ಹೊಸ ಅಂಕಣ by sowmya koti;ಮತದಾನ ನಮ್ಮ ಹಕ್ಕು

ಮತದಾನ ನಮ್ಮ ಹಕ್ಕು
18 ವರ್ಷ ಆದೊಡನೆ ನಮಗೆ ಸಿಗುವಂತಹ ಅತ್ಯಮೂಲ್ಯವಾದ ಹಕ್ಕು ಎಂದರೆ ಅದು ಮತದಾನ. ಅದರಲ್ಲೂ ಮೊದಲ ಬಾರಿ ಮತದಾನ ಮಾಡುವವರು ಅತಿ ಹೆಚ್ಚಾಗಿ ಉತ್ಸುಕರಾಗಿರುತ್ತಾರೆ. ಆದರೆ ಈ ಹುರುಪಿನ ಜೊತೆ ಈ ನಮ್ಮ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಬಗ್ಗೆ ಅತಿ ಹೆಚ್ಚು ತಿಳಿದು ಮತದಾನ ಮಾಡುವುದು ಸೂಕ್ತ.ಒಂದೊಂದು ವೋಟು ಸಹ ಅತ್ಯಮೂಲ್ಯವೇ. ಹಾಗಾಗಿ ಪೋಷಕರು ಸಹ ಮುಕ್ತವಾಗಿ ಮನೆಯಲ್ಲಿ ಯಾವ ಪಕ್ಷ ಏನು ಕೆಲಸ ಮಾಡುತ್ತಿದೆ ಹೇಗೆ ನಮ್ಮ ಸರ್ಕಾರ ಇದರಿಂದ ನಿರ್ಮಾಣವಾಗುತ್ತದೆ ಎಂದು ಮನೆಯಲ್ಲಿ ಮಾತನಾಡುವುದು ಒಳಿತು.

ಕೇವಲ ಯಾರೋ ಒಬ್ಬರು ಕೊಡುವಂತಹ ಚಿಕ್ಕಪುಟ್ಟ ಹಣದ ಆಸೆಗೆ ಬೀಳದೆ ನಾವು ನಮ್ಮ ಅತ್ಯುಮೂಲ್ಯವಾದ ಮತವನ್ನು ಚಲಾಯಿಸುವುದು ಒಳ್ಳೆಯದು. ಇದು ಕೇವಲ ಮತದಾನ ಅಲ್ಲ ಇದು ನಮ್ಮ ಸರ್ಕಾರವನ್ನು ನಿರ್ಣಯಿಸುವ ಒಂದು ಅತ್ಯಮೂಲ್ಯವಾದ ಅಸ್ತ್ರವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಸಹ ಮತದಾನವನ್ನು ಮಾಡಲೇಬೇಕು. ಇದರಿಂದ ನಮಗೆ ಯಾವ ಸರ್ಕಾರ ಬೇಕು ಎಂದು ನಮ್ಮ ಮತ ಈ ಸರ್ಕಾರವನ್ನ ನಿರ್ಮಿಸಬಹುದು.

ಅದೇ ರೀತಿ ನಾವು ಮತ ಹಾಕುವ ವ್ಯಕ್ತಿ ಯಾವುದೇ ರೀತಿಯಾದಂತಹ ಕ್ರಿಮಿನಲ್ ಬ್ಯಾಗ್ರೌಂಡ್ ಇಲ್ಲವೇ ಎಂದು ನಾವು ಖಾತ್ರಿಪಡಿಸಿಕೊಂಡು ನಮ್ಮ ಮತವನ್ನು ಹಾಕುವುದು ಅತ್ಯಂತ ಸೂಕ್ತಕರ.
ಇದರ ಜೊತೆ ನಾವು ಮತವನ್ನು ಹಾಕುವ ವ್ಯಕ್ತಿ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಾರೋ ಇಲ್ಲವೋ ಎಂದು ದೃಢಪಡಿಸಿಕೊಳ್ಳಬೇಕು. ಇದರ ಜೊತೆ ಅವರು ನಮ್ಮ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ನಮ್ಮ ಪ್ರತಿನಿಧಿಯಾಗಿ ಸರ್ಕಾರಕ್ಕೆ ತಿಳಿಸಲು ಶಕ್ತಿಯುತರೆ ಎಂದು ಸಹ ನಾವು ತಿಳಿಯಬೇಕಾಗುತ್ತದೆ. ಕೇವಲ ಮತದಾನದ ಸಮಯದಲ್ಲಿ ನಮಗೆ ದೊರಕುವಂತಹ ರಾಜಕಾರಿಣಿಗಳು ಅಲ್ಲದೆ ನಮ್ಮ ಕಷ್ಟಕಾರ್ಪಣ್ಯಗಳಿಗೆ ಜನರಿಗೆ ಸ್ಪಂದಿಸುವಂತಹ ಸೂಕ್ತ ವ್ಯಕ್ತಿ ನಮ್ಮ ಸಮಾಜಕ್ಕೆ ಬೇಕಾಗಿದೆ.
ಪೋಷಕರಾಗಿ ನಮ್ಮ ಪಾತ್ರ ಏನು ಎಂದು ನಾವು ಯೋಚಿಸಿದಾಗ ನಮ್ಮ ಮಕ್ಕಳ ಮುಂದೆ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಬಗ್ಗೆ ನಾವು ಮುಕ್ತವಾಗಿ ಮಾತನಾಡಬೇಕು . ಕಾರಣ ಆ ಎಳೆಯ ಮನಸ್ಸು ನಿರ್ಧಾರವನ್ನು ತೆಗೆದುಕೊಳ್ಳಲು ನಾವು ಸಹಾಯ ಮಾಡಬೇಕು. ನಾವು ಅವರಿಗೆ ಇದೇ ಪಕ್ಷಕ್ಕೆ ಮತ ಹಾಕು ಎಂದು ನಾವು ಅವರಿಗೆ ಒತ್ತಾಯ ಮಾಡಬಾರದು. ಯಾವಾಗಲೂ ಆಯ್ಕೆಯನ್ನು ಅವರ ಕೈಗೆ ಕೊಟ್ಟು ಅವರು ಒಳ್ಳೆಯ ನಿರ್ಧಾರವನ್ನ ತೆಗೆದುಕೊಳ್ಳಲು ನಾವು ಅವರಿಗೆ ಸಹಾಯ ಮಾಡಬೇಕು .ನಮ್ಮ ಆಲೋಚನೆಗಳನ್ನು ಅವರ ಮೇಲೆ ಹೇರುವ ಬದಲು ಯಾವ ಸರ್ಕಾರ ಬಂದರೆ ಹೇಗೆ ಕೆಲಸ ಮಾಡುತ್ತದೆ ಎಂದು ಅವರಿಗೆ ಬಿಡಿಸಿ ಮನವರಿಕೆಯನ್ನು ಮಾಡಿಕೊಡುವುದು ಸೂಕ್ತ.

ಸಾಕಷ್ಟು ಬಾರಿ ನಾವು ಕೇಳಿರುವಂತಹ ಜನರ ಅಭಿಪ್ರಾಯ ಏನು ಎಂದರೆ ನಮ್ಮ ಮತದಿಂದ ಏನಾಗುತ್ತದೆ . ಯಾವುದೇ ಸರ್ಕಾರ ಬಂದರೂ ಸಹ ನಾವು ನಮ್ಮ ಕೆಲಸವನ್ನು ಮಾಡಲೇಬೇಕು ಎನ್ನುವ ಮಾತು .ಆದರೆ ಅದು ಅತ್ಯಂತ ತಪ್ಪು ಕಲ್ಪನೆ ಹಾಗಾಗಿ ಪ್ರತಿಯೊಬ್ಬರೂ ಸಹ ನಮ್ಮ ಈ ಹಕ್ಕನ್ನ ಚಲಾಯಿಸಬೇಕು . ಇದರಿಂದ ನಮಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಸಹ ಪರೋಕ್ಷವಾಗಿ ನಮ್ಮ ಜೀವನ ನಡೆಸಲು ಸಹಾಯವಾಗುತ್ತದೆ . ಸರ್ಕಾರಗಳು ತೆಗೆದುಕೊಂಡಂತಹ ಹಲವಾರು ನಿರ್ಧಾರಗಳು ಹಲವಾರು ಯೋಚನೆಗಳು ನಮಗೆ ಒಳಿತನ್ನು ತರುವುದಾಗಿರುತ್ತದೆ .

ಹಾಗಾಗಿ ನಮಗೆ ಬೇಕಾದಂತಹ ಸರ್ಕಾರ ಬೇಕು ಎಂದಾಗ ನಾವು ನಮ್ಮ ಹಕ್ಕನ್ನ ಚಲಾಯಿಸಬೇಕಾಗುತ್ತದೆ. ಅದಕ್ಕಾಗಿಯೇ ಸರ್ಕಾರವು ಸಹ ರಜೆಯನ್ನು ಘೋಷಿಸಿರುತ್ತದೆ . ಹಾಗಾಗಿ ಪ್ರತಿಯೊಬ್ಬರೂ ನಿಮ್ಮ ಮತ ಎಲ್ಲಿದೆಯೋ ಆ ಊರುಗಳಿಗೆ ಹೋಗಿ ನಿಮ್ಮ ಅತ್ಯಮೂಲ್ಯವಾದ ಅಂತಹ ಈ ಮತವನ್ನ ಚಲಾಯಿಸಿ ಹಾಗೂ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಲು ಸಹಾಯ ಮಾಡಿ. ದಯವಿಟ್ಟು ಪ್ರತಿಯೊಬ್ಬರೂ ತಮ್ಮ ತಮ್ಮ ಮತವನ್ನು ಚಲಾಯಿಸಿ ಹಾಗೂ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಲು ನಾವು ಸಹ ಕೈಜೋಡಿಸೋಣ.
“ಮತದಾನ ನಮ್ಮ ಹಕ್ಕು”
By
Sowmya Koti
Mysore

 


ಮೂಲತಃ ಭದ್ರಾವತಿಯ ಹೆಣ್ಣುಮಗಳು. ಈಗ ಮೈಸೂರಿನಲ್ಲಿ ವಾಸ. ಡಿಪ್ಲಮೋ ಇನ್ ಕಂಪ್ಯೂಟರ್ ಸೈನ್ಸ್ ಓದಿಕೊಂಡಿದ್ದಾರೆ. ಬರೆಯುವ ಮತ್ತು ಓದುವ ವಿಷಯದಲ್ಲಿ ತಜ್ಞರು. ಗೃಹಿಣಿ. ಆನ್ ಲೈನಲ್ಲಿ ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಹಾಗೂ ಭಗವದ್ಗೀತೆ ಶ್ಲೋಕಗಳು, ಅದರ ಅರ್ಥಗಳ ಪಾಠಗಳನ್ನು ಕಳೆದ 5 ವರ್ಷಗಳಿಂದ ತೆಗೆದುಕೊಳ್ಳುವ ಮೂಲಕ ಪ್ರಸಿದ್ಧರಾಗಿದ್ದಾರೆ. ಜೊತೆಗೆ, ಪ್ರವಚನಗಳನ್ನು ಕೂಡ ಮಾಡುತ್ತಿದ್ದಾರೆ.
ಅವರ ಬರವಣಿಗೆ ಇದನ್ನೆಲ್ಲ ಮೀರಿದ್ದು…ಹೊಸದಾದ ಲೋಕ ಪರಿಚಯಿಸಬಲ್ಲ ಸೌಮ್ಯ ಕೋಟಿಯವರ ಬರವಣಿಗೆ ಇನ್ನು ನಿಮಗೆ ಪ್ರತಿ ವಾರವೂ ಲಭ್ಯವಾಗಲಿದೆ…

– ಸಂಪಾದಕರು
malenaduexpress.com