ನೈರುತ್ಯ ಪದವೀಧರರ ಚುನಾವಣೆ; ಪಿಂಚಣಿ ವಂಚಿತರ ಬೆಂಬಲ ಆಯನೂರು ಮಂಜುನಾಥ್ ರಿಗೆ

ನೈರುತ್ಯ ಪದವೀಧರರ ಚುನಾವಣೆ;

ಪಿಂಚಣಿ ವಂಚಿತರ ಬೆಂಬಲ ಆಯನೂರು ಮಂಜುನಾಥ್ ರಿಗೆ

ಶಿವಮೊಗ್ಗ : ನೈರುತ್ಯ ಪದವೀಧರರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ ೨೦೦೬ ಪೂರ್ವದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತರ ವೇದಿಕೆ ಬೆಂಬಲಿಸಲಿದೆ ಎಂದು ವೇದಿಕೆಯ ಅಧ್ಯಕ್ಷ ಡಾ.ಜಿ.ಆರ್. ಹೆಬ್ಬೂರು ತಿಳಿಸಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೦೬ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಹೊರ ಡಿಸಿದ
ಮತ್ತು ನೇಮಕಾತಿ ಆದೇಶ ಅಧಿಸೂಚ ನೆಗಳ ಮೇರೆಗೆ ಆಯ್ಕೆ ಹೊಂದಿ ೨೦೦೦ ಏ.೧ರಿಂದ ಅಥವಾ ಆ ದಿನಾಂಕದ ನಂತರ ಸೇರಿದವರನ್ನು ಸರ್ಕಾರ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡಿಸಲು ಒಪ್ಪಿಗೆ ನೀಡಿ ಆದೇಶಿಸಿದೆ ಎಂದರು.
ನಮ್ಮ ನೇಮಕಾತಿ ಸರ್ಕಾರದ ನಿಯಮಾನುಸಾರವಾಗಿದ್ದು, ವಯೋಮಿತಿಯನ್ನು ಅನುದಾನರಹಿತ ನೇಮಕಾತಿ ದಿನಾಂಕದಿAದ ಪರಿಗಣಿಸಿ ಆ ದಿನಾಂಕವನ್ನೇ ಅನುಮೋದಿಸಿ ವೇತನಾನುದಾನ ಬಿಡುಗಡೆ ಆದೇಶ ಮಾಡಿರುವು ದರಿಂದ ಹೊಸ ಪಿಂಚಣಿ ಯೋಜನೆ, ಕಾಲ್ಪನಿಕ ವೇತನದ ಸಮಸ್ಯೆ, ಹೊಸ ಪಿಂಚಣಿ ಯೋಜನೆಯ ಕೊಡುಗೆ ಶೇ.೨೪. ಹಾಗೂ ೨೦೧೪ರ ವಿಧೆಯಕ ನಮಗೆ ಅನ್ವಯಿಸುವುದಿಲ್ಲ ಎಂದರು.
ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಆಯ್ಕೆಯಾದಲ್ಲಿ ನಮಗೆ ಪಿಂಚಣಿ ಅಥವಾ ತಾತ್ಕಾಲಿಕ ಮಾಸಾಶನದ ಸಹಾಯಧನ ಕೊಡಿಸುತ್ತಾರೆ ಎಂಬ ನಂಬಿಕೆ ಯಿಂದ ಅವರಿಗೆ ಬೆಂಬಲಿಸುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿ.ಡಿ.ರವಿ, ಡಾ.ಜಿ.ಪಿ.ನಾಗರಾಜ್, ಶಿವಣ್ಣ, ಗಜೇಂದ್ರ, ಉಷಾ ಮೊದಲಾದವರಿದ್ದರು.