ಮಾ.10 ರ ಬೆಳಿಗ್ಗೆ 6.30 ಕ್ಕೆ ಪೊಲೀಸ್ ಮ್ಯಾರಥಾನ್ ಓಟ*

*ಮಾ.10 ರ ಬೆಳಿಗ್ಗೆ 6.30 ಕ್ಕೆ ಪೊಲೀಸ್ ಮ್ಯಾರಥಾನ್ ಓಟ*

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 50ನೇ ವರ್ಷಾಚರಣೆಯ ಅಂಗವಾಗಿ, ಪೊಲೀಸ್ ಇಲಾಖೆಯ *ನಾಗರೀಕ ಕೇಂದ್ರೀಕೃತ ಯೋಜನೆಗಳು, ಸಿಬ್ಬಂಧಿಗಳ ಕಲ್ಯಾಣ ಕಾರ್ಯಕ್ರಮಗಳು ಪೊಲೀಸ್ ಇಲಾಖೆಯ ಮೈಲಿಗಲ್ಲಿನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ಜಿಲ್ಲಾ ಪೊಲೀಸ್ ವತಿಯಿಂದ ಮಾರ್ಚ್ 10 ರಂದು ಬೆಳಗ್ಗೆ 06:30ಕ್ಕೆ ನಗರದಲ್ಲಿ *ಮ್ಯಾರಥಾನ್ ಓಟವನ್ನು* ಹಮ್ಮಿಕೊಳ್ಳಲಾಗಿದೆ.

ಮ್ಯಾರಥಾನ್ ಓಟವನ್ನು *ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ* ಪ್ರಾರಂಭಿಸಿ, ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘ ವೃತ್ತ, ಡಿವಿಎಸ್ ವೃತ್ತ, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐಬಿ ವೃತ್ತದ ಮುಖಾಂತರ ಡಿಎಆರ್ ಪೊಲೀಸ್ ಕವಾಯತು ಮೈದಾನಕ್ಕೆ ಬಂದು *ಮುಕ್ತಾಯ ಮಾಡಲಾಗುವುದು.*

ಮ್ಯಾರಥಾನ್ ಓಟದಲ್ಲಿ *ಶಿವಮೊಗ್ಗ ಜಿಲ್ಲಾ ಪೊಲೀಸ್* ಅಧಿಕಾರಿ ಮತ್ತು ಸಿಬ್ಬಂಧಿಗಳು, *ಕೆ.ಎಸ್.ಆರ್.ಪಿ 8ನೇ* ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಹಾಗೂ *ಯುವಜನ ಮತ್ತು ಕ್ರೀಡಾ ಇಲಾಖೆಯ* ವಿಧ್ಯಾರ್ಥಿಗಳು ಭಾಗವಹಿಸಲಿದ್ದು, ಇವರೊಂದಿಗೆ ಮ್ಯಾರಥಾನ್ ಓಟದಲ್ಲಿ ಭಾವಗಹಿಸಲು *ಇಚ್ಚೆಯುಳ್ಳ ಸಾರ್ವಜನಿಕರು ಮತ್ತು ಮಾಧ್ಯಮ ಮಿತ್ರರು* ಸಹ ಭಾಗವಹಿಸಬಹುದಾಗಿದೆ.

ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ *ವಿಜೇತರಾಗುವ ಪುರುಷ ಮತ್ತು ಮಹಿಳಾ ಓಟಗಾರರಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.* ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು *ಇಚ್ಚೆಯುಳ್ಳ ಸಾರ್ವಜನಿಕರಿಗೆ* ಮತ್ತು *ಎಲ್ಲಾ ಮಾಧ್ಯಮ ಮಿತ್ರರಿಗೆ* ಈ ಮೂಲಕ ಆಹ್ವಾನಿಸಲಾಗಿದೆ.