ಕವಿಸಾಲು
01
ಕವಿಸಾಲು
Gm ಶುಭೋದಯ💐💐
*ಕವಿಸಾಲು*
1.
ಕಲಿಯುತ್ತಿರು,
ಮುಂದೆ ಸಾಗುತ್ತಿರು ಹೃದಯವೇ…
ಜೀವನವೆಂಬುದು
ಅನುಭವಗಳಿಂದಲೇ
ಸುಂದರವೂ…
2.
ಮಂದಿರ ಮಸೀದಿ ಚರ್ಚುಗಳ
ಒಳಗೂ ಹೊರಗೂ
ಭಿಕ್ಷುಕರೇ ಇರುತ್ತಾರಲ್ಲ ಹೃದಯವೇ…
ಇಬ್ಬರೂ ದಯನೀಯವಾಗಿ
ಕೇಳುತ್ತಲೇ ಇರುತ್ತಾರೆ!
3.
ಕತ್ತಿ ಸುಂದರವಾಗಿದ್ದರೆ
ಸುಮ್ಮನಿರುವುದೇ ಹೃದಯವೇ…
ಅದೂ ಕೇಳುತ್ತಿರುತ್ತೆ
ಹದ ಬೆರೆತ ರಕ್ತ!



