ಎಂ.ಶ್ರೀಕಾಂತ್ @ ಶ್ರೀಕಾಂತಣ್ಣ;* *ಅಚ್ಚರಿಗಳ ಜಾಡು ಹಿಡಿದು…*
*ಎಂ.ಶ್ರೀಕಾಂತ್ @ ಶ್ರೀಕಾಂತಣ್ಣ;*
*ಅಚ್ಚರಿಗಳ ಜಾಡು ಹಿಡಿದು…*
ಕುವೆಂಪು ಸಾಹಿತ್ಯದಲ್ಲಿ ಒಂದು ಮಾತು ಬರುತ್ತದೆ. ಸರ್ವ ಜನಾಂಗದ ಶಾಂತಿಯ ತೋಟ ಅಂತ. ಅಂಥೊಬ್ಬ ವ್ಯಕ್ತಿಯನ್ನು ನಾನು ಕಂಡಿದ್ದು ಎಂ.ಶ್ರೀಕಾಂತ್ @ ಕಾಂತಣ್ಣನಲ್ಲಿ!
ಇದು ಆಶ್ಚರ್ಯ ಎನಿಸಬಹುದು. ಅವರ ಸೇವೆಗೆ ಮಿತಿಗಳಿಲ್ಲ, ಸಹಾಯಕ್ಕೆ ಧರ್ಮದ ಗಡಿಗಳಿಲ್ಲ. ಬಡವರು, ಶ್ರೀಮಂತಿಕೆಯ ತೋರ್ಪಡಿಕೆ ಕೂಡ ಅವರಲ್ಲಿಲ್ಲ. ಎಲ್ಲರನ್ನೂ ಮೆಚ್ಚುವ, ಎಲ್ಲರಿಗೂ ಮೆಚ್ಚುಗೆಯಾಗುವ ವ್ಯಕ್ತಿ ಮತ್ತು ವ್ಯಕ್ತಿತ್ವ ಶ್ರೀಕಾಂತ್ ರವರದು.
ಅವರು ರಾಜಕಾರಣದಲ್ಲಿ ಬೆಳೆಯಬೇಕೆಂದೇ ಬಂದರು. ಜನ ರಾಜಕಾರಣದಲ್ಲಿ ಅವರನ್ನು ಕೈ ಹಿಡಿದು ಬೆಳೆಸಲಿಲ್ಲ. ಆದರೆ, ಶ್ರೀಕಾಂತ್ ಬೇಸರವಾಗಲೇ ಇಲ್ಲ; ಬದಲಿಗೆ ತಮ್ಮನ್ನು ರಾಜಕೀಯವಾಗಿ ನಿರ್ಲಕ್ಷ್ಯಿಸಿದ ಜನರ ಜೊತೆಗೇ ಇದ್ದರು. ಅವರ ಕಷ್ಟ- ಸುಖ, ಹಬ್ಬ- ಸೂತಕಗಳಲ್ಲೆಲ್ಲ ಹೆಗಲಾದರು. ಈಗಲೂ ಅವರ ಹೆಗಲು ಬಲಶಾಲಿ ಮತ್ತು ಸರ್ವ ಸ್ವತಂತ್ರ.
ದ್ವೇಷಿಸಿದ್ದು ಕಾಣಲಿಲ್ಲ…ಪ್ರೀತಿಸಿದ್ದೇ ಕಂಡಿದ್ದೇನೆ. ದ್ವೇಷಿಸಿದವರ ಹೆಗಲ ಮೇಲೂ ಪ್ರೀತಿಯಿಂದ ಕೈ ಹಾಕಿ ಮಾತಾಡಿಸಬಲ್ಲ ದೊಡ್ಡ ಧೀರತನ ಶ್ರೀಕಾಂತಣ್ಣನಲ್ಲಿ ಕಾಣಬಹುದು.
ಅವರದು ಜನರ ಹಾದಿ. ಹಾಗಾಗಿ, ಅವರು ಜನನಿಭಿಡ ಜಾಗಗಳಲ್ಲೇ ಇರುತ್ತಾರೆ ಅಥವಾ ಅವರು ಏಕಾಂಗಿಯಾಗಿರಲು ಬಯಸಿದರೂ ಅಲ್ಲಿ ಜನನಿಭಿಡ ಪ್ರದೇಶ ಸೃಷ್ಟಿಯಾಗಿಬಿಡುತ್ತದೆ!
ರೈತ ಮಹಾ ಪಂಚಾಯತ್, ಶಾಂತಿಗಾಗಿ ನಡಿಗೆ ಸೇರಿದಂತೆ ಬಹಳಷ್ಟು ನೆನಪಾರ್ಹ ಹೋರಾಟಗಳ ಹಿಂದೆ ಶ್ರೀಕಾಂತಣ್ಣನ ಕೈವಾಡ ವಿಶೇಷವಾಗಿ ಇದ್ದೇ ಇದೆ.
ಇಂಥ ಅಚ್ಚರಿಗಳೊಂದಿಗೆ ಬೆಳೆಯುತ್ತಿರುವ, ಜನರ ಹೃದಯಗಳಲ್ಲಿ ಅರಳರಳಿ ಹೊಳೆಯುತ್ತಿರುವ ಎಂ.ಶ್ರೀಕಾಂತಣ್ಣನ ಹುಟ್ಟುಹಬ್ಬದ ಆಚರಣೆ ಮಾ.22ರ ಶುಕ್ರವಾರದ ಮಟ್ಟಿಗೆ ದಾಖಲಾದ ಇತಿಹಾಸ. ಬೆಳಗಿನಿಂದ ಮಧ್ಯರಾತ್ರಿಯವರೆಗೂ ನೂರಾರು, ಸಾವಿರಾರು ಜನ ತಮ್ಮ ಸ್ವಂತ ಖರ್ಚಿನಲ್ಲಿಯೇ ಈ ಶ್ರೀಕಾಂತಣ್ಣ ಎಂಬ ಅಯಸ್ಕಾಂತಕ್ಕೆ ಸತ್ಕರಿಸಿದ್ದಾರೆ. ತಮ್ಮದೇ ಜನ್ಮದಿನ ಎಂಬಂತೆ ಸಂಭ್ರಮಿಸಿದ್ದಾರೆ…
ಅವರು ನಮ್ಮ ಹೆಮ್ಮೆ. ಅವರಿಂದಲೇ ನಾನೂ ಕೂಡ ರಾಜಕೀಯಕ್ಕಿಳಿಯುವಂತಾಯ್ತು. ಸಣ್ಣ ಪುಟ್ಟ ಸಮಾಜ ಸೇವೆಗಿಳಿಯುವಂತಾಯ್ತು. ಈ ವಿಚಾರದಲ್ಲಿ “ನಾನೆಂಬುದು ಕೂಡ ಅವರೇ- ಅವರೆಂಬುದು ಕೂಡ ನಾನೇ”…
ಮತ್ತೊಮ್ಮೆ ಶ್ರೀಕಾಂತಣ್ಣನಿಗೆ ಜನ್ಮದಿನದ ಶುಭಾಶಯಗಳನ್ನು ಹೇಳುತ್ತಾ…
– *ಶಿ.ಜು.ಪಾಶ*
8050112067