ಆರ್ ಎಂ ಎಂ, ಎಂ ಶ್ರೀ, ಆಮಂ, ಆರ್ ಪ್ರ, ಕರ,ಬ ಬಾ, ರ ಶೆ;ಶಿವಮೊಗ್ಗ ಲೋಕಸಭಾ ಉಸ್ತುವಾರಿಗಳ ನೇಮಕ

ಶಿವಮೊಗ್ಗ

ಲೋಕಸಭಾ ಚುನಾವಣೆಯ ಸಿದ್ಧತೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ದೃಷ್ಟಿಯಿಂದ  ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ  ಉಸ್ತುವಾರಿಗಳನ್ನಾಗಿ ಡಾ.ಆರ್.ಎಂ.ಮಂಜುನಾಥಗೌಡ, ಆಯನೂರು ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಕೆಳಕಂಡ 7 ಜನ ಮುಖಂಡರುಗಳನ್ನು ಉಸ್ತುವಾರಿಗಳನ್ನಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಇವರು ನೇಮಿಸಿದ್ದಾರೆ.

ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಎಂಎಡಿಬಿ ಅಧ್ಯಕ್ಷರಾದ ಡಾ.ಆರ್.ಮಂಜುನಾಥಗೌಡ,ಶಿವಮೊಗ್ಗ ಗ್ರಾಮಾಂತರ-ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಶಿಕಾರಿಪುರ-ಮಾಜಿ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಭದ್ರಾವತಿ-ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಸೊರಬ-ಕಲಗೋಡು ರತ್ನಾಕರ್, ಶಿವಮೊಗ್ಗ ನಗರ- ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಬಲ್ಕೀಶ್ ಬಾನು ಹಾಗೂ ತೀರ್ಥಹಳ್ಳಿ- ಜಿಲ್ಲಾ ವಕ್ತಾರ ಎಂ.ರಮೇಶ್ ಶೆಟ್ಟಿ ಶಂಕರಘಟ್ಟ ಇವರುಗಳನ್ನು ನೇಮಿಸಲಾಗಿದೆ.

ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆಯ ಬಗ್ಗೆ ಆಯಾಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಭೆಗಳನ್ನು ಆಯೋಜಿಸಿ ಪಕ್ಷದ ಕಾರ್ಯಕರ್ತರನ್ನು ಜಾಗೃತಿಗೊಳಿಸಲು ಜಿಲ್ಲಾ ಅಧ್ಯಕ್ಷರು ನೇಮಕಾತಿ ಅದೇಶದಲ್ಲಿ ಉಸ್ತುವಾರಿಗಳಿಗೆ ಸೂಚನೆ ನೀಡಿದ್ದಾರೆ.