*ಕಳವು ಮಾಲುಗಳ ಪತ್ತೆಯಲ್ಲಿ ಶಿವಮೊಗ್ಗ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ನೇತೃತ್ವದ ತಂಡದ ವಿಶೇಷ ಸಾಧನೆ* *ಸಿಕ್ಕ ಮಾಲು ವಿತರಿಸಿದ್ದೆಷ್ಟು? ಇಲ್ಲಿದೆ ಸಂಪೂರ್ಣ ವಿವರ*

*ಕಳವು ಮಾಲುಗಳ ಪತ್ತೆಯಲ್ಲಿ ಶಿವಮೊಗ್ಗ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ನೇತೃತ್ವದ ತಂಡದ ವಿಶೇಷ ಸಾಧನೆ*

*ಸಿಕ್ಕ ಮಾಲು ವಿತರಿಸಿದ್ದೆಷ್ಟು? ಇಲ್ಲಿದೆ ಸಂಪೂರ್ಣ ವಿವರ*

2025ರಲ್ಲಿ ಕಳುವಾಗಿದ್ದ ವಸ್ತು, ಹಣವನ್ನು ವಾರಸುದಾರರಿಗೆ ವಾಪಸ್ ಮಾಡುವ ಕಾರ್ಯಕ್ರಮ ಶನಿವಾರದಂದು ಸಂಜೆ ಶಿವಮೊಗ್ಗದ ಡಿಎಆರ್ ಸಭಾಂಗಣದಲ್ಲಿ ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆಯಿತು.

2025ನೇ ಸಾಲಿನ 222 ಪ್ರಕರಣಗಳು, ಹಿಂದಿನ ವರ್ಷದ 48 ಪ್ರಕರಣಗಳು ಸೇರಿ ಒಟ್ಟು 270 ಪ್ರಕರಣಗಳನ್ನು ಪತ್ತೆ ಮಾಡಿ, ಒಟ್ಟು ಮೌಲ್ಯ 6,43,65,477₹ ಗಳ ಮೌಲ್ಯದ ಮಾಲುಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ವಾರಸುದಾರರಿಗೆ ವಾಪಸ್ ನೀಡಿತು.

2025ರಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 612 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.ಇವುಗಳಲ್ಲಿ 2 ಕೊಲೆ, 8 ದರೋಡೆ, 17 ಸುಲಿಗೆ,14 ಸರಗಳ್ಳತನ, 48 ಕನ್ನ ಕಳವು, 12 ಮನೆಗಳ್ಳತನ, 37 ಸಾಮಾನ್ಯ ಕಳವು, 12 ಜಾನುವಾರು ಕಳವು, 53 ವಾಹನ ಕಳವು, 19 ವಂಚನೆ ಪ್ರಕರಣಗಳು ದಾಖಲಾಗಿದ್ದವು.

ಒಟ್ಟು 270 ಪ್ರಕರಣಗಳನ್ನು ಪತ್ತೆ ಮಾಡಿ ಬಂಗಾರ, ಬೆಳ್ಳಿ, ವಾಹನಗಳೂ ಸೇರಿದಂತೆ ಬಹಳಷ್ಟು ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಹಿಂದಿನ ವರ್ಷದ 48 ವಿವಿಧ ಪ್ರಕರಣಗಳನ್ನು ಕೂಡ ಪತ್ತೆ ಹಚ್ಚಲಾಗಿತ್ತು. ಸಿಇಐಆರ್ ಮೂಲಕ ಪತ್ತೆ ಮಾಡಲಾದ 1320 ಮೊಬೈಲ್ ಗಳನ್ನು ಕೂಡ ಇಂದು ವಾರಸುದಾರರಿಗೆ ವಾಪಸ್ ಮಾಡಲಾಯಿತು ಎಂದು ಎಸ್ ಪಿ ಮಿಥುನ್ ಕುಮಾರ್ ಹೇಳಿದರು.