ ಸಾಗರ ಶಾಖೆಯ ವತಿಯಿಂದ ಸುಮಾರು 300 ಕ್ಕೂ ಹೆಚ್ಚು ಕುಟುಂಬಗಳಿಗೆ 2000 ರೂ ಬೆಲೆಯುಳ್ಳ ದಿನಸಿ ವಸ್ತುಗಳನ್ನು ಹೊಂದಿರುವ ರಮಝಾನ್ ಕಿಟ್ ಗಳನ್ನು ಅರ್ಹ ಬಡ ಕುಟುಂಬಗಳಿಗೆ ಸೋಮವಾರ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮೌಲಾನಾ ಕಲೀಮುಲ್ಲಾ ನಮ್ಮ ಸಂಸ್ಥೆಯ ವತಿಯಿಂದ ಕಳೆದ 10ವರ್ಷಗಳಿಂದ ರಂಜಾನ್ ಕಿಟ್ ವಿತರಿಸುತ್ತಾ ಬಂದಿದ್ದೇವೆ. ಇದರೊಂದಿಗೆ ಬಡ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ಸಹಾಯ,ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ,ಮನೆ ನಿರ್ಮಾಣ,ಟೈಲರಿಂಗ್ ತರಬೇತಿ ಮತ್ತು ಹೊಲಿಗೆ…
ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಪ್ರದರ್ಶಿಸಲು ಸೂಚನೆ*
*ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಪ್ರದರ್ಶಿಸಲು ಸೂಚನೆ* ಶಿವಮೊಗ್ಗ- ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಅಧಿನಿಯಮದಂತೆ ಜಿಲ್ಲೆಯಾದ್ಯಂತ ಕನ್ನಡ ಭಾಷೆಯ ವ್ಯಾಪಕ ಬಳಕೆ ಹಾಗೂ ಶೇ.60 ರಷ್ಟು ಕನ್ನಡ ಭಾಷೆಯನ್ನು ನಾಮಫಲಕಗಳ ಮೇಲ್ಭಾಗದಲ್ಲಿ ಪ್ರದರ್ಶಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಸೂಚನೆ ನೀಡಿದರು. ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ (ತಿದ್ದುಪಡಿ)ಅಧಿನಿಯಮ 2024ನ್ನು ರೂಪಿಸಿ ಆದೇಶಿಸಿರುವ ಹಿನ್ನೆಲೆ ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಿ ಜಿಲ್ಲೆಯಾದ್ಯಂತ ಅಧಿನಿಯಮ ಜಾರಿಗೊಳಿಸುವ…
ಎಂ.ಶ್ರೀಕಾಂತ್ ರವರೀಗ ಅಲಂಕಾರ ಪುರುಷ!
ಎಂ.ಶ್ರೀಕಾಂತ್ ರವರೀಗ ಅಲಂಕಾರ ಪುರುಷ! ಕಾಂಗ್ರೆಸ್ ನ ಪ್ರಮುಖ ನಾಯಕರಾದ ಎಂ.ಶ್ರೀಕಾಂತ್ ರವರು ಶಿವಮೊಗ್ಹದಲ್ಲಿ ಇಂದಿನಿಂದ ಆರಂಭವಾಗಿರುವ 5 ದಿನಗಳ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಗತ್ಪ್ರಸಿದ್ಧ ಜಾತ್ರೆಗೆ ಈವರೆಗಿನ ಇತಿಹಾಸದಲ್ಲಿ ಮಾಡಿರದ ವಿಶೇಷ ಅಲಂಕಾರ ಹಾಗೂ ಲೈಟಿಂಗ್ಸ್ ಮಾಡಿ ಗಮನ ಸೆಳೆಯುತ್ತಿದ್ದಾರೆ. ಅದರ ಒಂದಿಷ್ಟು ಝಲಕುಗಳು ಇಲ್ಲಿವೆ…ದೇವಿಯ ದರ್ಶನಕ್ಕೆ ಗಾಂಧಿ ಬಜಾರಿಗೆ ಅಥವಾ ಕೋಟೆ ಬಳಿಯ ಮಾರಿಗದ್ದುಗೆಗೆ ಹೋದ ಭಕ್ತರೂ ಈ ಅಲಂಕಾರಗಳನ್ನು ಕಣ್ ತುಂಬಿಕೊಂಡು ಪ್ರಸನ್ನಚಿತ್ತರಾಗಬಹುದು. ಅಷ್ಟರ ಮಟ್ಟಿಗೆ ಎಂ.ಶ್ರೀಕಾಂತ್ ರವರ ದೇವಿಯ ಆವಾಸ…
ಎಸ್.ಕೆ.ಮರಿಯಪ್ಪ- ಎನ್.ಮಂಜುನಾಥ್ ಪತ್ರಿಕಾಗೋಷ್ಠಿ* *ಸಕಲ ಸಿದ್ಧತೆಯಾಗಿದೆ* *ಕೋಟೆ ಮಾರಿಕಾಂಬ ಜಾತ್ರೆಗೆ ಬನ್ನಿ*
*ಎಸ್.ಕೆ.ಮರಿಯಪ್ಪ- ಎನ್.ಮಂಜುನಾಥ್ ಪತ್ರಿಕಾಗೋಷ್ಠಿ* *ಸಕಲ ಸಿದ್ಧತೆಯಾಗಿದೆ* *ಕೋಟೆ ಮಾರಿಕಾಂಬ ಜಾತ್ರೆಗೆ ಬನ್ನಿ* ಶಿವಮೊಗ್ಗ: ಮಾ.12ರ ನಾಳೆಯಿಂದ ಆರಂಭವಾಗಲಿರುವ ಶ್ರೀ ಕೋಟೆ ಮಾರಿಕಾಂಬಾ ಜಾತ್ರೆಗೆ ಅಂತಿಮ ಸಿದ್ದತೆಗಳು ಪೂರ್ಣಗೊಳ್ಳುತ್ತಿವೆ. ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆಯನ್ನು 5 ದಿನಗಳ ಕಾಲ ಆಚರಿಸಲಾಗುವುದು ಎಂದು ಶ್ರೀಕೋಟೆ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಹೇಳಿದರು. ಅವರು ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಳೆಯಿಂದ 5 ದಿನಗಳ ಕಾಲ ನಡೆಯುವ ಮಾರಿಕಾಂಬಾ ಜಾತ್ರೆಗೆ ಸಕಲ ಸಿದ್ದತೆಗಳು…
ಇವತ್ತು ಸಂಜೆ 5.30 ಕ್ಕೆ ಪೊಲೀಸ್ ಕುಟುಂಬದ ಮಹಿಳೆಯರ. ಯಕ್ಷಗಾನ ಕಾರ್ಯಕ್ರಮ!
*ಇವತ್ತು ಸಂಜೆ 5.30 ಕ್ಕೆ* *ಪೊಲೀಸ್ ಕುಟುಂಬದ ಮಹಿಳೆಯರ* *ಯಕ್ಷಗಾನ ಕಾರ್ಯಕ್ರಮ!* ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪೋಲಿಸ್ ಸಿಬ್ಬಂದಿ ಕುಟುಂಬ ವರ್ಗದ ಮಹಿಳೆಯರಿಂದ ಯಕ್ಷಗುರು ಪರಮೇಶ್ವರ ಹೆಗಡೆಯವರ ನಿರ್ದೇಶನದಲ್ಲಿ *ಬೌಮಾಸುರ ಕಾಳಗ* ಯಕ್ಷಗಾನ ಕಾರ್ಯಕ್ರಮವನ್ನು ಈ ದಿನ ,(ಭಾನುವಾರ) ಸಂಜೆ 5:30 ಗಂಟೆಗೆ ಡಿ ಎ ಆರ್ ಪೊಲೀಸ್ ಸಭಾಂಗಣ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದೆ. ಪೊಲೀಸ್ ಸಿಬ್ಬಂದಿ ಕುಟುಂಬ ವರ್ಗದ ಮಹಿಳೆಯರೇ ಈ ಯಕ್ಷಗಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಐನಬೈಲು ಪರಮೇಶ್ವರ ಹೆಗಡೆ,…
ಮಾ.10 ರ ಬೆಳಿಗ್ಗೆ 6.30 ಕ್ಕೆ ಪೊಲೀಸ್ ಮ್ಯಾರಥಾನ್ ಓಟ*
*ಮಾ.10 ರ ಬೆಳಿಗ್ಗೆ 6.30 ಕ್ಕೆ ಪೊಲೀಸ್ ಮ್ಯಾರಥಾನ್ ಓಟ* ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 50ನೇ ವರ್ಷಾಚರಣೆಯ ಅಂಗವಾಗಿ, ಪೊಲೀಸ್ ಇಲಾಖೆಯ *ನಾಗರೀಕ ಕೇಂದ್ರೀಕೃತ ಯೋಜನೆಗಳು, ಸಿಬ್ಬಂಧಿಗಳ ಕಲ್ಯಾಣ ಕಾರ್ಯಕ್ರಮಗಳು ಪೊಲೀಸ್ ಇಲಾಖೆಯ ಮೈಲಿಗಲ್ಲಿನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ಜಿಲ್ಲಾ ಪೊಲೀಸ್ ವತಿಯಿಂದ ಮಾರ್ಚ್ 10 ರಂದು ಬೆಳಗ್ಗೆ 06:30ಕ್ಕೆ ನಗರದಲ್ಲಿ *ಮ್ಯಾರಥಾನ್ ಓಟವನ್ನು* ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ ಓಟವನ್ನು *ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ* ಪ್ರಾರಂಭಿಸಿ, ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ,…
ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ; ಆರತಿ ಕೃಷ್ಣ
ಶಿವಮೊಗ್ಗ- ವ್ಯಾಪಾರ, ಶಿಕ್ಷಣ ಸೇರಿದಂತೆ ನಾನಾ ಕಾರಣಕ್ಕೆ ಹೊರ ದೇಶಗಳಿಗೆ ತೆರಳುವ ಮತ್ತು ಅಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ಅನಿವಾಸಿ ಕನ್ನಡಿಗರ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ ದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಲು ಮುಂದಾಗಿದೆ ಎಂದು ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಾರೋದ್ಯಮ ಸೇರಿದಂತೆ ನಾನಾ ಕಾರಣಕ್ಕೆ ಇವತ್ತು ಸಾಕಷ್ಟು ಮಂದಿ ಕನ್ನಡಿಗರು ಹೊರ ದೇಶಗಳಿಗೆ ಹೋಗುತ್ತಿದ್ದಾರೆ….
ಬಂದೇ ಬಿಡ್ತು ಚುನಾವಣೆ* *ಲೋಕಸಭಾ ಚುನಾವಣೆ : ತರಬೇತಿ ಕಾರ್ಯಕ್ರಮ*
* ಶಿವಮೊಗ್ಗ; ಮುಂಬರುವ ಲೋಕಸಭಾ ಚುನಾವಣೆಯ ಪ್ರಯುಕ್ತ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಚುನಾವಣಾ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ಎಫ್ಎಸ್ ಟಿ, ಎಸ್ಎಸ್ಟಿ ಮತ್ತು ಎಂಸಿಸಿ ತಂಡಗಳಿಗೆ 2ನೇ ತರಬೇತಿಯನ್ನು ನೀಡಲಾಯಿತು. ಮಾಸ್ಟರ್ ಟ್ರೈನರ್ ಶಿವಕುಮಾರ್ ಹಾಗೂ ರವಿಕುಮಾರ್ ಚುನಾವಣಾ ನಿಯೋಜಿತ ಸಿಬ್ಬಂದಿಗಳಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಹೇಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಈಗಿನ ಸಿದ್ದತೆ ಹೇಗಿರಬೇಕೆಂಬ ಕುರಿತು ತರಬೇತಿ ನೀಡಿದರು. ಈ ವೇಳೆ ಚುನಾವಣಾ ತಹಶೀಲ್ದಾರ್ ಮಂಜುನಾಥ್ ಆರ್.ವಿ, ಪೊಲೀಸ್ ಅಧಿಕಾರಿಗಳು, ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು…
ಡಿಸಿಸಿ ಬ್ಯಾಂಕ್ ಚುನಾವಣೆ; ಹಸ್ತಕ್ಷೇಪದ ವಿರುದ್ಧ ಬಿಜೆಪಿ ಗರಂ…ಡಿಸಿಗೆ ಮನವಿ
ಶಿವಮೊಗ್ಗ *ಡಿ.ಸಿ.ಸಿ ಬ್ಯಾಂಕಿನ ಚುನಾವಣೆ ಡೆಲಿಗೆಷನ್ ಕುರಿತು ಬ್ಯಾಂಕ್ ಅಧ್ಯಕ್ಷರು ಮತ್ತು ಅಧಿಕಾರಿಗಳು ಹಸ್ತ ಕ್ಷೇಪ* ಮಾಡುತ್ತಿದ್ದಾರೆಂದು ಆರೋಪಿಸಿ ಜಿಲ್ಲಾ ಬಿಜೆಪಿ ಜಿಲ್ಲಾಧಿಕಾರಿಗಳಿಗೆ ನಿಯೋಗದ ಮೂಲಕ ದೂರು ನೀಡಿತು. ಬಿಜೆಪಿ ಅಧ್ಯಕ್ಷರಾದ ಟಿ. ಡಿ. ಮೇಘರಾಜ್ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಎಸ್ ರಮೇಶ್, ಪ್ರಮುಖರಾದ ಎಚ್.ಸಿ. ಬಸವರಾಜಪ್ಪ ಉಪಸ್ಥಿತರಿದ್ದರು.
ಕುವೆಂಪು ವಿವಿಯ ನೂತನ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧಿಕಾರ ಸ್ವೀಕಾರ*
*ಕುವೆಂಪು ವಿವಿಯ ನೂತನ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧಿಕಾರ ಸ್ವೀಕಾರ* ಶಂಕರಘಟ್ಟ- ಕುವೆಂಪು ವಿವಿಯ ನೂತನ ಕುಲಪತಿಯಾಗಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಶರತ್ ಅನಂತಮೂರ್ತಿ ಅವರು ಗುರುವಾರ ಬೆಳಿಗ್ಗೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ಡಾ. ತಾವರ್ ಚಂದ್ ಗೆಹ್ಲೋಟ್ ಅವರು ಫೆಬ್ರವರಿ 05ರಂದು ಡಾ. ಶರತ್ ಅವರನ್ನು ಪೂರ್ಣಾವಧಿ ಕುಲಪತಿಯಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದರು. ಪ್ರೊ. ಶರತ್ ಅನಂತಮೂರ್ತಿ ಕರ್ನಾಟಕದ ಖ್ಯಾತ ಸಾಹಿತಿ ಹಾಗೂ ಜ್ಞಾನಪೀಠ ಪುರಸ್ಕೃತ ಡಾ. ಯು ಆರ್…