ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಏನಂದ್ರು? ಏನೆಲ್ಲಾ ಹೇಳಿದ್ರು?* *ಶಿವಮೊಗ್ಗಾದಾ ಜನತೇಗೇ ನನ್ನ ನಮಸ್ಕಾರ್ ಗಳು ಅಂತ ಭಾಷಣ ಆರಂಭಿಸಿದ ಮೋದಿ* *ಕಾಂಗ್ರೆಸ್ ಸುಳ್ಳುಗಳನ್ನೇ ಹೇಳುತ್ತಾ ನಂಬಿಸುತ್ತಾ ಬಂದಿದೆ* *ಮುಂದಿನ 5 ವರ್ಷಗಳಲ್ಲಿ ದೇಶದ ಸ್ಥಿತಿಯೇ ಬದಲಾಗಲಿದೆ* *ಕರ್ನಾಟಕದ 28 ಕ್ಷೇತ್ರಗಳಲ್ಲೂ ಕಮಲ ಅರಳಲಿದೆ*

*ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಏನಂದ್ರು? ಏನೆಲ್ಲಾ ಹೇಳಿದ್ರು?*

*ಶಿವಮೊಗ್ಗಾದಾ ಜನತೇಗೇ ನನ್ನ ನಮಸ್ಕಾರ್ ಗಳು ಅಂತ ಭಾಷಣ ಆರಂಭಿಸಿದ ಮೋದಿ*

*ಕಾಂಗ್ರೆಸ್ ಸುಳ್ಳುಗಳನ್ನೇ ಹೇಳುತ್ತಾ ನಂಬಿಸುತ್ತಾ ಬಂದಿದೆ*

*ಮುಂದಿನ 5 ವರ್ಷಗಳಲ್ಲಿ ದೇಶದ ಸ್ಥಿತಿಯೇ ಬದಲಾಗಲಿದೆ*

*ಕರ್ನಾಟಕದ 28 ಕ್ಷೇತ್ರಗಳಲ್ಲೂ ಕಮಲ ಅರಳಲಿದೆ*

ಶಿವಮೊಗ್ಗಾದಾ ಜನತೇಗೇ ನನ್ನ ನಮಸ್ಕಾರ್ ಗಳು ಅಂತ ಭಾಷಣ ಆರಂಭಿಸಿದ ಮೋದಿ ಜನರ ಪ್ರೀತಿ, ಆಶೀರ್ವಾದ, ಜನ ಸಾಗರದ ಈ ದೃಶ್ಯ ಬಿಜೆಪಿಗೆ ದೊಡ್ಡ ಶಕ್ತಿಯಾಗಿದೆ. ಇಡೀ ಮೈದಾನ ಸ್ಫೂರ್ತಿಯ ತಾಣವಾಗಿದೆ ಎಂದರು.

ಶಿವಮೊಗ್ಗ ಜನಸಂಘದ ಸಮಯದಲ್ಲಿ ಮುನಿಸಿ ಪಾರ್ಟಿಯ ಮೆಂಬರೂ ಇಲ್ಲದ ಸಂದರ್ಭದಲ್ಲಿ ಯಡಿಯೂರಪ್ಪ ತಮ್ಮ ಯೌವನವನ್ನೇ ಕಳೆದಿದ್ದಾರೆ. ಅವರ ತಪೋಭೂಮಿ ಇದು.

28 ಕ್ಷೇತ್ರಗಳನ್ನೂ ಬಿಜೆಪಿ ಎನ್ ಡಿಎ ಗೇ ಕೊಡಿ. 400 ಮೀರುವ ಯೋಜನೆಯಲ್ಲಿ ಸಫಲತೆ ಕಾಣಲು ಕರ್ನಾಟಕದ ಭೂಮಿಕೆ ಮುಖ್ಯವಾಗಿದೆ. ವಿಕಸಿತ ಭಾರತಕ್ಕಾಗಿ ಈ 400 ಕ್ಕಿಂತ ಹೆಚ್ಚಿನ ಸೀಟುಗಳ ಅವಶ್ಯಕತೆ ಇದೆ.
ಭಯೋತ್ಪಾದನೆ ವಿರುದ್ಧ, ಅಭಿವೃದ್ಧಿಗಾಗಿ ಈ ಬಾರಿ 400 ಸೀಟು ದಾಟಿಸಿ. ಹತ್ತು ವರ್ಷಗಳಲ್ಲಿ ಬಿಜೆಪಿಯ ಕೆಲಸ ನೋಡಿದ್ದೀರಿ.

ಕಾಂಗ್ರೆಸ್ ಬಳಿ ವಿಕಾಸದ ಯೋಜನೆಗಳಿಲ್ಲ. ಸುಳ್ಳು ಹೇಳುತ್ತೆ, ದೊಡ್ಡ ದೊಡ್ಡ ಸುಳ್ಳು ಹೇಳುತ್ತೆ. ತನ್ನ ಸುಳ್ಳು ಉಳಿಸಿಕೊಳ್ಳಲು ಮತ್ತೆ ಸುಳ್ಳು ಹೇಳುತ್ತೆ. ಸಿಕ್ಕಿಕೊಂಡರೆ ಬೇರೊಬ್ಬರ ತಲೆಯ ಮೇಲಿಟ್ಟು ನಾಟಕವಾಡುತ್ತೆ.

ಕಾಂಗ್ರೆಸ್ ಸುಳ್ಳುಗಳನ್ನೇ ಹೇಳುತ್ತಾ ಬಂದಿದೆ. ರಾಜ್ಯದಲ್ಲಿರೋ ಕಾಂಗ್ರೆಸ್ ಕೂಡ ಮೋದಿ ಮೇಲೆ, ಕೇಂದ್ರದ ಮೇಲೆ ಸುಳ್ಳು ಆರೋಪ ಹೊರಿಸುತ್ತಾ ಬಂದಿದೆ. ಅದು ಜನಸೇವೆ ಮಾಡುವುದಿಲ್ಲ. ಕರ್ನಾಟಕ ಕಾಂಗ್ರೆಸ್ ನ ಎಟಿಎಂ ಆಗಿ ಹೋಗಿದೆ. ಸರಕಾರ ನಡೆಸಲು ಇವರ ಬಳಿ ಹಣವೇ ಇಲ್ಲದಷ್ಟು ಲೂಟಿ ನಡೆದಿದೆ.

ಇಲ್ಲಿ ಶ್ಯಾಡೋ, ಸೂಪರ್ ಸೇರಿದಂತೆ ಹಲವು ಸಿಎಂಗಳ ಜೊತೆ ದೆಹಲಿಯ ಕಲೆಕ್ಷನ್ ಮಿನಿಸ್ಟರ್ ಕೂಡ ಇದೆ. ಇದರ ಪರಿಣಾಮ ರಾಜ್ಯದ ಜನರ ಮೇಲಾಗುತ್ತದೆ.ಜನ ಸಿಟ್ಟಾಗುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ
ಜನ ಆಕ್ರೋಶಿತರಾಗುತ್ತಿದ್ದಾರೆ‌. ಈಗ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸೀಟುಗಳ ಮೇಲೂ ಜನ ಬಿಜೆಪಿ ಎನ್ ಡಿಎ ಮೊಹರು ಬೀಳಲಿ.

ಮುಂಬೈಯ ಶಿವಾಜಿ ಪಾರ್ಕಲ್ಲಿ ಹಿಂದೂ ಶಕ್ತಿಯನ್ನು ಸಮಾಪ್ತಿಗೊಳಿಸಲು ಇಂಡಿಯಾ ಘೋಷಿಸಿದೆ. ನಾನದನ್ನು ಆಗಲು ಬಿಡಲ್ಲ. ಹಿಂದೂ ಧರ್ಮದ ಶಕ್ತಿ ಉಪಾಸಕ ನಾನು. ಈ ದೇಶದ ಮಹಿಳೆ ಕೂಡ ಈ ಶಕ್ತಿಯ ಪ್ರತಿಬಿಂಬ. ನಮ್ಮ ಸರ್ಕಾರ ಮಹಿಳಾ ಶಕ್ತಿಗೆ ಸಾಧ್ಯವಾದಷ್ಟು ಯೋಜನೆಗಳನ್ನು ರೂಪಿಸಿದೆ. ಮಹಿಳಾ ಶಕ್ತಿ ನನ್ನ ವೋಟರ್ ಅಲ್ಲ. ನನ್ನ ದೊಡ್ಡ ಸುರಕ್ಷಾ ಕವಚ. ಕುವೆಂಪು ಕೂಡ ಈ ಶಕ್ತಿ ಬಗ್ಗೆ ಮಾತಾಡಿದ್ದಾರೆ. ಇಂಡಿಯಾ ಸಂಘಟಕರು ಈ ಶಕ್ತಿಯನ್ನು ವಿನಾಶಗೊಳಿಸಲು ಹೊರಟಿದ್ದಾರೆ. ಇದರಿಂದ ಮಹಿಳೆ, ಮಹಿಳಾ ಯೋಜನೆಗಳ ಮೇಲೆ ಯುದ್ಧ ಸಾರಿದಂತೆ.

ಕಾಂಗ್ರೆಸ್ ಗೆ ಉತ್ತರ ನೀಡಲು ಮಹಿಳೆ ಸಿದ್ಧವಾಗಿದ್ದಾಳೆ. ಅವರಿಗೆ ಉತ್ತರ ಸಿಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಲ್ಲದನ್ನೂ ಮಾಡಬಲ್ಲದು. ಬ್ರಿಟೀಷರು ಹೋದರೂ ಅವರ ಬುದ್ದಿಯನ್ನು ಕಾಂಗ್ರೆಸ್ ಜೊತೆಗಿಟ್ಟುಕೊಂಡಿದೆ. ಎಲ್ಲದನ್ನೂ ಹರಿದು ಹಂಚುವುದೇ ಇದರ ಕೆಲಸ. ಮತ್ತೆ ದೇಶವನ್ನು ಹರಿದು ಹಂಚಲು ನೋಡುತ್ತಿದೆ

ದೇಶವನ್ನೀಗ ಬುಲೆಟ್, ಅಂಡರ್ ವಾಟರ್ ಟ್ರೈನುಗಳ ಮೂಲಕ, ಅಭಿವೃದ್ಧಿಯ ಕಣ್ಣುಗಳಿಂದ ನೋಡಲಾಗುತ್ತಿದೆ. ಶಿವಮೊಗ್ಗ ಕೂಡ ಕೇಂದ್ರದ ಅಭಿವೃದ್ಧಿ ಯೋಜನೆಗಳ ಮೂಲಕ ಬೆಳೆಯುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ದೇಶದ ಸ್ಥಿತಿಯೇ ಬದಲಾಗಲಿದೆ. ಮೂರನೇ ದೊಡ್ಡ ಆರ್ಥಿಕಾಭಿವೃದ್ಧಿ ದೇಶವಾಗಲಿದೆ.

ಬಿ.ವೈ. ರಾಘವೇಂದ್ರ ಸೇರಿದಂತೆ ಎಲ್ಲರನ್ನೂ ಗೆಲ್ಲಿಸಿ. ನಾನು ಗ್ಯಾರಂಟಿಗಳನ್ನು ಕೊಟ್ಟಿದ್ದೇನೆ. ಬೂತ್ ಗಳಲ್ಲೆಲ್ಲ ಕಮಲವನ್ನೇ ಅರಳಿಸಿ ಎಂದು ಭಾಷಣ ಮುಗಿಸಿದರು.

 

ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದಲ್ಲಿ ಹಮ್ಮಿಕೊಂಡಿರುವ ಬಿಜೆಪಿಯ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.

ಸ್ವಾಗತ ಕೋರಿದ ಸಂಸದ ಬಿ.ವೈ.ರಾಘವೇಂದ್ರ, ಕುವೆಂಪು, ಬಸವಣ್ಣ ಹೇಳಿದಂತೆ ಬದುಕುತ್ತಿದ್ದಾರೆ. ಭಾರತೀಯ, ಭಾರತ ಎಂದರೆ ಉದಾಸೀನ ಮಾಡುವ ಕಾಲವೊಂದಿತ್ತು. ಈಗ ಹೆಮ್ಮೆಯಿಂದ ಹೇಳುವಂತಾಗಿದೆ ಎಂದರು.

ಕೇಂದ್ರ ಸಂಸದೀಯ ಮಂಡಳಿ ಸದಸ್ಯರೂ ಮಾಜಿ ಮುಖ್ಯಮಂತ್ರಿಗಳೂ ಆದ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಭಾರತದ ಲೋಕಪ್ರಿಯ ಪ್ರಧಾನ ಮಂತ್ರಿ ಎಂದು ಹಿಂದಿಯಲ್ಲಿ ಸ್ವಾಗತಿಸಿದರು.
ಮೋದಿಯವರು ಶಿವಮೊಗ್ಗದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಅವರ ನೇತೃತ್ವದ ಸರ್ಕಾರ ಪ್ರತಿ ಕ್ಷಣವೂ ಕೆಲಸ ಮಾಡುವಂಥದ್ದು. ಗಡಿ ರಕ್ಷಣೆಗೆ, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಅಖಂಡ ಭಾರತದ ಕನಸಿಗೆ ನೀರೆರೆದಿದ್ದಾರೆ. ಕೋಮು ಸಂಘರ್ಷವಿಲ್ಲದೇ ಶ್ರೀರಾಮ ದೇವಾಲಯ ನಿರ್ಮಾಣ ಮಾಡಿದ್ದಾರೆ. ಮೂರನೇ ಬಲಿಷ್ಠ ಆರ್ಥಿಕ ವ್ಯವಸ್ಥೆ ಭಾರತ ಇವರ ನೇತೃತ್ವದಲ್ಲಿ ಹೊಂದಲಿದೆ ಎಂದರು.

ಶಿವಮೊಗ್ಗ ಅಭಿವೃದ್ಧಿ ಆಗಿರುವುದಕ್ಕೆ ಮೋದಿಯವರೇ ಕಾರಣ. 28 ಕ್ಕೆ 28 ಕ್ಷೇತ್ರಗಳನ್ನು ಗೆದ್ದು ಮೋದಿಯವರಿಗೆ ಅರ್ಪಿಸೋಣ. ಕನ್ನಡದ ಮೇಲೆ ಅವರಿಗೆ ಪ್ರೀತಿ ಇದೆ. ರಾಜ್ಯದ ಮೇಲೂ ಅವರಿಗೆ ವಿಶೇಷ ಪ್ರೀತಿ ಇದೆ ಎಂದು ಯಡಿಯೂರಪ್ಪ ಗೌರವ ನುಡಿಗಳನ್ನು ಸಮರ್ಪಿಸಿದರು.