ಡಾ ರಾಜ್‌ಕುಮಾರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಾ?!* *ಈಗೇಕೆ ಈ ಸುದ್ದಿ ಬಹಿರಂಗವಾಯ್ತು? ಹೇಳಿದ್ಯಾರು ಈ ಸೀಕ್ರೆಟ್ ಸ್ಟೋರಿ?*
*ಡಾ ರಾಜ್‌ಕುಮಾರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಾ?!*
*ಈಗೇಕೆ ಈ ಸುದ್ದಿ ಬಹಿರಂಗವಾಯ್ತು? ಹೇಳಿದ್ಯಾರು ಈ ಸೀಕ್ರೆಟ್ ಸ್ಟೋರಿ?*
ಕನ್ನಡದ ಮೇರು ನಟ, ಕನ್ನಡಿಗರ ಅಣ್ಣಾವ್ರು ಖ್ಯಾತಿಯ ಡಾ ರಾಜ್‌ಕುಮಾರ್ (Dr Rajkumar) ಸೀಕ್ರೆಟ್ ಸ್ಟೋರಿಯೊಂದು ಬಹಿರಂಗವಾಗಿದೆ. ಅದನ್ನು ಅವರ ಮಗ ರಾಘವೇಂದ್ರ ರಾಜ್‌ಕುಮಾರ್ (Raghavendra rajkumar) ಅವರೇ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಹೌದು, ನಟ ರಾಜ್‌ಕುಮಾರ್ ಅವರು 1952-53ರಲ್ಲಿ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರನ್ನು ಕಳೆದುಕೊಳ್ಳುತ್ತಾರೆ.
ಆಗ ಮುತ್ತರಾಜ್ ಆಗಿದ್ದ ಡಾ ರಾಜ್‌ಕುಮಾರ್ ಅವರು ‘ಜೀವನ ಇನ್ಮೇಲೆ ಮುಗಿದೋಯ್ತು..’ ಅಂತ ನಿರ್ಧಾರ ಮಾಡ್ತಾರೆ.
ಆಗ ಡಾ ರಾಜ್‌ಕುಮಾರ್ ತಾಯಿ ‘ಬ್ಯಾಡ ಕಂದಾ.. ನೀನು ಆತ್ಮಹತ್ಯೆ ಮಾಡಿಕೊಂಡ್ರೆ ನಿಮ್ಮ ತಂದೆ ಆತ್ಮಕ್ಕೆ ಶಾಂತಿ ಸಿಗಲ್ಲ..’ ಅಂತ ಹೇಳ್ತಾರೆ. ಆಗ ಮುತ್ತುರಾಜ್ ಅವರು ತಮ್ಮ ಆತ್ಮಹತ್ಯೆ ನಿರ್ಧಾರ ಬಿಟ್ಟು ಮತ್ತೆ ಬದುಕಲು ನಿರ್ಧರಿಸುತ್ತಾರೆ. 1953ರಲ್ಲಿ ಮುತ್ತುರಾಜ್ ಅವರು ಪಾರ್ವತಮ್ಮ ಅವರನ್ನು ಮದುವೆ ಆಗ್ತಾರೆ. ಅದೇ ವರ್ಷ ಡಾ ಮುತ್ತುರಾಜ್ ಅವರಿಗೆ ಸಿನಿಮಾದಲ್ಲಿ ನಟಿಸಲು ಕರೆ ಬರುತ್ತೆ.
ಅದು 1953ರಲ್ಲೇ ನಡೆದಿದ್ದು, ಅದು ‘ಬೇಡರ ಕಣ್ಣಪ್ಪ’ ಚಿತ್ರದ ಆಡಿಷನ್. ಅಲ್ಲಿ ಆಯ್ಕೆಯಾದ ನಾಟಕದ ಕಲಾವಿದ ಮುತ್ತುರಾಜ ಮುಂದೆ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ (Bedara Kannappa) ನಟಿಸಿ ಸಿನಿಮಾ ನಟರಾಗಿ ಬೆಳೆಯುತ್ತಾರೆ. ಮುತ್ತುರಾಜ ಹೆಸರು ‘ರಾಜ್‌ಕುಮಾರ್’ ಎಂದು ಬದಲಾಗುತ್ತದೆ. ಬಳಿಕ, 1975 ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಕೊಡಲಾಯಿತು. ಅಲ್ಲಿಂದ ಮುಂದೆ ಅವರ ಹೆಸರು ಡಾ ರಾಜ್‌ಕುಮಾರ್ ಆಗಿ ಬದಲಾಯ್ತು.
ಮುಂದೆ ಡಾ ರಾಜ್‌ಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು, ಅವರು 2006ರಲ್ಲಿ ನಿಧರಾಗುವ ಮೊದಲು ಬರೋಬ್ಬರಿ 200 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು, 2000 ಇಸ್ವಿಯಲ್ಲಿ ಅವರ ಕೊನೆಯ ಚಿತ್ರ ‘ಶಬ್ಧವೇದಿ’ ತೆರೆಗೆ ಬಂದಿದ್ದು ಎಲ್ಲವೂ ಬಹುತೇಕ ಕನ್ನಡಿಗರಿಗೆ ಗೊತ್ತಿದೆ. ಅದೆಲ್ಲವೂ ದಾಖಲೆ ರೂಪದಲ್ಲಿ ಇರೋದ್ರಿಂದ ಗೊತ್ತಿಲ್ಲದವರೂ ನೋಡಿಕೊಳ್ಳಬಹುದು.
ಇದು 953ರಲ್ಲಿ ತಮ್ಮ ತಂದೆ ಹೋದ ಬಳಿಕ ಸಾಯುವ ನಿರ್ಧಾರ ಮಾಡಿದ್ದ ಮುತ್ತುರಾಜ್ ಅವರು ಬಳಿಕ ಬದುಕಿ, ಡಾ ರಾಜ್‌ಕುಮಾರ್ ಆಗಿರುವ ಕಥೆ. ತಮ್ಮ ಜೀವನದುದ್ದಕ್ಕೂ ನಟ ಡಾ ರಾಜ್‌ಕುಮಾರ್ ಅವರು ತುಂಬಾ ಸರಳ ಜೀವನ ನಡೆಸಿದ್ದರು. ನಟನೆಯಲ್ಲಿ ಬಿಟ್ಟರೆ ಯಾವತ್ತೂ ಬಿಳಿ ಬಣ್ಣದ ಪಂಚೆ ಹಾಗೂ ಶರ್ಟ್ ಧರಿಸುತ್ತಿದ್ದರು ಅಷ್ಟೇ. ಸಿನಿಮಾದಲ್ಲಿ ಬಿಟ್ಟರೆ ನಿಜ ಜೀವನದಲ್ಲಿ ಅವರು ಯಾವತ್ತೂ ಬಣ್ಣಬಣ್ಣದ ಬಟ್ಟೆ ಧರಿಸಲೇ ಇಲ್ಲ.
ಡಾ ರಾಜ್‌ಕುಮಾರ್ ತಮ್ಮ ತಂದೆ ಸತ್ತಾಗ ತಾವೂ ಕೂಡ ಸೂಸೈಡ್ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದ ಸಂಗತಿಯನ್ನು ಸ್ವತಃ ಡಾ ರಾಜ್ ಮಗ ರಾಘವೇಂದ್ರ ರಾಜ್‌ಕುಮಾರ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಇದು ಸತ್ಯ ಸಂಗತಿ. ಇನ್ನು ಡಾ ರಾಜ್‌ಕುಮಾರ್-ಪಾರ್ವತಮ್ಮ ದಂಪತಿಗೆ ಶಿವರಾಜ್‌ಕುಮಾರ್ ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಎಂಬ ಮೂವರು ಗಂಡು ಮಕ್ಕಳು. ಪೂರ್ಣಿಮಾ ಹಾಗೂ ಲಕ್ಷ್ಮೀ ಎಂಬ ಇಬ್ಬರು ಹೆಣ್ಣು ಮಕ್ಕಳು.