ಸುದ್ದಿಗೋಷ್ಠಿಯಲ್ಲಿ ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು? ಹರಗುವಳ್ಳಿಯ ಯುವ ಕಳ್ಳರು! ಅಡಿಕೆ ಕದಿಯುತ್ತಿದ್ದುದು ಹೇಗೆ? *ಸಾಗರ ಗ್ರಾಮಾಂತರ ಪೊಲೀಸರಿಂದ ಐವರು ಅಡಿಕೆ ಕಳ್ಳರ ಬಂಧನ, ಎಂಟು ಪ್ರಕರಣ ಪತ್ತೆ,ಹದಿನೈದು ಲಕ್ಷ ರೂ.ಮೌಲ್ಯದ ಮಾಲು ವಶ*

ಸುದ್ದಿಗೋಷ್ಠಿಯಲ್ಲಿ ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು?
ಹರಗುವಳ್ಳಿಯ ಯುವ ಕಳ್ಳರು!
ಅಡಿಕೆ ಕದಿಯುತ್ತಿದ್ದುದು ಹೇಗೆ?
*ಸಾಗರ ಗ್ರಾಮಾಂತರ ಪೊಲೀಸರಿಂದ ಐವರು ಅಡಿಕೆ ಕಳ್ಳರ ಬಂಧನ, ಎಂಟು ಪ್ರಕರಣ ಪತ್ತೆ,ಹದಿನೈದು ಲಕ್ಷ ರೂ.ಮೌಲ್ಯದ ಮಾಲು ವಶ*
ಸಾಗರ : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ, ಆನಂದಪುರ ಪೊಲೀಸ್ ಠಾಣೆ, ಕಾರ್ಗಲ್ ಪೊಲೀಸ್ ಠಾಣೆ, ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಡಿಕೆ ಕಳವು ಪ್ರಕರಣಗಳು ದಾಖಲಾಗಿದ್ದು,ಈ ಪ್ರಕರಣಗಳಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಮಾರ್ಗದರ್ಶದಲ್ಲಿ, ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಮೇಲ್ವಿಚಾರಣೆಯಲ್ಲಿ, ಇನ್ಸ್‌ಪೆಕ್ಟರ್  ಮಹಾಬಲೇಶ್ವರ್, ಪಿಎಸ್ಐ ಮುಂದಿನಮನಿ ಹಾಗೂ ಸಿಬ್ಬಂದಿಗಳಾದ ಸನಾವುಲ್ಲಾ, ಷೇಖ್ ಫೈರೋಜ್ ಅಹಮದ್, ರವಿಕುಮಾರ್, ಪ್ರವೀಣ್ ಕುಮಾರ್, ಗುರುಬಸವರಾಜ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ತನಿಖಾ ತಂಡವು ಶಿಕಾರಿಪುರ ತಾಲೂಕಿನ ತುಕ್‌ರಾಜ್,ಹನುಮಂತಪ್ಪ, ರಾಕೇಶ್, ಅಭಿಶೇಕ್,ಶಿವಕುಮಾರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆರೋಪಿತರಿಂದ ಸಾಗರ ಗ್ರಾಮಾಂತರ ಠಾಣೆಯ (ಮೂರು ಪ್ರಕರಣಗಳು) ಆನಂದಪುರ ಪೊಲೀಸ್ ಠಾಣೆಯ (ಮೂರು ಪ್ರಕರಣಗಳು) ಕಾರ್ಗಲ್ ಪೊಲೀಸ್ ಠಾಣೆಯ (ಒಂದು ಪ್ರಕರಣ) ಸೊರಬ ಪೊಲೀಸ್ ಠಾಣೆ (ಒಂದು ಪ್ರಕರಣ)ಸೇರಿ ಒಟ್ಟು 08 ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 8,19,000/- (ಎಂಟು ಲಕ್ಷದ ಹತ್ತೊಂಬತ್ತು ಸಾವಿರ) ರೂಗಳ ಕೆಂಪು ಅಡಿಕೆ, ಬಿಳಿ ಗೋಟು ಅಡಿಕೆ, ಚಾಲಿ ಅಡಿಕೆ, ಸಿಪ್ಪೆ ಗೋಟು ಅಡಿಕೆ, ರೂ 50,000/- (ಐವತ್ತು ಸಾವಿರ) ನಗದು, ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 2,50,000/- (ಎರಡು ಲಕ್ಷದ ಐವತ್ತು ಸಾವಿರ) ರೂಗಳ ಟಾಟಾ ಏಸ್ ವಾಹನ, ಅಂದಾಜು ಮೌಲ್ಯ 4,00,000/- (ನಾಲ್ಕು ಲಕ್ಷ) ರೂಗಳ ಮಹೇಂದ್ರ ಪಿಕ್ ಅಪ್ ವಾಹನ ಸೇರಿ ಒಟ್ಟು ಅಂದಾಜು ಮೌಲ್ಯ ರೂ 15,19,000/- (ಹದಿನೈದು ಲಕ್ಷದ ಹತ್ತೊಂಬತ್ತು ಸಾವಿರ) ರೂಗಳ ಮಾಲು, ಲಾಂಗ್ ಮತ್ತು ಸ್ಟೀಲ್ ರಾಡ್ ಅನ್ನು ವಶಪಡಿಸಿಕೊಂಡಿದ್ದಾರೆ.