ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಆನ್ ಲೈನಲ್ಲಿ
ಕೋಟಿ ದಾಟಿದೆ ಸಂಖ್ಯೆ
ಸ್ನೇಹಿತರದ್ದು…

ಕಷ್ಟದಲ್ಲೊಬ್ಬರೂ
ಕೈ ಹಿಡಿದು
ದಾಟಿಸುವವರಿಲ್ಲ!

2.
ಮುಖದ ಮೇಲೆ
ದುಃಖದ
ಹೊದಿಕೆ ಏಕೆ ಹೃದಯವೇ?

ಕಷ್ಟಕಾಲವಿರಬಹುದಿದು

ಕಳೆಯುವುದು
ಮುಗುಳ್ನಗುವಿನಿಂದಲೇ…

– *ಶಿ.ಜು.ಪಾಶ*
8050112067
(5/11/2025)