ಮಾಸ್ಟರ್ ಕಟ್ ಕಟ್ಟಿಂಗ್ ಶಾಪ್ ಮಾಲೀಕ ಬ್ಲೇಡ್ ಸೀನನ ವಿರುದ್ಧ ಎಫ್ ಐ ಆರ್
ವೆಂಕಟೇಶ ಸೇರಿ 11ಜನರಿಂದ ದೊಡ್ಡಪೇಟೆ ಠಾಣೆಯಲ್ಲಿ ದೂರು
ಶಿವಮೊಗ್ಗದ ಸುಂದರ್ ಆಶ್ರಯ ಬಳಿ ಇರುವ ಮಾಸ್ಟರ್ ಕಟ್ ಕಟ್ಟಿಂಗ್ ಶಾಪ್ ಮಾಲೀಕ ಶ್ರೀನಿವಾಸ್ @ ಬ್ಲೇಡ್ ಸೀನನ ಮೇಲೆ ದೊಡ್ಡಪೇಟೆ ಪೊಲೀಸರು
ಲಿಖಿತ ದೂರಿನ ಆಧಾರದ ಮೇಲೆ ಎಸ್ ಸಿ ಎಸ್ ಟಿ ಕಾಯ್ದೆಯೂ ಸೇರಿದಂತೆ ಹಲವು ಮೊಕದ್ದಮೆ ದಾಖಲಿಸಿದ್ದಾರೆ.
ಬ್ಲೇಡ್ ಸೀನ ಸೇರಿದಂತೆ ಐದಾರು ಜನರ ಮೇಲೆ ಪ್ರಕರಣ ದಾಖಲಾಗಿದೆ. ನಾಗರಾಜ್, ರಶ್ಮಿ, ಎನ್ ಪಿ ವೆಂಕಟೇಶ, ಸುನೀತ ರಾಜ್ ಸೇರಿದಂತೆ 11 ಜನ ದೂರು ನೀಡಿದ್ದಾರೆ.
ಆದಿ ದ್ರಾವಿಡ ಜನಾಂಗಕ್ಕೆ ಸೇರಿದ ಮಾರ್ನಮಿ ಬೈಲಿನ ವಾಸಿ ವೆಂಕಟೇಶ ಬಿನ್ ಪಿ.ಪೆಂಚಾಲಯ್ಯ ಕಳೆದ 2 ವರ್ಷಗಳ ಹಿಂದೆ 3 ಲಕ್ಷ ರೂ.ಗಳನ್ನು ಹೊಸ ಕಟಿಂಗ್ ಶಾಪ್ ಆರಂಭಿಸಲು ಶ್ರೀನಿವಾಸನಿಗೆ ನೀಡಿದ್ದರು. ಆಗ ಕೊಡುತ್ತೇನೆ ಈಗ ಕೊಡುತ್ತೇನೆ ಅಂತ ಸಾಲ ವಾಪಸ್ ಕೊಡದೇ ಓಡಾಡಿಸುತ್ತಲೇ ಇದ್ದ. ತಂದೆಯ ಆರೋಗ್ಯ ಕೆಟ್ಟಿದ್ದರಿಂದ ವೆಂಕಟೇಶ್ ಮತ್ತೊಮ್ಮೆ ಕಟಿಂಗ್ ಶಾಪ್ ಬಳಿ ಹೋಗಿ ಹಣ ಕೇಳಿದ್ದಾರೆ.
ಆಗ, ಶ್ರೀನಿವಾಸ್ ಐದಾರು ಜನ ಹುಡುಗರ ಜೊತೆ ಸೇರಿ ಅವಾಚ್ಯವಾಗಿ ಬೈದು ಜಾತಿನಿಂದನೆ ಮಾಡಿದ. ದೂರುದಾರ ವೆಂಕಟೇಶ್ ಜೊತೆ ಬಂದವರನ್ನೂ ಬೈದಿದ್ದಾನೆ.
ನಾನು ಯಾರೆಂದು ನಿಮಗೆ ಗೊತ್ತಿಲ್ಲ. ನಾನು ಬ್ಲೇಡ್ ಸೀನಾ. ನನ್ ಹೆಸರು, ವಿಳಾಸ ಕೇಳಿದ್ರೇನೇ ಅರ್ಧ ಶಿವಮೊಗ್ಗ ನಡುಗುತ್ತೆ ಎಂದೆಲ್ಲ ಹೇಳಿ ಬೆದರಿಸಿದ್ದಾನೆ. ತಾಕತ್ತಿದ್ದರೆ ಹಣ ವಾಪಸ್ ಪಡೆಯಿರಿ ಎಂದಿದ್ದಾನೆ. ಕೈ ಕಾಲು ಮುರಿಸಿ ಜೀವ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾನೆಂದು ನಾಗರಾಜ್, ಭಾರತಿ, ವೆಂಕಟೇಶ ಎನ್ ಪಿ, ಸುನೀತ ರಾಜ್, ಅರುಣ್, ಭಾರತಿ, ಟಿ.ಜಿ.ಆನಂದ, ರಾಧಾ, ಪ್ರೇಮ್ ಕುಮಾರ್, ಎಂ.ಮಂಜುನಾಥ ಮತ್ತು ಪರಶು ರಾಮ್ ದೂರಿನಲ್ಲಿ ವಿವರಿಸಿದ್ದಾರೆ.
ಈ ದೂರು ಆಧರಿಸಿ ದೊಡ್ಡಪೇಟೆ ಪೊಲೀಸರು 110/24ರಂತೆ ಎಫ್ ಐ ಆರ್ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.