*ಶಿವಮೊಗ್ಗ ಚರ್ಚ್- ವೀರಶೈವ ಕಲ್ಯಾಣ ಮಂದಿರ ರಸ್ತೆಯ 118 ಅನಧಿಕೃತ ಅಂಗಡಿಗಳ ತೆರವಿಗೆ ಕಾರಣವಾಗಿದ್ದು ಹೈಕೋರ್ಟ್ ನೋಟಿಸ್!* *ವಕೀಲ ವಿನೋದ್ ರವರ ಸತತ 4 ವರ್ಷಗಳ ಹೋರಾಟಕ್ಕೆ ಸಂದ ಜಯ…*

*ಶಿವಮೊಗ್ಗ ಚರ್ಚ್- ವೀರಶೈವ ಕಲ್ಯಾಣ ಮಂದಿರ ರಸ್ತೆಯ 118 ಅನಧಿಕೃತ ಅಂಗಡಿಗಳ ತೆರವಿಗೆ ಕಾರಣವಾಗಿದ್ದು ಹೈಕೋರ್ಟ್ ನೋಟಿಸ್!*

*ವಕೀಲ ವಿನೋದ್ ರವರ ಸತತ 4 ವರ್ಷಗಳ ಹೋರಾಟಕ್ಕೆ ಸಂದ ಜಯ…*

ಶಿವಮೊಗ್ಗ ಕ್ಷೇತ್ರದ ಶಾಸಕ ಚನ್ನಬಸಪ್ಪರ ತೀವ್ರ ವಿರೋಧದ ನಡುವೆಯೂ ಶಿವಮೊಗ್ಗ ಮಹಾನಗರ ಪಾಲಿಕೆ ತನ್ನ ಸಮೀಪದ ಚರ್ಚ್ ರಸ್ತೆಯಲ್ಲಿದ್ದ 118 ಅನಧಿಕೃತ ಹೂವಿನ, ಹಣ್ಣಿನ ಅಂಗಡಿಗಳನ್ನು ಪೊಲೀಸರ ಸಹಾಯದೊಂದಿದೆ ತೆರವುಗೊಳಿಸಲು ಕಾರಣವಾಗಿದ್ದು ಕರ್ನಾಟಕ ಹೈಕೋರ್ಟ್ ಆದೇಶ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ!

ಹೈಕೋರ್ಟ್ ಚರ್ಚ್ ರಸ್ತೆಯಲ್ಲಿರು ವ ಈ ಅನಧಿಕೃತ ಅಂಗಡಿಗಳನ್ನು ಜೂನ್ 9 ರೊಳಗೆ ತೆರವುಗೊಳಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ತೆರವುಗೊಳಿಸಿದ್ದಾರೆ. ಸ್ಥಳೀಯ ಶಾಸಕರ ವಿರೋಧವಿದ್ದರೂ ಅಂತಿಮವಾಗಿ ನ್ಯಾಯಾಲಯದ ನೋಟಿಸ್ ಗೆ ಪಾಲಿಕೆ ಆಯುಕ್ತರು ಮನ್ನಣೆ ನೀಡಲೇಬೇಕಾಯ್ತು ಎಂದು ಖ್ಯಾತ ವಕೀಲ ಬಿ.ವಿನೋದ್ ಹೇಳಿದ್ದಾರೆ. ಈ ಅನಧಿಕೃತ ಅಂಗಡಿಗಳ ತೆರವಿಗಾಗಿ ಹೈಕೋರ್ಟ್ ವರೆಗೆ ಹೋಗಿ ಹೋರಾಟ ಮಾಡಿದ್ದು ಇದೇ ವಿನೋದ್ ರವರು.

ಕಳೆದ 4 ವರ್ಷಗಳಿಂದ ಸತತವಾಗಿ ಈ ಅನಧಿಕೃತ ಅಂಗಡಿಗಳ ಕಿರಿಕಿರಿ ವಿರುದ್ಧ ಹೋರಾಟ ಮಾಡುತ್ತಲೇ ಬಂದ ವಕೀಲ ವಿನೋದ್ ರವರಿಗೆ ಕೊನೆಗೂ ಜಯ ಸಿಕ್ಕಿದೆ.

ಈ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಈಗಾಗಲೇ ಪಾಲಿಕೆ ವ್ಯಾಪ್ತಿಯ ಬಸ್ ನಿಲ್ದಾಣ ಮತ್ತು ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ವಾಣಿಜ್ಯ ಸಂಕೀರ್ಣ ಇತ್ಯಾದಿ ಕಡೆ ಪ್ರತ್ಯೇಕವಾಗಿಯೇ 118 ಮಳಿಗೆಗಳನ್ನು ಸ್ಮಾರ್ಟ್ ಸಿಟಿಯಿಂದಲೇ ನಿರ್ಮಿಸಿ ಉದ್ಘಾಟನೆ ಮಾಡಿ ಲೋಕಾರ್ಪಣೆ ಕೂಡ ಮಾಡಲಾಗಿತ್ತು. ಈ ವ್ಯಾಪಾರಿಗಳಿಗೆ ಅಂಗಡಿ ಸಂಖ್ಯೆಗಳನ್ನು ಕೂಡ ನೀಡಲಾಗಿದೆ. ಕೌನ್ಸಿಲ್ ಸಭೆಯ ನಿರ್ಣಯದಂತೆ ಜಿಲ್ಲಾಧಿಕಾರಿಗಳ ಅನುಮೋದನೆ ಕೂಡ ದೊರೆತಿದೆ. ಆದರೂ ಈವರೆಗೂ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಆಗದೇ ಸಾರ್ವಜನಿಕವಾಗಿ ಕಿರಿಕಿರಿ ವಾತಾವರಣ ನಿರ್ಮಾಣವಾಗಿತ್ತು.

ಚುನಾವಣಾ ನೀತಿ ಸಂಹಿತೆ ಕಾರಣಗಳನ್ನು ಕೂಡ ನೀಡಲಾಗಿತ್ತು.

ಈಗ ಯಾವುದೇ ಸಬೂಬು ಹೇಳಲು ಸಾಧ್ಯವಾಗದೇ, ಹೈಕೋರ್ಟ್ ನೀಡಿದ ಕಾಲಮಿತಿಯೊಳಗೇ ಪಾಲಿಕೆ ಈ ಅಂಗಡಿಗಳನ್ನು ಜೆಸಿಬಿ ಮೂಲಕ ಕೆಡವಿ ತೆಗೆದಿದ್ದಾರೆ.