ಮೃತ್ಯು ಕೂಪವಾಗುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು!* *ಇವತ್ತೂ ನೇಣುಬಿಗಿದ ಸ್ಥಿತಿಯಲ್ಲಿ ಸಿಕ್ಕಳು ವಿದ್ಯಾರ್ಥಿನಿ!* *ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ- ತಾಲ್ಲೂಕು ಅಧಿಕಾರಿ ಸುರೇಶ್- ವಾರ್ಡನ್ ಸ್ವಪ್ನ ಇದ್ದಲ್ಲೆಲ್ಲ ರಂಪ ರಾಮಾಯಣ!* *ಸಮಾಜ ಕಲ್ಯಾಣ ಇಲಾಖೆಯ C S ಕುಕ್ಕೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ- ಆ ಸಾವಿಗೆ ಸಿಕ್ಕಿತಾ ನ್ಯಾಯ?* *ಅಟ್ರಾಸಿಟಿ ಕಮಿಟಿಯ ಸದಸ್ಯ ಹನುಮಂತಪ್ಪ ಯಡವಾಲರವರ ಒತ್ತಾಯವೇನು?*

*ಮೃತ್ಯು ಕೂಪವಾಗುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು!*

*ಇವತ್ತೂ ನೇಣುಬಿಗಿದ ಸ್ಥಿತಿಯಲ್ಲಿ ಸಿಕ್ಕಳು ವಿದ್ಯಾರ್ಥಿನಿ!*

*ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ- ತಾಲ್ಲೂಕು ಅಧಿಕಾರಿ ಸುರೇಶ್- ವಾರ್ಡನ್ ಸ್ವಪ್ನ ಇದ್ದಲ್ಲೆಲ್ಲ ರಂಪ ರಾಮಾಯಣ!*

*ಸಮಾಜ ಕಲ್ಯಾಣ ಇಲಾಖೆಯ C S ಕುಕ್ಕೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ- ಆ ಸಾವಿಗೆ ಸಿಕ್ಕಿತಾ ನ್ಯಾಯ?*

*ಅಟ್ರಾಸಿಟಿ ಕಮಿಟಿಯ ಸದಸ್ಯ ಹನುಮಂತಪ್ಪ ಯಡವಾಲರವರ ಒತ್ತಾಯವೇನು?*

ಶಿವಮೊಗ್ಗದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು ಅಲ್ಲಿನ ಸಿಬ್ಬಂದಿಗಳಿಗೆ, ಓದುತ್ತಿರುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮೃತ್ಯುಕೂಪಗಳಾಗಿ ಪರಿವರ್ತನೆ ಯಾಗುತ್ತಿವೆ.

ನವೆಂಬರ್ 5 ರ ಇಂದು ಬೆಳಿಗ್ಗೆಯಷ್ಟೇ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವೊಂದರಲ್ಲಿ ಮತ್ತೊಂದು ಹೆಣ ಬಿದ್ದಿದೆ. ಆತ್ಮಹತ್ಯೆಗಳ ರೂಪದಲ್ಲಿ ಕಂಡು ಬರುತ್ತಿರುವ ಈ ಸಾವುಗಳಿಗೆ ನಿಜವಾದ ತನಿಖೆ ನಡೆದು ನ್ಯಾಯ ಸಿಗುತ್ತಿಲ್ಲ ಎಂಬುದೇ ದುರಂತದ ವಿಷಯ.

ಶಿವಮೊಗ್ಗ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ, ಶಿವಮೊಗ್ಗ ತಾಲ್ಲೂಕು ಕಲ್ಯಾಣಾಧಿಕಾರಿ ಸುರೇಶ್ ಮೂಲತಃ ಆಡಳಿತದ ಗಂಧಗಾಳಿಯೇ ಗೊತ್ತಿಲ್ಲದವರು. ಇಂಥ ಬಕೆಟ್ ಗಿರಾಕಿಗಳಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ?

ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಭದ್ರಾವತಿ ತಾಲ್ಲೂಕಿನ ಗಂಗೂರು ಗ್ರಾಮದ ವಾಸಿ, 21 ವರ್ಷ ವಯಸ್ಸಿನ ವಿದ್ಯಾರ್ಥಿನಿ ವನಿಷಾ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಇವಳ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಹಾಸ್ಟೆಲ್ ಟೆರೇಸ್ ಮೇಲೆ ಈಕೆಯ ಶವ ಸಿಕ್ಕಿದೆ.

2025ರ ಜುಲೈ 31 ರಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರ ಮನೆಯಲ್ಲಿ ಅಡುಗೆ ಕೆಲಸಕ್ಕಾಗಿ ನೇಮಿಸಲ್ಪಟ್ಟಿದ್ದ ಸುರೇಶ್ ಎಂಬಾತ ಹಾಡಹಗಲೇ ಇಲಾಖೆಯ ಎಡಿ ಕಚೇರಿಯಲ್ಲೇ ವಿಷ ಕುಡಿದಿದ್ದ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ನಾರಾಯಣ ಹೃದಯಾಲಯಕ್ಕೆ ಕೊಂಡೊಯ್ಯಲಾಗಿತ್ತು. ಆದರೆ, ಆತ ಸಾವು ಕಂಡಿದ್ದ.

ಈ ವಿಚಾರ ದೊಡ್ಡ ಸುದ್ದಿಯಾಯ್ತಾದರೂ ಶಿವಮೊಗ್ಗ ತಾಲ್ಲೂಕು ಅಧಿಕಾರಿ ಸುರೇಶ್ ಮೇಲಾಗಲೀ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪರ ಮೇಲಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ. ಸುರೇಶ ವಿಷ ಕುಡಿದಿದ್ದೇ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಎಂಬ ಸತ್ಯ ಗೊತ್ತಿದ್ದರೂ ಆ ಸಾವಿಗೊಂದು ನೆಟ್ಟಗಿನ ತನಿಖೆ ಕೂಡ ಆಗಲಿಲ್ಲ ಎಂಬುದು ಮತ್ತೊಂದು ಮಹಾ ದುರಂತ.

ಸೊರಬ ಮೂಲದ ಬಕೆಟ್ ಗಿರಾಕಿ ಆಗಿರುವ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಆಗಿರುವ ಮಲ್ಲೇಶಪ್ಪ, ತಾಲ್ಲೂಕು ಅಧಿಕಾರಿ ಸುರೇಶ್, ವಾರ್ಡನ್ ಸ್ವಪ್ನ ವಿರುದ್ಧ ದೊಡ್ಡ ತನಿಖೆ ನಡೆದರೆ ಸತ್ಯ ನಿಜಕ್ಕೂ ಹೊರಕ್ಕೆ ಬಂದು ಸತ್ತವರಿಗೆ ನೆಮ್ಮದಿಯಾದರೂ ಸಿಗಬಹುದು.

ಸೊರಬದ ಮಲ್ಲೇಶಪ್ಪ, ಸುರೇಶ್, ಸ್ವಪ್ನ ವಿರುದ್ಧ ಕೂಡಲೇ ತನಿಖೆಯಾಗಬೇಕು. ಸ್ವಂತ ಶ್ರೇಣಿ ಮೇಲೆ ಪೃಷ್ಠ ಜಾಗಗಳಲ್ಲಿ ಬಂದು ಕುಳಿತು ಮನುಷ್ಯರ ಜೀವಗಳಿಗೆ ಬೆಲೆಯೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಈ ಅಧಿಕಾರಿಗಳ ಮೇಲೆ ಕೂಡಲೇ ತನಿಖೆ ನಡೆಸಿ ಅಮಾನತಿಗೊಳಪಡಿಸಬೇಕು ಎಂದು ಈ ಸಂದರ್ಭದಲ್ಲಿ ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಸಮಿತಿ ಸದಸ್ಯರಾದ ಹನುಮಂತಪ್ಪ ಯಡವಾಲ ಒತ್ತಾಯಿಸಿದ್ದಾರೆ.

ನಿಗೂಢ ಸಾವುಗಳ ತನಿಖೆಯೂ ನಡೆಯದಂತೆ ನೋಡಿಕೊಳ್ಳುತ್ತಿರುವವರ ಮುಖ ಬಯಲಾಗಬೇಕು. ಮೂಲತಃ ಎ.ಡಿ.ಗ್ರೇಡ್ ಅಧಿಕಾರಿಯಾಗಿರುವ ಮಲ್ಲೇಶಪ್ಪ, ಸಾಂಖ್ಯಿಕ ಇಲಾಖೆಯಿಂದ ಇಲ್ಲಿ ಬಂದು ಕುಳಿತಿರುವ ಸುರೇಶ್ ಹಾಸ್ಟೆಲ್ ಗಳಿಗೆ ಖರೀದಿಸುವ ಸಾಮಾಗ್ರಿಗಳ ವಿಚಾರದಲ್ಲೂ ಬಹಳಷ್ಟು ಗೋಲ್ ಮಾಲ್ ಗೆ ಕಾರಣರಾಗುತ್ತಿದ್ದಾರೆ. ಮಾಹಿತಿ ಹಕ್ಕಿನ ಮೂಲಕ ಪಡೆದಿರುವ ದಾಖಲೆಗಳೇ ಹೇಳುತ್ತವೆ. ಇಂಥ ಅಧಿಕಾರಿಗಳಿಂದ ಸಮಾಜ ಕಲ್ಯಾಣ ಇಲಾಖೆ ತನ್ನ ಕಲ್ಯಾಣವನ್ನೇ ಮರೆತಿದೆ. ಈ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುವುದೆಂದು ಹನುಮಂತಪ್ಪ ಯಡವಾಲ ಎಚ್ಚರಿಸಿದ್ದಾರೆ.