ಮಹಾನಗರ ಪಾಲಿಕೆಯ ಜಲಮಂಡಳಿಯ ಆವರಣದಲ್ಲಿ ವಾಹನಕ್ಕೆ ನುಗ್ಗಿದ ನಾಗರಹಾವು…
ಮಹಾನಗರ ಪಾಲಿಕೆಯ ಜಲಮಂಡಳಿಯ ಆವರಣದಲ್ಲಿ ವಾಹನಕ್ಕೆ ನುಗ್ಗಿದ ನಾಗರಹಾವು…
ವೀಡಿಯೋ ಮತ್ತು ಮಾಹಿತಿ- ನುಡಿಗಿಡ ಮಂಜು
ನಗರದ ಕೆ.ಇ.ಬಿ ವೃತ್ತ ದಲ್ಲಿನ ಮಹಾನಗರಪಾಲಿಕೆಯ ಜಲಮಂಡಳಿಯ ಆವರಣದಲ್ಲಿ ನಿಂತಿದ್ದ ದ್ವಿಚಕ್ರ ವಾಹನದೊಳಗೆ ನಾಗರಹಾವೊಂದು ನುಗ್ಗಿದೆ.ಇದನ್ನು ಗಮನಿಸಿದ ನೌಕರರು ಸ್ನೇಕ್ ಕಿರಣ್ ರವರಿಗೆ ಪೋನ್ ಮಾಡಿದಾಗ ತಕ್ಷಣವೇ ಸ್ಪಂದಿಸಿದ ಕಿರಣ್ ಸ್ಥಳಕ್ಕೆ ಬಂದು ನೋಡಿ ಮೆಕ್ಯಾನಿಕ್ ರನ್ನು ಕರೆಸಿ ಗಾಡಿಯ ಪಾರ್ಟ್ಸ ತೆಗೆದಾಗ ಸುಮಾರು 2.5 ಅಡಿ ಉದ್ದದ ನಾಗರಹಾವು ಪತ್ತೆಯಾಯಿತು.ನಂತರ ನಾಗರ ಹಾವನ್ನು ಹೊರತೆಗೆದು ಸುರಕ್ಷಿತವಾಗಿ ಸಾಗಿಸಲಾಯಿತು.ಸ್ಥಳದಲ್ಲಿದ್ದ ಸಾರ್ವಜನಿಕರು .ಜಲಮಂಡಳಿಯವರು ಸ್ನೇಕ್ ಕಿರಣ್ ರಿಗೆ ಧನ್ಯವಾದ ತಿಳಿಸಿದರು.


