ಕವಿಸಾಲು

Gm ಶುಭೋದಯ💐💐

*ಕವಿಸಾಲು*
1.
ದೂರವನ್ನು
ಕಿಲೋ ಮೀಟರಲ್ಲಿ
ಅಳೆಯುವರೆಂದು
ಹೇಳಿದವರು ಯಾರು?

ನನ್ನನ್ನು ನಾನು
ಭೇಟಿಯಾಗಲು
ಜೀವನವೇ ಬೇಕಾಯ್ತು!

2.
ಕನ್ನಡಿ
ಕಂಡು ಹಿಡಿದ
ಮನುಷ್ಯ
ಸುಳ್ಳನ್ನು
ಮುಖದ ಮೇಲೆ
ಲೇಪಿಸಿಕೊಂಡ!

3.
ಕನಸು ಕೂಡ
ನನಸಾಗಿ ಬಿಡುವ
ಕನಸು ಕಾಣುವುದಿಲ್ಲ;

ನೀನೋ…

4
ನಾಳೆಯ
ಚಿಂತೆಯಿತ್ತವನಿಗೆ

ಇಂದೇ
ಸತ್ತು ಹೋದ!

– *ಶಿ.ಜು.ಪಾಶ*
8050112067
(20/12/2025)