*ಬಳ್ಳಾರಿ ಗಲಭೆ.. ಕಾಯ೯ಕತ೯ನ ಸಾವು.. ಎಸ್ಪಿ ಅಮಾನತ್… ಕುರಿತಂತೆ* ಕೆ.ಆರ್.ವೆಂಕಟೇಶ ಗೌಡರು ಏನಂತಾರೆ?
*ಬಳ್ಳಾರಿ ಗಲಭೆ.. ಕಾಯ೯ಕತ೯ನ ಸಾವು.. ಎಸ್ಪಿ ಅಮಾನತ್… ಕುರಿತಂತೆ* ಕೆ.ಆರ್.ವೆಂಕಟೇಶ ಗೌಡರು ಏನಂತಾರೆ?
ಹೊಸವಷ೯ದ ಮೊದಲನೇ ದಿನವೇ ಸಿನಿಮೀಯ ರೀತಿಯ ರಕ್ತ-ಸಿಕ್ತ, ದ್ವೇಷಯುಕ್ತ, ಅನಾಗರೀಕ ಹಾಗೂ ಅರಾಜಕೀಯ ರಾಜಕೀಯಕ್ಕೆ ಹೆಸರಾಗಿರುವ *ಬಳ್ಳಾರಿ* ಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗುಂಡಿನ ಸದ್ದು ಹಾಗೂ ಗದ್ದಲದಲ್ಲಿ ರಾಜಕೀಯ ಕಾಯ೯ಕತ೯ನೊಬ್ಬನ ಸಾವು ಮುಂದಿನ ದಿನಗಳಲ್ಲಿನ ಬಳ್ಳಾರಿಯ ಪ್ರಜಾಪ್ರಭುತ್ವ ವಿರೋಧಿ ರಾಜಕೀಯಕ್ಕೆ ಮುನ್ಸೂಚನೆ ನೀಡಿದಂತಾಗಿದೆ.
ಆದರೆ ಸಕಾ೯ರ ಗಲಭೆಗೆ ಕಾರಣರಾದ *ವ್ಯಕ್ತಿ-ಶಕ್ತಿಗಳ* ಮೇಲೆ ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು *ಎತ್ತಿಗೆ ಜ್ವರವಾದರೆ ಎಮ್ಮೆಗೆ ಬರೆ ಬಳಿದಂತೆ* ಆ ದಿನವೇ ಕಲವೇ ಗಂಟೆಗಳ ಮುಂಚಿತವಾಗಿ ಅಧಿಕಾರ ವಹಿಸಿಕೊಂಡಿದ್ದ ಬಳ್ಳಾರಿಯ ಎಸ್ಪಿ *ಶ್ರೀ ಪವನ್ ನೆಜ್ಜೂರ್* ರವರನ್ನು ಸಸ್ಪೆಂಡ್ ಮಾಡುವ ಮೂಲಕ ತನ್ನ *ಅಸೂಕ್ಷ್ಮ ಹಾಗೂ ಅಜ್ನಾನ* ವನ್ನು ಮೆರೆದಿದೆ.
ರಾಜಕಾರಣಿಗಳು ಮಾಫಿಯಾದವರ ರೀತಿ *ಖಾಸಗಿ ಗನ್ ಮ್ಯಾನ್* ಹೊಂದುವುದು, *ರೌಡಿ-ಮಾಫಿಯಾ ಸಂಪಕ೯* ದ ಉದ್ಯಮಿಗಳು *ಖಾಸಗಿ ಗನ್ ಅಥವಾ ಖಾಸಗಿ ಗನ್ ಮ್ಯಾನ್ ಸೌಕಯ೯* ಹೊಂದುವ ಕುರಿತಂತೆ ಕಾರಣ ಹಾಗೂ ಅನಿವಾಯ೯ತೆಯ ಕುರಿತಂತೆ ಸರಿಯಾದ ಕಾನೂನು ಹಾಗೂ ತನಿಖೆಗಳನ್ನು ನಿವ೯ಹಿಸಬೇಕಾದ ಸಕಾ೯ರ ( ಅದರಲ್ಲೂ ಗೃಹ ಇಲಾಖೆ) ಈ ರೀತಿ ಕಾಯಾ೯ಂಗದವರ ಮೇಲೆ ಧಿಡೀರನೆ ತೆಗೆದುಕೊಳ್ಳುವ ನಿಧಿಾ೯ರ ಇದೇ ಮೊದಲಲ್ಲ. ( ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲು ದುರಂತದಲ್ಲಿ ಬೆಂಗಳೂರು *ಕಮಿಷನರ್ ದಯಾನಂದ* ರವರ ಮೇಲೂ ಈ ಅಮಾನತ್ತಿನ ಕ್ರಮ ಕೈಗೊಳ್ಳಲಾಗಿತ್ತು)
ಆದರೇ ಅದೇ ರಾಜಕಾರಣಿಗಳು ಈ ರೀತಿಯ ಬಹುತೇಕ ಸಂಧಭ೯ ದಲ್ಲಿ ಕೆ ಜೆ ಹಳ್ಳಿ ಪ್ರಕರಣದ ರೂವಾರಿ ರಾಜಕಾರಣಿಗಳೂ ಸೇರಿದಂತೆ, ಕೆ ಆರ್ ಪುರ ಶಾಸಕ *ಬೈರತಿ ಬಸವರಾಜ್* ಪ್ರಕರಣ ಸೇರಿದಂತೆ ಬಳ್ಳಾರಿಯ *ರೆಡ್ಡಿ* ರಾಜಕಾರಣಿಗಳನ್ನೂ ಸೇರಿ ಕೊಂಡು ಯಾರಮೇಲೂ ಈ ರೀತಿ ಧಿಡೀರನೆ ಕಾನೂನು ಕ್ರಮಗಳು ಜರುಗದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಕಾ೯ರದ ಮುಖ್ಯಸ್ಥರು *ಆತ್ಮಾವಲೋಕನ* ಮಾಡಿಕೊಳ್ಳಬೇಕಾಗಿದೆ.
*ನ್ಯಾಯಾಂಗ* ಹಾಗೂ *ಮಾಧ್ಯಮ* ಈ ವಿಷಯಗಳನ್ನು ಗಂಭೀರ ವಾಗಿ ಪರಿಗಣಿಸಬೇಕಾಗಿದೆ.
ಇಲ್ಲದಿದ್ದರೆ ಕಾನೂನು ರಕ್ಷಕರ ನೈತಿಕ ಸ್ಥೆಯ೯ ಕುಸಿತವಾಗಿ ಮುಂದುವರೆದು ಪೋಲಿಸ್ ಅಧಿಕಾರಿಗಳು ಆತ್ಮಹತ್ಯೆ ಯಂತಹ ದುಬ೯ಲ ನಿಧಾ೯ರಕ್ಕೆ ಬರುತ್ತಾರೆ.
ಹೀಗಾಗಿಯೆ ಮಾಧ್ಯಮದಲ್ಲಿ ಬಂದಿರುವ ಸುದ್ದಿಯಂತೆ ಈಗತಾನೆ ಅಮಾನತ್ತಾದ ಬಳ್ಳಾರಿ ಎಸ್ಪಿ *ಶ್ರೀ ಪವನ್ ನೆಜ್ಜೂರು* ರವರು ನಿನ್ನೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವುದೂ ಸೇರಿದಂತೆ ಈ ಹಿಂದೆ ಪೋಲಿಸ್ ಅಧಿಕಾರಿಗಳಾಗ ಮದುಕರ್, ಗಣಪತಿ, ನಂದೀಶ್ ಮುಂತಾದವರ ಆತ್ಮಹತ್ಯೆ ಯ ಸಾವುಗಳೂ ಖಂಡನೀಯ.
ಹಾಗಾಗಿಯೇ ಬಹುತೇಕ ಪೋಲಿಸ್ ಅಧಿಕಾರಿಗಳು ಈ ಹೊಲಸು ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಕತ೯ವ್ಯಗಳವೃನ್ನು ಮರೆತು ಅಯೋಗ್ಯ ರಾಜಕೀಯ ಧುರೀಣರಿಗೆ ಬಾಲಂಗೋಛಿಗಳಾಗಿ ( ಕೆಲವರನ್ನು ಹೊರತು ಪಡಿಸಿ) ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುತ್ತಿದ್ದಾರೆ.
ಇನ್ನು ಜನಸಾಮಾನ್ಯರೇನು ಇದಕ್ಕೆ ಹೊರತಾಗಿಲ್ಲ. ಪ್ರಜೆಗಳು ಕೂಡಾ ಇಂತಹ ಸಂದಭ೯ದಲ್ಲಿ *ಕುರುಡು ಮೌನ* ವಹಿಸಿ, ಅದೇ ಅಯೋಗ್ಯ ರಾಜಕೀಯ ಮುಖಂಡರಿಗೆ ಜೈಕಾರ ಹಾಕುತ್ತಾ ಅವರ ಹಿಂಬಾಲಿಸಿ ಮತ್ತೆ ಮತ್ತೆ ಅವರನ್ನು ಗೆಲ್ಲಿಸಿ ಅಧಿಕಾರ ನೀಡುತ್ತಾರೆ.
ಗಲಭಯಲ್ಲಿ ಸತ್ತ ಜನಸಾಮಾನ್ಯ *ರಾಜಶೇಖರ್* ನ ಸಾವು (ಕುಟುಂಬಕ್ಕೆ ಹೊರತು ಪಡಿಸಿ)ನಗಣ್ಯವಾಗುತ್ತದೆ.
ಮಾಧ್ಯಮದವರಿಗೆ ಕೇವಲ ಕ್ಷಣಿಕ *ಬ್ರೇಕಿಂಗ್ ನ್ಯೂಸ್*( ಇನ್ನೊಂದು ರೋಚಕ ವಿಷಯ ಸಿಗುವವರೆಗೂ), ರಾಜಕಾರಣಿಗಳೂ ಈ ಸಾವಿನ ಮೇಲೆ ಮತ್ತೆ ಹೋರಾಟದ ಹೆಸರಿನಲ್ಲಿ ರಾಜಕೀಯ ಕೆಸರೆರಚಾಟ ಮುಂದುವರೆಸುತ್ತಾರೆ.
*ಪ್ರಜಾಪ್ರಭುತ್ವ ದ ಅಣುಕು ಪ್ರದಶ೯ನ* ಮುಂದುವರೆಯುತ್ತದೆ( ಇನ್ನೊಬ್ಬ ಜನಸಾಮಾನ್ಯ ಕಾಯ೯ಕತ೯ನ ಹೆಣ ಬೀಳುವವರೆಗೂ). ನಮ್ಮಂತವರೂ ಈ ಕುರಿತ ಬರವಣೆಗೆಯ ಮೂಲಕ ಏನನ್ನೂ ಮಾಡದೆ *ಅರಣ್ಯ ರೋಧನ* ಮಾಡುತ್ತಾ ಕೂತಲ್ಲೆ ಕೂರುತ್ತೆೇವೆ. ಆಮೇಲೆ ನಾವೂ ಮರುಗುತ್ತಾ ಮಲಗುತ್ತೇವೆ. ಅಲ್ಲವೇ?
*ಎಲ್ಲಿಗೆ ಬಂತು? ಯಾರಿಗೆ ಬಂತು? ನಲವತ್ತೇಳರ ಸ್ವಾತಂತ್ರ್ಯ?*
—– ಕೆ ಆರ್ ವೆಂಕಟೇಶ್ ಗೌಡ
Mob: 9901033508


