ಎಲ್ಲ ಬಲ್ಲ ಸರ್ವಜ್ಞ ಸಮಾನತೆಯನ್ನು ಪ್ರತಿಪಾದಿಸಿದರು : ಚಂದ್ರಭೂಪಾಲ್*
*ಎಲ್ಲ ಬಲ್ಲ ಸರ್ವಜ್ಞ ಸಮಾನತೆಯನ್ನು ಪ್ರತಿಪಾದಿಸಿದರು : ಚಂದ್ರಭೂಪಾಲ್*
ಶಿವಮೊಗ್ಗ
ಎಲ್ಲವನ್ನು ಬಲ್ಲ ಜ್ಞಾನಿಯೇ ಸರ್ವಜ್ಞ. ಸರ್ವಜ್ಞರು ಮಹಾಜ್ಞಾನಿಯಾಗಿದ್ದು ತ್ರಿಪದಿ ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದುತ್ತಾ ಸಮಾನತೆಯನ್ನು ಪ್ರತಿಪಾದಿಸಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ್ ಸರ್ವಜ್ಞರನ್ನು ಬಣ್ಣಿಸಿದರು.
ಜಿಲ್ಲಾಡಳಿತ, ಜಿ.ಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಜಿಲ್ಲಾ ಕುಂಬಾರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕುವೆಂಪು ರಂಗಮAದಿರ ಆಯೋಜಿಸಿದ್ದ ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿದರು.
ಕೇವಲ ಮಡಿಕೆ ಮಾಡುವುದು ಕುಂಬಾರಿಕೆ ಅಲ್ಲ. ಇದೊಂದು ಶ್ರೇಷ್ಟವಾದ ಕಲೆ. ಸರ್ವ ಶ್ರೇಷ್ಠ ಗಣೇಶ ಮೂರ್ತಿ ರೂಪಿಸುವ ಈ ಸಮುದಾಯದಲ್ಲಿ ಜನಿಸಿದ ನೀವೇ ಧನ್ಯರು ಎಂದ ಅವರು ಸರ್ವಜ್ಞರ ತ್ರಿಪದಿಯನ್ನು ಪ್ರತಿನಿತ್ಯ ನಾವು ಬಳಸುತ್ತೇವೆ ಆ ಮೂಲಕ ಅವರು ನಮ್ಮ ಮನಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.
ಸರ್ವಜ್ಞರು ಸಮಾಜದಲ್ಲಿ ಮೇಲು ಕೀಳು ಇರಬಾರದೆಂದು ಪ್ರತಿಪಾದಿಸಿದರು. ಅವರು ಬಸವಣ್ಣನವರ ಪ್ರತಿಪಾದಕರಾಗಿದ್ದರು. ಅವರ ವಚನಗಳಿಂದ ಪ್ರಭಾವಿತಗೊಂಡಿದ್ದರು. ಆದರೆ 12 ನೇ ಶತಮಾತನದ ವಚನಕಾರರಿಗೆ ಸಿಕ್ಕಷ್ಟು ಪ್ರೋತ್ಸಾಹ ಸರ್ವಜ್ಞರಿಗೆ ಸಿಗಲಿಲ್ಲ ಎಂದ ಅವರು ಕುಂಬಾರ ಸಮುದಾಯದಲ್ಲಿ ಜನಸಂಖ್ಯೆ ಕಡಿಮೆ ಇರಬಹುದು ಆದರೆ ಅವರ ಕಾಯಕ ನಿಷ್ಟೆ ಅಚಲವಾಗಿದೆ.
ಕುಂಬಾರ ಸಮಾಜ ಸಾಮಾಜಿಕ, ರಾಜಕೀಯ, ಆರ್ಥಿಕ ಹಿಂದುಳಿದಿದ್ದು, ಸರ್ವಾಂಗೀಣ ಅಭಿವೃದ್ದಿ ಆಗಬೇಕಿದೆ. ಹಿಂದುಳಿದ ವರ್ಗಗಳು ಜಾಗೃತಗೊಂಡು, ಎಚ್ಚರ ಆಗಬೇಕು. ಸರ್ಕಾರ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು. ಗ್ಯಾರಂಟಿ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಪಾಲಾಕ್ಷಪ್ಪ ಎಸ್ ಎನ್ ಮಾತನಾಡಿ, ಸರ್ವಜ್ಞರು ಸಮಾಜದಲ್ಲಿ ಜಾಗೃತಿ ಮೂಡಿಸಿದ ಮಹಾಜ್ಞಾನಿ. ತ್ರಿಪದಿ ಬ್ರಹ್ಮ ಎಂದು ಕರೆಯಿಸಿಕೊಳ್ಳುವ ಇವರು ಸಮಾಜದ ಅಂಕುಕೊAಡು ತಿದ್ದಿದ ದಾರ್ಶನಿಕ. ಉತ್ತಂಗಿ ಚನ್ನೆಪ್ಪನವರು ಸರ್ವಜ್ಞ ತ್ರಿಪದಿಗಳನ್ನು ಸಂಗ್ರಹಿಸುವ ಮೂಲಕ ಹೊರಜಗತ್ತಿಗೆ ಪರಿಚಯಿಸಿದ್ದಾರೆ. ಸುಮಾರು 2 ಸಾವಿರಕ್ಕೂ ಹೆಚ್ಚು ವಚನಗಳನ್ನು ಅವರು ಸಂಗ್ರಹಿಸಿದ್ದಾರೆ.
ಸರ್ವಜ್ಞರು 16 ನೇ ಶತಮಾನದಲ್ಲಿ ತ್ರಿಪದಿ ಶೈಲಿಯಲ್ಲಿ ವಚನವನ್ನು ಪರಿಣಾಮಕಾರಿಯಾಗಿ ಬಳಸುತ್ತಾರೆ. ಕನಕದಾಸ, ಪುರಂದ ದಾಸರ ಪ್ರಭಾವಕ್ಕೆ ಒಳಗಾದ ಇವರ ವಚನಗಳು ವಚನ-ದಾಸ-ಜಾನಪದ ಸಾಹಿತ್ಯ ಎರಕ ಹೊಯ್ದಂತೆ ಇವೆ.
ಇವರು ಸಮಾಜವನ್ನು ಎಚ್ಚರಿಸುವ ಕೆಲಸವನ್ನು ತ್ರಿಪದಿಗಳಿಂದ ಮಾಡಿದ್ದಾರೆ. ನಮ್ಮ ಸಮಾಜದ ಗತಿಬಿಂಬ ಇವರು. ಕನ್ನಡ ನಾಡಿನಲ್ಲಿ ಪ್ರತಿಯೊಬ್ಬರ ನಾಲಿಗೆಯಲ್ಲಿ ಸರ್ವಜ್ಞ ನಲಿಯುತ್ತಿದ್ದಾನೆ. ಆದರೆ ನಮ್ಮ ಮನೆಯ ಮಕ್ಕಳಿಗೆ ಅವರ ಬಗ್ಗೆ ತಿಳಿಸಬೇಕು. ಅವರ ವಚನಗಳನ್ನು ಕಲಿಸಬೇಕಿದೆ. ಕನ್ನಡ ಸಾಹಿತ್ಯದಲ್ಲಿ ಅಜರಾಮರ ಆಗಿರುವ ಇವರು ಆಶು ಕವಿಯಾಗಿದ್ದಾರೆ. ಜೀವನಾನುಭವವೇ ಇವರ ಸಾಹಿತ್ಯವಾಗಿದೆ. ಆಹಾರ, ಆರೋಗ್ಯ, ಹೆಣ್ಣು, ಗುರು-ಶಿಷ್ಯರ ಬಾಂಧವ್ಯ, ಭಕ್ತಿ, ವಿಜ್ಞಾನ ಹೀಗೆ ಆಡು ಮುಟ್ಟದ ಸೊಪ್ಪಿಲ್ಲವೆಂಬAತೆ ಅವರು ಹೇಳದ ವಿಷಯಗಳಿಲ್ಲ. ಸರ್ವಜ್ಞನ ಜ್ಞಾನವನ್ನು ಆಸ್ವಾದಿಸಬೇಕು ಎಂದು ಬೇಂದ್ರೆ ಬಣ್ಣಿಸಿದ್ದಾರೆ ಎಂದ ಅವರು ವಿದ್ಯಾರ್ಥಿಗಳನ್ನು ಕೇವಲ ರೈಮ್ಸ್, ಸಿನಿಮಾ ಗೀತೆಗಳಿಗೆ ಸೀಮಿತಗೊಳಿಸದೇ, ಸರ್ವಜ್ಞರ ತ್ರಿಪದಿಗಳ ವಾಚನ, ಕಂಠಪಾಠ ಸ್ಪರ್ಧೆಗಳನ್ನು ಏರ್ಪಡಿಸಬೇಕು.
ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಹೆಚ್.ಮಲ್ಲಿಕಾರ್ಜುನ ಮಾತನಾಡಿ, ಭಾರತದಾದ್ಯಂತ ಪಾದಯಾತ್ರೆಯ ಮೂಲಕ ತಿರುಗಾಡಿ ಸಮಾಜದ ಡೊಂಕನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದ ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಜಯಂತಿ ಆಚರಣೆ ಮಾಡೋಣ ಎಂದ ಅವರು ಕುಂಬಾರ ಅಭಿವೃದ್ದಿ ನಿಗಮದಲ್ಲಿ ಸಮಾಜದ ವ್ಯಕ್ತಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು. ಸಮುದಾಯ ಭವನ ನಿರ್ಮಾಣ, ಸರ್ವಜ್ಞನ ಕಂಚಿನ ಪ್ರತಿಮೆ ಸ್ಥಾಪಿಸುವಂತೆ ಮನವಿ ಮಾಡಿದರು.
ತಾಲ್ಲೂಕು ಕುಂಬಾರ ಸಂಘದ ಅಧ್ಯಕ್ಷ ಎಸ್ ಮಣಿ ಮಾತನಾಡಿ, ಸರ್ವಜ್ಞರು ಸರ್ವ ವ್ಯಾಪಿಯಾಗಿದ್ದು, ಇವರ ಮೂರ್ತಿಯನ್ನು ತಮಿಳು ನಾಡಿನಲ್ಲಿ ಸ್ಥಾಪನೆ ಮಾಡಿದ್ದಾರೆ. ಯುವ ಪೀಳಿಗೆಗೆ ಸರ್ವಜ್ಞರ ಕುರಿತು ತಿಳಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಸಮಾಜದ ಭಾಗ್ಯಲಕ್ಷ್ಮೀ ಗಣೇಶಪ್ಪ, ಸಮಾಜದ ಇತರೆ ಮುಖಂಡರು ಹಾಜರಿದ್ದರು.