*ಇ – ಖಾತಾ; ಡಿಸೆಂಬರ್ 8ರಿಂದ ಹೊಸ ಮಾದರಿ ಜಾರಿ* *ಆಸ್ತಿದಾರರೇ ಗಮನಿಸಿ*
*ಇ – ಖಾತಾ; ಡಿಸೆಂಬರ್ 8ರಿಂದ ಹೊಸ ಮಾದರಿ ಜಾರಿ*
*ಆಸ್ತಿದಾರರೇ ಗಮನಿಸಿ*
ಬೆಂಗಳೂರಿನ ಆಸ್ತಿದಾರರಿಗೆ ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಇ ಖಾತಾ ವಿಚಾರದಲ್ಲಿ ಮಹತ್ವದ ಗುಡ್‌ನ್ಯೂಸ್ ಕೊಟ್ಟಿದೆ. ಆಸ್ತಿದಾರರು ಇ – ಖಾತಾ ಪಡೆದುಕೊಳ್ಳುವುದಕ್ಕೆ ಸಮಸ್ಯೆ ಆಗುತ್ತಿತ್ತು. ಇದೀಗ ಇ ಖಾತಾ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಅಪ್ಡೇಟ್ಸ್ ನೀಡಲಾಗಿದೆ. ಈ ಹೊಸ ನಿಯಮವು ಡಿಸೆಂಬರ್ 18ರಿಂದಲೇ ಜಾರಿಗೆ ಬಂದಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ ಆಗುತ್ತಿರುವ ಮೋಸವನ್ನು ತಪ್ಪಿಸುವುದು ಹಾಗೂ ಪ್ರಾಪರ್ಟಿ ಟ್ಯಾಕ್ಸ್‌ನಿಂದ ಹೊರಗೆ ಉಳಿದವರನ್ನು ಪ್ರಾಪರ್ಟಿ ಟ್ಯಾಕ್ಸ್ ವ್ಯಾಪ್ತಿಗೆ ತರವುದು ಸೇರಿದಂತೆ ಹಲವು ಪ್ರಮುಖ ಕಾರಣಗಳಿಗೆ ಇ – ಖಾತಾಜಾರಿ ಮಾಡಲಾಗಿದೆ. ಇದೀಗ ಆಸ್ತಿದಾರರು ಮನೆಯಿಂದಲೇ ಇ – ಖಾತಾ ಮಾಡಿಸಿಕೊಳ್ಳುವುದಕ್ಕೆ ಬೇಕಾದ ಅವಕಾಶವನ್ನು ನೀಡಲಾಗಿದೆ. ಆಸ್ತಿದಾರರು ಇದೀಗ ತಮ್ಮ ಇ – ಖಾತಾವನ್ನು ಪಡೆದುಕೊಳ್ಳುವುದಕ್ಕೆ ಕಚೇರಿಗಳಿಗೆ ಅಲೆಯು ಅವಶ್ಯಕತೆ ಇಲ್ಲ. ಮನೆಯಿಂದಲೇ ಸರಳ ವಿಧಾನದ ಮೂಲಕ ಇ ಖಾತಾ ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇ- ಖಾತಾಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ನಿಮ್ಮ ಮನೆಯಲ್ಲೇ ಕುಳಿತು ಇ ಖಾತಾ ಪಡೆದುಕೊಳ್ಳಿ. ಸಾರ್ವಜನಿಕರ ಆಸ್ತಿ ದಾಖಲೆ ಈಗ ಮತ್ತಷ್ಟು ಸುರಕ್ಷಿತ ಎಂದು ಹೇಳಲಾಗಿದೆ.
ಮನೆಯಿಂದಲೇ ಇ – ಖಾತಾ ಪಡೆಯಲು ಬೇಕಾಗುವ ದಾಖಲೆಗಳು
1. ಮಾಲೀಕರ ಭಾವಚಿತ್ರ ಮತ್ತು ಅಧಾರ್
2. ಆಸ್ತಿ ತೆರಿಗೆ ಎಸ್.ಎ.ಎಸ್ ಚಲನ್ ಸಂಖ್ಯೆ
3. ಸ್ವತ್ತಿನ ಕ್ರಯ / ನೋಂದಾಯಿತ ಪತ್ರ ಸಂಖ್ಯೆ (ಕಾವೇರಿ ತಂತ್ರಾಶದಿಂದ ಪಡೆದುಕೊಳ್ಳುವುದು)
4. ವಿದ್ಯುತ್ ಆರ್.ಆರ್ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ).
5. ಸ್ವತ್ತಿನ ಛಾಯಾಚಿತ್ರ
6. EC: 15/16
7. ಸ್ವತ್ತಿಗೆ ಸಂಬಂಧಿಸಿದ ಇತರ ಪೂರಕ ಅಗತ್ಯ ದಾಖಲೆಗಳು
ಕರ್ನಾಟಕ ಸರ್ಕಾರವು ಇ – ಖಾತಾ ಯೋಜನೆಯನ್ನು ಮೊದಲು ಬೆಂಗಳೂರಿನಲ್ಲಿ ಪರಿಚಯಿಸಿತ್ತು. ಇದೀಗ ಇ – ಖಾತಾ ಯೋಜನೆಯನ್ನು ಕರ್ನಾಟಕದಾದ್ಯಂತ ಪರಿಚಯಿಸಲಾಗಿದೆ. ನಗರದ 45 ಲಕ್ಷಕ್ಕೂ ಹೆಚ್ಚು ಆಸ್ತಿದಾರರ ಕರಡು ಆಸ್ತಿ ವಿವರಗಳನ್ನು ಇ – ಆಸ್ತಿ ತಂತ್ರಾಂಶದಲ್ಲಿ ಪ್ರಕಟಿಸಲಾಗಿವುದು ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಸುರೇಶ್ ಬಿ.ಎಸ್ ಅವರು ತಿಳಿಸಿದ್ದಾರೆ.
1. www.eaasthi.karnataka.gov.in Online ನಲ್ಲಿ ಆಸ್ತಿ ದಾಖಲೆ ಪರಿಶೀಲಿಸಬಹುದು.
2. ಅಗತ್ಯವಿದ್ದಲ್ಲಿ ದಾಖಲೆ ನೀಡಿ ತಿದ್ದುಪಡಿ / ತಕರಾರು ಅರ್ಜಿ ಸಲ್ಲಿಸಬಹುದು.


