ವೈಚಾರಿಕತೆಯ ಹಚ್ಚಿಟ್ಟ ಹಣತೆ ಡಾ.ಕೂಡಿಗೆ’
- ‘ವೈಚಾರಿಕತೆಯ ಹಚ್ಚಿಟ್ಟ ಹಣತೆ ಡಾ.ಕೂಡಿಗೆ’
ಡಾ.ಶ್ರೀಕಂಠ ಕೂಡಿಗೆಯವರು ವೈಚಾರಿಕತೆಯ ಹಚ್ಚಿಟ್ಟ ಹಣತೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಚನ್ನೇಶ್ ಹೊನ್ನಾಳ್ಳಿ ಹೇಳಿದರು.
ಅವರು ರಾಷ್ಟçಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ವತಿಯಿಂದ ಬುಧವಾರ ಸಂಜೆ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಡಾ.ಜಿ.ಎಸ್.ಎಸ್.ಜನ್ಮದಿನ ಹಾಗೂ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಜಿ.ಎಸ್.ಎಸ್. ಪುರಸ್ಕಾರ ಪಡೆದ ಶ್ರೀಕಂಠ ಕೂಡಿಗೆಯವರಿಗೆ ಅಭಿನಂದನ ನುಡಿಗಳನ್ನಾಡಿದರು.
ಇಂದು ದಿಕ್ಕೆಟ್ಟ ಪರಿಸ್ಥಿತಿ ಇದೆ. ಪ್ರಬುದ್ಧವನ್ನು ವಿರೋಧಿಸುವ ಧ್ವನಿಗಳು ಕ್ಷೀಣಿಸುತ್ತಿವೆ. ವ್ಯಕ್ತಿ ಆರಾಧನೆಯೇ ಮುಖ್ಯವಾಗಿವೆ. ಪ್ರತಿಕ್ರಿಯೆಯನ್ನು ನೀಡದಂತಹ ಪರಿಸ್ಥಿತಿ ಬಂದೊದಗಿದೆ. ವಿತಂಡ ವಾದಗಳೇ ವಿಜೃಂಭಿಸಿರುವ ಈ ಹೊತ್ತಿನಲ್ಲಿ ಡಾ. ಶ್ರೀಕಂಠ ಕೂಡಿಗಿಯಂತಹ ವೈಚಾರಿಕತೆ ಮತ್ತೆ ಮತ್ತೆ ನೆನಪಾಗುತ್ತಾರೆ ಎಂದರು.
ಶ್ರೀಕAಠ ಕೂಡಿಗೆಯವರು ಕೇವಲ ಅಧ್ಯಾಪಕರಾಗಿರಲಿಲ್ಲ. ಪಠ್ಯಗಳ ಜೊತೆ ಜೊತೆಗೆ ಬದುಕಿನ ಪಾಠವನ್ನು ಕಲಿಸಿದವರು. ವೈಚಾರಿಕತೆಯ ಪ್ರಜ್ಞೆ ಬೆಳೆಸಿದವರು. ಅವರೊಂದು ಪ್ರೇರಣಾ ಶಕ್ತಿಯಾಗಿದ್ದರು. ಸಮಾಜವಾದದ ಬೆಳಕಾಗಿದ್ದವರು. ಮೇಷ್ಟುç ಎಂಬ ಪರಂಪರೆಯನ್ನು ಮುಂದುವರೆಸಿಕೊAಡು ಹೋದವರು. ಪ್ರಗತಿಪರ ಚಳುವಳಿಯಲ್ಲಿ ಪಾಲ್ಗೊಂಡಿದ್ದವರು. ಸಾಹಿತ್ಯ ಮತ್ತು ಹೋರಾಟ ಭಿನ್ನವಲ್ಲ ಎಂದುಕೊAಡವರು. ಪ್ರಭುತ್ವವನ್ನು ದಿಕ್ಕರಿಸುವ ಮತ್ತೆ ಮತ್ತೆ ಪ್ರಶ್ನೆ ಮಾಡುವ ಕೂಡಿಗೆಯವರು ಸದಾ ವರ್ತಮಾನದಲ್ಲಿರುತ್ತಾರೆ ಎಂದರು.
ಜಿ.ಎಸ್.ಶಿವರುದ್ರಪ್ಪ ಕುರಿತು ಮಾತನಾಡಿದ ಹೊಸನಗರದ ಪ್ರಾಧ್ಯಾಪಕ ಡಾ.ಶ್ರೀಪತಿ ಹಳಗುಂದ ಇಂದು ತಲ್ಲಣಗಳ ನಡುವೆ ನಾವಿದ್ದೇವೆ. ಜಿ.ಎಸ್.ಎಸ್. ಕಾಡುವ ಕವಿ, ಹಂಬಲದ ಕವಿ ಕೇವಲ ಮೆದುಳುಗಳ ಸಂವಾದವನ್ನು ಅವರು ಮಾಡಲಿಲ್ಲ. ಹೃದಯಗಳ ನಡುವೆ ಮಾತನಾಡಿದರು. ಅರಳಬೇಕಾದ ಹೂವುಗಳು ಅರಳೇ ಅರಳುತ್ತವೆ ಎಂದವರು. ಒಬ್ಬ ಜೀವ ಪರ ಕವಿ. ಸಮನ್ವಯ ಕವಿಯಾಗಿದ್ದವರು ಎಂದರು.
ಶ್ರೀಕAಠ ಕೂಡಿಗೆಯವರು ಕೂಡಿದ ಪ್ರಗತಿಪರ ಚಳುವಳಿಗಳಲ್ಲಿ ಪಾಲ್ಗೊಂಡವರು. ಪ್ರಭುತ್ವದ ವಿರುದ್ಧ ಮಾತನಾಡುತ್ತಲೇ ಪ್ರಭುತ್ವದ ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಈ ದೇಶದಲ್ಲಿ ದೇವಾಲಯಗಳು ಮನುಷ್ಯರನ್ನು ಬೇರ್ಪಡಿಸಿದರೆ ಶೌಚಾಲಯಗಳು ಮನುಷ್ಯರನ್ನು ಒಂದು ಮಾಡುತ್ತವೇ ದೇವಾಲಯಗಳಿಗಿಂತ ಶಾಲೆಗಳು ಹೆಚ್ಚಾಗಬೇಕು ಎಂದು ಯಾವಾಗಲು ಪ್ರತಿಪಾದಿಸುತ್ತಿದ್ದರು ಎಂದರು.
ಆಶಯ ಭಾಷಣ ಮಾಡಿದ ಜಿ.ಎಸ್. ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ. ಕಿರಣ್ ಆರ್. ದೇಸಾಯಿ, ಜಿ.ಎಸ್. ಅವರದು ದರ್ಶನದ ಪ್ರಜ್ಞೆ ಅವರು ಪ್ರೀತಿಯ ಜೊತೆಗೆ ಸಂವಾದ ಮಾಡುತ್ತಿದ್ದರು. ಅದೇ ಅದೇ ಪರಂಪರೆಯನ್ನು ಮುಂದುವರೆಸಿದ ಶ್ರೀಕಂಠ ಕೂಡಿಗೆಯವರು ಪ್ರೀತಿಯ ಜೊತೆಗೆ ವೈಚಾರಿಕತೆಯ ಮನೋಭಾವನೆಯನ್ನು ಬೆಳೆಸಿದವರು ಎಂದರು.
ಕರ್ನಾಟಕ ಸಂಘದ ಉಪಾಧ್ಯಕ್ಷ ಶಂಕರ ನಾರಾಯಣ ಶಾಸ್ತಿç ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ಎಸ್. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಈಶ್ವರಪ್ಪ ಸ್ವಾಗತಿಸಿದರು. ಚೆನ್ನಬಸಪ್ಪ ನ್ಯಾಮತಿ ನಿರೂಪಿಸಿದರು. ಅನಿತಾ ಜವಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಕರಿಸಿದ್ದಪ್ಪ, ಎಸ್. ಕುಂಬಾರ್, ಡಾ.ನಾಗಮಣಿ ಎಸ್., ಲವ, ಕುಂಸಿ ಉಮೇಶ್, ಶಿ.ಜು.ಪಾಶ, ಆರಂಡಿ ಶ್ರೀನಿವಾಸಮೂರ್ತಿ, ರಮೇಶ್, ಎಂ.ಎಸ್.ಆಶಾದೇವಿ ಸೇರಿದಂತೆ ಹಲವರಿದ್ದರು.
ಇದೇ ಸಂದರ್ಭದಲ್ಲಿ ಜಿ.ಎಸ್.ಎಸ್. ಕವಿತೆಗಳ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಗೀತಾ ಹುಂಚ ಅವರು ಗೀತಾಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.