*ಬಕೆಟ್ ಗಿರಾಕಿಗಳ ತೆರವು ಕಾರ್ಯಾಚರಣೆ ಯಾವಾಗಾ ಹರಿಪ್ರಸಾದ್ ಜೀ?* *ಕೆಪಿಸಿಸಿ ನೂತನ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ರವರ ಜೊತೆ ಮಾತೂ ಕಥೆಯೂ…* *ಬಕೆಟ್ ಗಿರಾಕಿಗಳ ಲೂಟಿಯೂ ಸ್ವಂತದ ದುರಂತಗಳೂ…* *ಶಿವಮೊಗ್ಗದ್ದೂ ದಾಖಲೆಗಳ ಸಮೇತ ತಮ್ಮ ಗಮನಕ್ಕೆ( ಕೊರಿಯರ್ ಕಳಿಸಿರುವೆ)* *ಶ್ರೀಯುತ ಹರಿಪ್ರಸಾದ್ ಜೀ,* (ನಿಮ್ಮೊಂದಿಗೆ ಮಾತಾಡಿದ ಮೇಲೆ ಬರೆಯುತ್ತಿರುವ( ಬರೆಯಿರಿ ಎಂದು ಹೇಳಿದ ಮೇಲೆ) ವಿಶೇಷ ಪತ್ರ) ಇಲ್ಲಿ ಬಕೆಟ್ ಗಿರಾಕಿಗಳದ್ದೇ ಪ್ರಪಂಚ.
*ಬಕೆಟ್ ಗಿರಾಕಿಗಳ ತೆರವು ಕಾರ್ಯಾಚರಣೆ ಯಾವಾಗಾ ಹರಿಪ್ರಸಾದ್ ಜೀ?*
*ಕೆಪಿಸಿಸಿ ನೂತನ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ರವರ ಜೊತೆ ಮಾತೂ ಕಥೆಯೂ…*
*ಬಕೆಟ್ ಗಿರಾಕಿಗಳ ಲೂಟಿಯೂ ಸ್ವಂತದ ದುರಂತಗಳೂ…*
*ಶಿವಮೊಗ್ಗದ್ದೂ ದಾಖಲೆಗಳ ಸಮೇತ ತಮ್ಮ ಗಮನಕ್ಕೆ( ಕೊರಿಯರ್ ಕಳಿಸಿರುವೆ)*
*ಶ್ರೀಯುತ ಹರಿಪ್ರಸಾದ್ ಜೀ,*
(ನಿಮ್ಮೊಂದಿಗೆ ಮಾತಾಡಿದ ಮೇಲೆ ಬರೆಯುತ್ತಿರುವ( ಬರೆಯಿರಿ ಎಂದು ಹೇಳಿದ ಮೇಲೆ) ವಿಶೇಷ ಪತ್ರ)
ಇಲ್ಲಿ ಬಕೆಟ್ ಗಿರಾಕಿಗಳದ್ದೇ ಪ್ರಪಂಚ.
ನೀವು ಬಂದಾಗಲೋ, ಕಾಂಗ್ರೆಸ್ ನಾಯಕರು ಬಂದಾಗಲೋ ಬಂದು ಸೇರುವ ಬೆಲ್ಲದ ಇರುವೆಗಳ ಥರ ಇವೆ ಕೆಲ ಜಿಲ್ಲಾ ಕಾಂಗ್ರೆಸ್ ಕಚೇರಿಗಳು. ಬಕೆಟ್ ಗಿರಾಕಿಗಳಾದ ಯಾರಿಗೂ ಇಲ್ಲಿ ಪಕ್ಷಕ್ಕಿಂತ ಪಕ್ಷದ ಒಲೆ ಮೇಲೆ ಅವರವರ ರೊಟ್ಟಿ ಬೇಯುತ್ತಿರಬೇಕು. ಸಂಘಟನೆ ಮಾಡಲೋ, ನಿಜವಾಗಲೂ ಕಾಂಗ್ರೆಸ್ಸಿನ ಕೆಲಸ ಮಾಡಲೋ ಬಂದು ಬಿಟ್ಟರೆ ಅವರ ಕೆಂಗಣ್ಣೋ…ದೇವರೇ ಕಾಪಾಡಬೇಕು.
ಕಳೆದ ಚುನಾವಣೆಯಲ್ಲಿ ಹಣ ಕೊಳ್ಳೆ ಹೊಡೆಯಲಾಗಲಿಲ್ಲ ಅಂತ ಒಬ್ಬ ಬಿಳಿ ತಲೆ ಕಾಂಗ್ರೆಸ್ಸಿಗ ಈಗ ನಮ್ಮ ಜಿಲ್ಲೆಯ ಕಾಂಗ್ರೆಸ್ಸನ್ನೇ ನಿಯಂತ್ರಿಸಲು ಹೊರಡುತ್ತಾನೆಂದರೆ ಅಲ್ಲಿ ಸತ್ಯವಂತರಿಗೆ ಕಾಲವಿಲ್ಲ ಅಥವಾ ನಿಜವಾಗಲೂ ಕಾಂಗ್ರೆಸ್ಸಿನ ಕೆಲಸ ಮಾಡುವವರಿಗೆ ಬೆಲೆ ಇಲ್ಲ ಅನ್ನೋ ಅಭಿಪ್ರಾಯಗಳಿವೆ ಅಧ್ಯಕ್ಷರೇ…
ಆ ಮನುಷ್ಯ ಕಾಂಗ್ರೆಸ್ ಸಂಘಟಕ ಆಗಿದ್ದೇ ಆದಲ್ಲಿ ಅದೆಷ್ಟು ಕಾರ್ಯಕ್ರಮಗಳಿಗೆ ಜನರನ್ನು ಸೇರಿಸಿದ್ದಾನೆ ಅಂತ ನಿಮ್ಮ ಬಳಿ ಆಯಾ ಸಂದರ್ಭದ ಅಧಿಕೃತ ವರದಿಗಳನ್ನು ನೀಡಿರುವೆ(ನೀವು ಕೇಳಿದ್ದೀರೆಂಬ ಕಾಳಜಿಯಿಂದ)…ಚುನಾವಣೆಯ ಸಂದರ್ಭಗಳಲ್ಲಿ ಬೂತ್ ಅಧ್ಯಕ್ಷರೆಂದು ಬಿಂಬಿಸಿ ಹಣ ಕೊಳ್ಳೆ ಹೊಡೆಯುತ್ತಿರುತ್ತಾನೆ. ಅ ಬೂತ್ ಅಧ್ಯಕ್ಷನಿಗೇ ಗೊತ್ತಾಗದೇ ಆತನೋ ತಾನೇ ಮಾರುವ ಹಾಲು ಕುಡಿದು ಸಮಾಧಾನ ಪಟ್ಟುಕೊಳ್ಳುವುದೂ ಇದೆ…
ಕೆಪಿಸಿಸಿ ಅಧ್ಯಕ್ಷರೇ, ಈ ಥರದ ಗಿರಾಕಿಗಳು ಅದೆಷ್ಟರ ಮಟ್ಟಿಗೆ ನಿಮ್ಮ ಕಾಳಜಿಯನ್ನು ಕಾಪಾಡಿ ಕಾಂಗ್ರೆಸ್ಸಿನ ಕೈ ಬಲ ಪಡಿಸುತ್ತಾರೋ ಗೊತ್ತಿಲ್ಲ…ಕಳಿಸಿರುವ ದಾಖಲೆಗಳನ್ನೊಮ್ಮೆ ಪರಿಶೀಲಿಸಿ…
ನಿಮ್ಮ ಪ್ರೀತಿಯ ಪತ್ರಕರ್ತ
*ಶಿ.ಜು.ಪಾಶ*
(8050112067)


