ಶರಾವತಿ ಹಿನ್ನೀರು; ಹಸಿರುಮಕ್ಕಿ ಲಾಂಚ್ ತಾತ್ಕಾಲಿಕ ಸ್ಥಗಿತ

ಶರಾವತಿ ಹಿನ್ನೀರು; ಹಸಿರುಮಕ್ಕಿ ಲಾಂಚ್ ತಾತ್ಕಾಲಿಕ ಸ್ಥಗಿತ
ಸಾಗರ ;
ಶರಾವತಿ ಹಿನ್ನೀರು ಬತ್ತಿರುವ ಹಿನ್ನೆಲೆಯಲ್ಲಿ ಹಸಿರುಮಕ್ಕಿ ಲಾಂಚನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಮಳೆ ಕೊರತೆ ಮತ್ತು ವಿಪರೀತ ಬಿಸಿಲಿನ ಝಳದಿಂದಾಗಿ ಶರಾವತಿ ಹಿನ್ನೀರು ಬತ್ತಿ ಹೋಗಿದೆ.
ನೀರಿನ ಆಳದಲ್ಲಿರುವ ಮರದ ದಿಮ್ಮಿಗಳು, ಕಲ್ಲುಬಂಡೆಗಳು ನೀರು ಇಳಿದಿರುವ ಹಿನ್ನೆಲೆಯಲ್ಲಿ ಮೇಲ್ಭಾಗಕ್ಕೆ ಬಂದಿರುವುದರಿಂದ ಲಾಂಚ್‍ಗೆ ತಾಗಿ ಹಾನಿ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಕಳೆದ ಒಂದು ವಾರದಿಂದ ಹಸಿರುಮಕ್ಕಿ ಲಾಂಚ್‍ನಲ್ಲಿ ಜನರ ಜೊತೆಗೆ ಲಘು ವಾಹನ, ದ್ವಿಚಕ್ರ ವಾಹನವನ್ನು ಸಾಗಿಸಲಾಗುತಿತ್ತು. ಈ ಲಾಂಚ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಮಳೆ ಬಂದು ನೀರಿನ ಮಟ್ಟ ಹೆಚ್ಚಳವಾಗುವವರೆಗೂ ಹಸಿರುಮಕ್ಕಿ ಲಾಂಚ್ ಸೇವೆ ಇರುವುದಿಲ್ಲ.
 – ಇಮ್ರಾನ್ ಸಾಗರ್ ( ಫೋಟೋ ಮತ್ತು ಮಾಹಿತಿ)