*ಕಾರಲ್ಲಿ ಗಾಂಜಾ ಮಾರುತ್ತಿದ್ದವನನ್ನು ಬಂಧಿಸಿದ ದೊಡ್ಡಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ರವಿ ಪಾಟೀಲ್ ತಂಡ* *2 ಲಕ್ಷ ರೂ.,ಗಳ ಮೌಲ್ಯದ 4 ಕೆ.ಜಿ.130 ಗ್ರಾಂ ತೂಕದ ಗಾಂಜಾ ಸೊಪ್ಪು ವಶಪಡಿಸಿಕೊಂಡ ಪೊಲೀಸರು*

*ಕಾರಲ್ಲಿ ಗಾಂಜಾ ಮಾರುತ್ತಿದ್ದವನನ್ನು ಬಂಧಿಸಿದ ದೊಡ್ಡಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ರವಿ ಪಾಟೀಲ್ ತಂಡ*

*2 ಲಕ್ಷ ರೂ.,ಗಳ ಮೌಲ್ಯದ 4 ಕೆ.ಜಿ.130 ಗ್ರಾಂ ತೂಕದ ಗಾಂಜಾ ಸೊಪ್ಪು ವಶಪಡಿಸಿಕೊಂಡ ಪೊಲೀಸರು*

ಕಾರಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ ದೊಡ್ಡಪೇಟೆ ಪೊಲೀಸರು, ಸುಮಾರು 2 ಲಕ್ಷ ರೂ.,ಗಳ ಮೌಲ್ಯದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ.

ಡಿಸೆಂಬರ್ 12 ರಂದು ಶಿವಮೊಗ್ಗ ನಗರ ತೀರ್ಥಹಳ್ಳಿ ರಸ್ತೆಯಲ್ಲಿರುವ ನಮೋಶಂಕರ ಲೇಔಟ್ ಒಳಗೆ ಒಬ್ಬ ವ್ಯಕ್ತಿ ಮಾರುತಿ ಸ್ವಿಪ್ಟ್ ಸಿಲ್ವರ್ ಕಲರ್ ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಈ ದಾಳಿ ನಡೆದಿದೆ.

ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನಾರಾಯಣ ಮಧುಗಿರಿ ಮತ್ತು ಸಿಬ್ಬಂದಿಗಳಾದ ಎಎಸ್‌ಐ ಚೂಡಾಮಣಿ ಕೆ. ಸಿಹೆಚ್‌ಸಿ ಗೋವರ್ದನ, ಸಿಹೆಚ್‌ಸಿ ಸಂದೀಪ ಎಸ್ ಡಿ., ಸಿಪಿಸಿ ಗುರುನಾಯ್ಕ, ಸಿಪಿಸಿ ಚಂದ್ರನಾಯ್ಕ. ಸಿಪಿಸಿ ಗಣೇಶ, ಸಿಪಿಸಿ ಪ್ರಶಾಂತ್ ಶೆಟ್ಟಣ್ಣನವರ್ ರವರುಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿದ್ದಾರೆ.

ಸ್ಥಳಕ್ಕೆ ಇಲಾಖೆಯ ಮೇಲಾಧಿಕಾರಿಗಳಾದ ಡಿವೈಎಸ್ ಪಿ ಬಾಬು ಅಂಜನಪ್ಪ ಮತ್ತು SOCO ಅಧಿಕಾರಿಗಳೊಂದಿಗೆ ಆರೋಪಿತನಾದ ಮೊಹಮ್ಮದ್ ಅಲ್ತಾಫ್ (ವಾಸ ಇಬ್ರಾಹಿಂ ಮಸೀದಿ ಹತ್ತಿರ ಅಣಲೆಕೊಪ್ಪ ಶಿರುವಾಳ ರಸ್ತೆ ಸಾಗರ ಟೌನ್) ಈತನನ್ನು ಹಿಡಿದು ಆತನು ಬಳಿ ಸ್ವಿಫ್ಟ್ ಸಿಲ್ವರ್ ಕಲರ್ ನಲ್ಲಿದ್ದ 4 ಕೆ.ಜಿ. 130 ಗ್ರಾಂ ತೂಕ ಇರುವ ಸುಮಾರು 2,00,000/-ರೂ ಬೆಳೆಬಾಳುವ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡು ಈ ಆರೋಪಿತನ ವಿರುದ್ಧ NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಲಾಗಿದೆ.