ಡಿಜಿಟಲ್ ಮೌಲ್ಯ ಮಾಪನದಿಂದ ವಿದ್ಯಾರ್ಥಿಗಳಿಗೆ ಅನ್ಯಾಯ;* *ಎಚ್ಚರಿಕೆ ನೀಡಿದ ಎನ್ ಎಸ್ ಯು ಐ*
*ಡಿಜಿಟಲ್ ಮೌಲ್ಯ ಮಾಪನದಿಂದ ವಿದ್ಯಾರ್ಥಿಗಳಿಗೆ ಅನ್ಯಾಯ;*
*ಎಚ್ಚರಿಕೆ ನೀಡಿದ ಎನ್ ಎಸ್ ಯು ಐ*
ಶಿವಮೊಗ್ಗ ಜಿಲ್ಲಾ N SU I ವತಿಯಿಂದ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಮೌಲ್ಯಮಾಪನ ವನ್ನು ಡಿಜಿಟಲ್ ರೂಪದಲ್ಲಿ ನಡೆಸಿ ನೀಡಿದ ಪಲಿತಾಂಶದಲ್ಲಿ ಸಾಕಷ್ಟು ಲೋಪಗಳಿದ್ದು, ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಲಾಯಿತು.
ಪ್ರತೀ ಕಾಲೇಜಿನಲ್ಲಿ 50 ರಿಂದ 60 ವಿದ್ಯಾರ್ಥಿಗಳು 0.5.6.7 ಅಂಕಗಳನ್ನು ಪಡೆದು ಅನುತ್ತೀರ್ಣ ಗೊಂಡಿದ್ದಾರೆ. ಉತ್ತೀರ್ಣಗೊಂಡ ಸಾಕಷ್ಟು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ . ವಿಶ್ವ ವಿದ್ಯಾಲಯದ ಪರೀಕ್ಷಾಂಗ ವಿಭಾಗವು ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ ಯಾಗಿದೆ. ಪರೀಕ್ಷಾ ಶುಲ್ಕ ಮರುಮೌಲ್ಯ ಮಾಪನ ಎಂದು ವಿದ್ಯಾರ್ಥಿಗಳಿಂದ ವಸೂಲಿ ಮಾಡಿಯೂ ಸಹ ಪಲಿತಾಂಶದ ಜೊತೆ ಆಟವಾಡುತ್ತಾ ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡುತ್ತಿದೆ.
ಕೂಡಲೇ ವಿವಿಯ ಕುಲಸಚಿವರು (ಪರೀಕ್ಷಾಂಗ) ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಲಾಯಿತು.
ಡಿಜಿಟಲ್ ಮೌಲ್ಯಮಾಪನದಲ್ಲಿ ಆಗಿರುವ ಗೊಂದಲಗಳನ್ನು ಬಗೆಹರಿಸಬೇಕು. ವ್ಯವಸ್ಥಿತ ಪೂರ್ವಸಿದ್ಧತೆಯಿಲ್ಲದೇ ಡಿಜಿಟಲ್ ಮೌಲ್ಯಮಾಪನ ನಡೆಸಲು ಕಾರಣರಾದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಯಾವುದೇ ಶುಲ್ಕ ಪಡೆಯದೇ ಎಲ್ಲಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡಬೇಕು. ಇಲ್ಲವಾದಲ್ಲಿ ಎನ್.ಎಸ್.ಯು.ಐ. ವತಿಯಿಂದ ವಿವಿ ಬಂದ್ ನಂತಹ ತೀವ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ವಿದ್ಯಾಲಯದ ಕುಲಪತಿಗಳಿಗೆ ಹಾಗೂ ಪರೀಕ್ಷಂಗ ಕುಲ್ ಸಚಿವರಿಗೆ ಮಾನವಿ ನೀಡಲಾಯಿತು.
ಈ ಸಂದರ್ಭದಲ್ಲಿ N S U I ನ ಕಾರ್ಯಾಧ್ಯಕ್ಷರಾದ ರವಿ ಕಟಿಕೆರೆ, ಉಪಾಧ್ಯಕ್ಷರುಗಳಾದ ಆದಿತ್ಯ, ಸುಭಾನ್ ,ಪ್ರಧಾನ ಕಾರ್ಯದರ್ಶಿಯಾದ ಫರಾಜ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


