*ಕೆನರಾ ಬ್ಯಾಂಕಿನ ಮತ್ತೊಂದು ಮಹಾ ಮೋಸ!* *ಅಡವಿಟ್ಟ ಚಿನ್ನದ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚನೆ…* *ಕೆನರಾ ಬ್ಯಾಂಕಲ್ಲಿ ಚಿನ್ನ ಇಡುವವರೇ ಹುಷಾರ್…*
*ಕೆನರಾ ಬ್ಯಾಂಕಿನ ಮತ್ತೊಂದು ಮಹಾ ಮೋಸ!*
*ಅಡವಿಟ್ಟ ಚಿನ್ನದ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚನೆ…*
*ಕೆನರಾ ಬ್ಯಾಂಕಲ್ಲಿ ಚಿನ್ನ ಇಡುವವರೇ ಹುಷಾರ್…*
ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನದ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದ ಪ್ರಕರಣವೊಂದು ಮೈಸೂರಿನ ಕೆನರಾ ಬ್ಯಾಂಕ್‌ನಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಬ್ಯಾಂಕ್‌ನ ಅಧಿಕೃತ ಅಕ್ಕಸಾಲಿಗ (Appraiser) ಅಶ್ವಿನ್ ಆಚಾರ್ ಎಂಬಾತನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಅಗಸ್ಟ್ 4 ರಿಂದ ಡಿ.9ರವರೆಗೆ ನಕಲಿ ಗೋಲ್ಡ್ ಲೋನ್ ಸೃಷ್ಟಿಸಿದ್ದ ರಘು, 41 ಗ್ರಾಹಕರ ಖಾತೆಗಳಲ್ಲಿ ನಕಲಿ ಗೋಲ್ಡ್ ಲೋನ್ ಮಾಡಿ ಹಣ ಪಡೆದು ಲೂಟಿ ಮಾಡಿದ್ದಾರೆ. ಬ್ಯಾಂಕ್‌ನ ಗ್ರಾಹಕರಾಗಿರುವ ವೃದ್ಧರು, ಪಿಂಚಣಿದಾರರು, ಆರ್ಚಕರು, ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ನಕಲಿ ಗೋಲ್ಡ್ ಲೋನ್ ಸೃಷ್ಟಿಸಿದ್ದು, ಇವರ ಖಾತೆಗಳ ಒಟಿಪಿ ಹಾಗೂ ಚೆಕ್ ಪಡೆದು ವಂಚನೆ ಮಾಡಿದ್ದಾರೆ
ಎಂದು ಆರೋಪಿಸಲಾಗಿದೆ. ಇದೀಗ ಮ್ಯಾನೇಜರ್ ರಘು ಎಸ್ಕೇಪ್ ಆಗಿದ್ದು, ಇತ್ತ 41 ಖಾತೆಗಳನ್ನ ಬ್ಯಾಂಕ್ ಫ್ರೀಜ್ ಮಾಡಿದ್ದರಿಂದ ಗ್ರಾಹಕರು ಪರದಾಡುವಂತಾಗಿದೆ.


