*ಸಾಗರದ ಪೋಕ್ಸೋ ಪ್ರಕರಣದ ತೀರ್ಪು ಪ್ರಕಟ* *ಅತ್ಯಾಚಾರಿ- ಅನಧಿಕೃತ ಹೋಂಸ್ಟೇ ಮಾಲೀಕ- ರೂಮ್ ಬಾಯ್ ಗೆ 20 ವರ್ಷ ಜೈಲು ಶಿಕ್ಷೆ*

*ಸಾಗರದ ಪೋಕ್ಸೋ ಪ್ರಕರಣದ ತೀರ್ಪು ಪ್ರಕಟ*

*ಅತ್ಯಾಚಾರಿ- ಅನಧಿಕೃತ ಹೋಂಸ್ಟೇ ಮಾಲೀಕ- ರೂಮ್ ಬಾಯ್ ಗೆ 20 ವರ್ಷ ಜೈಲು ಶಿಕ್ಷೆ*

ಹೋಂ ಸ್ಟೇಗೆ ಅಪ್ರಾಪ್ತ ಬಾಲಕಿಯನ್ನು ಪದೇ ಪದೇ ಕರೆದುಕೊಂಡು ಬಂದು ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ವ್ಯಕ್ತಿಯೂ ಸೇರಿದಂತೆ ಮೂವರಿಗೆ ತಲಾ 20 ವರ್ಷ ಸಾದಾ ಜೈಲು ಶಿಕ್ಷೆ ಸೇರಿದಂತೆ ದಂಡಗಳನ್ನು ಘನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ FTSC-1 ಶಿವಮೊಗ್ಗ ವಿಧಿಸಿದೆ.

16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು 26 ವರ್ಷದ ವ್ಯಕ್ತಿಯೊಬ್ಬ 2023ರ ಸೆಪ್ಟೆಂಬರ್ 11ರಂದು ಬಲವಂತವಾಗಿ ಸಾಗರ ವ್ಯಾಪ್ತಿಯ ಅನಧಿಕೃತ ಹೋಂ ಸ್ಟೇಗೆ ಕರೆತಂದು ಲೈಂಗಿಕ ದೌರ್ಜನ್ಯವೆಸಗಿದ್ದ.

ಈ ಬಗ್ಗೆ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ತನಿಖಾಧಿಕಾರಿ ಸಾಗರ ಡಿವೈಎಸ್ ಪಿ ಗೋಪಾಲಕೃಷ್ಣ ಟಿ.ನಾಯಕ್ ಯಾತ್ರಿ ನಿವಾಸದಲ್ಲಿ ತಂಗಲು ಬಂದ ಆರೋಪಿ, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕರೆತಂದರೂ ದಾಖಲೆಗಳನ್ನು ಪರಿಶೀಲಿಸದೇ ಪದೇ ಪದೇ ಉಳಿದುಕೊಳ್ಳಲು ಅವಕಾಶ ನೀಡಿದ ಅನಧಿಕೃತ ಹೋಂ ಸ್ಟೇನ 58 ವರ್ಷ ವಯಸ್ಸಿನ ಮಾಲೀಕ ಮತ್ತು 24 ವಯಸ್ಸಿನ‌ ರೂಮ್ ಬಾಯ್ ವಿರುದ್ಧ ಕೂಡ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀಧರ್ ವಾದ ಮಂಡಿಸಿದ್ದರು. ನ್ಯಾಯಾಧೀಶರಾದ ನಿಂಗನಗೌಡ ಭ ಪಾಟೀಲ್ ಮೂವರು ಆರೋಪಿಗಳಿಗೂ 20 ವರ್ಷದ ಸಾದಾ ಜೈಲು ಶಿಕ್ಷೆ ವಿಧಿಸಿದ್ದಾರೆ. ಮೊದಲ ಆರೋಪಿಗೆ 71,000₹ ದಂಡ, ಎರಡು ಮತ್ತು ಮೂರನೇ ಆರೋಪಿಗಳಿಗೆ ತಲಾ 10,000₹ ದಂಡ ವಿಧಿಸಿ ಆದೇಶಿಸಿದ್ದಾರೆ.