*4ನೇ ಚೆನ್ನೈ ಅಂತರಾಷ್ಟ್ರೀಯ ಪುಸ್ತಕ ಮೇಳದ (CIBF) ಉದ್ಘಾಟಿಸಿದ ಸಚಿವ ಮಧು ಬಂಗಾರಪ್ಪ ಏನೆಲ್ಲ ಮಾತಾಡಿದ್ರು?*

*4ನೇ ಚೆನ್ನೈ ಅಂತರಾಷ್ಟ್ರೀಯ ಪುಸ್ತಕ ಮೇಳದ (CIBF) ಉದ್ಘಾಟಿಸಿದ ಸಚಿವ ಮಧು ಬಂಗಾರಪ್ಪ ಏನೆಲ್ಲ ಮಾತಾಡಿದ್ರು?*

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ, 2026ರ 4ನೇ ಚೆನ್ನೈ ಅಂತರಾಷ್ಟ್ರೀಯ ಪುಸ್ತಕ ಮೇಳದ (CIBF) ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಸಾಹಿತ್ಯಾಸಕ್ತರನ್ನು ಉದ್ದೇಶಿಸಿ ಮಾತನಾಡಿದರು.

, ತಮಿಳುನಾಡು ಶಾಲಾ ಶಿಕ್ಷಣ ಸಚಿವರಾದ ಡಾ. ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರು ನೀಡಿದ ಪ್ರೀತಿಯ ಆಹ್ವಾನ ಹಾಗೂ ಆತ್ಮೀಯ ಆತಿಥ್ಯಕ್ಕೆ ಹೃತ್ಪೂರ್ವಕವಾಗಿ ಆಭಾರಿಯಾಗಿದ್ದೇನೆ ಎಂದರು.

ಸಂಸ್ಕೃತಿ ಮತ್ತು ಶಿಕ್ಷಣಕ್ಕೆ ಯಾವುದೇ ಗಡಿಗಳಿಲ್ಲ. ರಾಜ್ಯಗಳು ಹಾಗೂ ರಾಷ್ಟ್ರಗಳನ್ನು ಮೀರಿ ಸಾಹಿತ್ಯ ನಮ್ಮೆಲ್ಲರನ್ನೂ ಬೆಸೆಯುವ ಶಕ್ತಿಯಾಗಿದೆ. ವಿಶೇಷವಾಗಿ ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ನಮ್ಮೆಲ್ಲರ ಸಂಯುಕ್ತ ಪ್ರಯತ್ನ ಅಗತ್ಯವಾಗಿದೆ ಎಂದರು.

ವಿಚಾರಗಳ ವಿನಿಮಯ ಮತ್ತು ಅಕ್ಷರ ಲೋಕದ ಶಕ್ತಿಯ ಆಚರಣೆ ಇಂತಹ ವೇದಿಕೆಗಳ ಮೂಲಕ ನಿರಂತರವಾಗಿ ಮುಂದುವರಿಯಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಮಿಳುನಾಡು ಶಾಲಾ ಶಿಕ್ಷಣ ಸಚಿವರಾದ ಡಾ. ಅನ್ಬಿಲ್ ಮಹೇಶ್ ಪೊಯ್ಯಮೊಳಿ, ಸಂಸದರಾದ ಶ್ರೀಮತಿ ಕನಿಮೊಳಿ ಕರುಣಾನಿಧಿ, ಫ್ರಾಂಕ್‌ಫರ್ಟ್ ಪುಸ್ತಕ ಮೇಳದ ಉಪಾಧ್ಯಕ್ಷರಾದ ಕ್ಲೌಡಿಯಾ ಕೈಸರ್, ಫ್ರಾನ್ಸ್‌ನ ಕಾನ್ಸುಲ್ ಜನರಲ್ ಎಟಿಯೆನ್ ರೋಲ್ಯಾಂಡ್-ಪೀಗ್, ತಮಿಳುನಾಡು ಶಾಲಾ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಬಿ. ಚಂದ್ರಮೋಹನ್, ಕೇರಳ ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ ವಾಸುಕಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಇತಿಹಾಸಕಾರರಾದ ಡಾ. ಎ.ಆರ್. ವೆಂಕಟಾಚಲಪತಿ, ಚೆನ್ನೈ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರಾದ ಮನುಷ್ಯಪುತ್ತಿರನ್, ತಮಿಳುನಾಡು ಪಠ್ಯಪುಸ್ತಕ ಮತ್ತು ಶೈಕ್ಷಣಿಕ ಸೇವೆಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ. ಆರತಿ ಹಾಗೂ ಸಾರ್ವಜನಿಕ ಗ್ರಂಥಾಲಯಗಳ ನಿರ್ದೇಶಕಿ ಎಸ್. ಜಯಂತಿ ಅವರು ಉಪಸ್ಥಿತರಿದ್ದರು.