*ನೂತನ ಸಚಿವ ಮಧು ಬಂಗಾರಪ್ಪರನ್ನು ಅಭಿನಂದಿಸಿದ ಶಿವಮೊಗ್ಗದ ಪ್ರಮುಖರು*

*ನೂತನ ಸಚಿವ ಮಧು ಬಂಗಾರಪ್ಪರನ್ನು ಅಭಿನಂದಿಸಿದ ಶಿವಮೊಗ್ಗದ ಪ್ರಮುಖರು*

ನೂತನ ಸಚಿವ ಸಂಪುಟದಲ್ಲಿ ಮತ್ತೆ ಸಚಿವರಾಗಿ ಹೆಸರು ಸೂಚಿಸಲ್ಪಡುತ್ತಿದ್ದಂತೆಯೇ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಸಂತಸ ಗರಿಗೆದರಿದ್ದು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಾಯಕರು ಬೆಂಗಳೂರಿನ ನಿವಾಸದಲ್ಲೇ ಮಧು ಬಂಗಾರಪ್ಪರನ್ನು ಅಭಿನಂದಿಸಿದ್ದಾರೆ.

ಬೆಂಗಳೂರಿನ ಸದಾಶಿವ ನಗರದ ಅವರ ನಿವಾಸದಲ್ಲೇ ಎಂಎಲ್ ಸಿ ಶ್ರೀಮತಿ ಬಲ್ಕೀಸ್ ಬಾನು, ಸೂಡಾ ಮಾಜಿ ಅಧ್ಯಕ್ಷರೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳೂ ಆದ ಎನ್.ರಮೇಶ್, ಮುಖಂಡರಾದ ನಗರದ ಮಹಾದೇವಪ್ಪ, ರಮೇಶ್ ಶಂಕರಘಟ್ಟ, ಹನುಮಂತು ಸೇರಿದಂತೆ ಹಲವರು ಅಭಿನಂದಿಸಿದರು.