ಇವತ್ತು ಸಂಜೆ 5.30 ಕ್ಕೆ ಪೊಲೀಸ್ ಕುಟುಂಬದ ಮಹಿಳೆಯರ. ಯಕ್ಷಗಾನ ಕಾರ್ಯಕ್ರಮ!

*ಇವತ್ತು ಸಂಜೆ 5.30 ಕ್ಕೆ*
*ಪೊಲೀಸ್ ಕುಟುಂಬದ ಮಹಿಳೆಯರ*
*ಯಕ್ಷಗಾನ ಕಾರ್ಯಕ್ರಮ!*

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪೋಲಿಸ್ ಸಿಬ್ಬಂದಿ ಕುಟುಂಬ ವರ್ಗದ ಮಹಿಳೆಯರಿಂದ ಯಕ್ಷಗುರು ಪರಮೇಶ್ವರ ಹೆಗಡೆಯವರ ನಿರ್ದೇಶನದಲ್ಲಿ *ಬೌಮಾಸುರ ಕಾಳಗ* ಯಕ್ಷಗಾನ ಕಾರ್ಯಕ್ರಮವನ್ನು ಈ ದಿನ ,(ಭಾನುವಾರ) ಸಂಜೆ 5:30 ಗಂಟೆಗೆ ಡಿ ಎ ಆರ್ ಪೊಲೀಸ್ ಸಭಾಂಗಣ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದೆ.

ಪೊಲೀಸ್ ಸಿಬ್ಬಂದಿ ಕುಟುಂಬ ವರ್ಗದ ಮಹಿಳೆಯರೇ ಈ ಯಕ್ಷಗಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಹಿಮ್ಮೇಳದಲ್ಲಿ ಭಾಗವತರಾಗಿ ಐನಬೈಲು ಪರಮೇಶ್ವರ ಹೆಗಡೆ, ಮದ್ದಳೆಯಲ್ಲಿ ಗಣಪತಿ ಪ್ರಭು, ಚಂಡೆಯಲ್ಲಿ ಎನ್.ಜೆ.ನವೀನ್, ವೇಷಭೂಷಣದಲ್ಲಿ ಶ್ರೀಮತಿ ಮಲ್ಲಿಕಾ ರಾಘವೇಂದ್ರ ಭಟ್ ಮತ್ತು ಸಂಗಡಿಗರು ಇರಲಿದ್ದಾರೆ.

ಮುಮ್ಮೇಳದಲ್ಲಿ ಶ್ರೀಮತಿ ಶೋಭಾ ಭೂಮರೆಡ್ಡಿ, ಶ್ರೀಮತಿ ಸಾವಿತ್ರಿ ಕರಕಣ್ಣನವರ್, ಶ್ರೀಮತಿ ವಿ.ಜ್ಯೋತಿ, ಶ್ರೀಮತಿ ಪವಿತ್ರ ಬಿ.ಎಸ್, ರುಚಿತಾ ಎಂ.ಡಿ, ಹರಿಣಿ ಪ್ರಿಯ ಎಸ್., ಕೀರ್ತಿಪ್ರಿಯ ಎಸ್., ರವರಿರಲಿದ್ದಾರೆ.

ಕಾರ್ಯಕ್ರಮವನ್ನು ಯಕ್ಷಗಾನ ಕಲಾವಿದರಾದ ಕಿರಣ್ ಆರ್.ಪೈ ಉದ್ಘಾಟಿಸಲಿದ್ದು, ಸನ್ಮಾನ ಕೂಡ ಸ್ವೀಕರಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಸ್ ಪಿ. ಮಿಥುನ್ ಕುಮಾರ್ ಜಿ.ಕೆ ವಹಿಸಲಿದ್ದು, ಅತಿಥಿಗಳಾಗಿ ಹೆಚ್ಚುವರಿ ಎಸ್.ಪಿ. ಅನಿಲ್ ಕುಮಾರ್ ಎಸ್.ಭೂಮರೆಡ್ಡಿ, ಡಿಎಆರ್ ಡಿವೈಎಸ್ ಪಿ ಪ್ರಕಾಶ್ ಪಿ.ಬಿ. ಆಗಮಿಸಲಿದ್ದಾರೆ.