ನೈರುತ್ಯ ಪದವೀಧರ ಚುನಾವಣೆ; ರವಿಕುಮಾರ್ ಪತ್ರಿಕಾಗೋಷ್ಠಿ- ಬೇರೆ ಪಕ್ಷಗಳಿಂದ ಪ್ರಭಾವ ಬೀರಿ ಮತಬೇಟೆ ಕಾಂಗ್ರೆಸ್ ನಿಂದ ಮನೆ ಮನೆಗೆ ತೆರಳಿ ಮನವಿ

ನೈರುತ್ಯ ಪದವೀಧರ ಚುನಾವಣೆ; ರವಿಕುಮಾರ್ ಪತ್ರಿಕಾಗೋಷ್ಠಿ-

ಬೇರೆ ಪಕ್ಷಗಳಿಂದ ಪ್ರಭಾವ ಬೀರಿ ಮತಬೇಟೆ

ಕಾಂಗ್ರೆಸ್ ನಿಂದ ಮನೆ ಮನೆಗೆ ತೆರಳಿ ಮನವಿ

ಶಿವಮೊಗ್ಗ: ವಿಧಾನ ಪರಿಷತ್ ಚುನಾವಣೆಗೆ ಸೊರಬ ತಾಲೂಕಿಗೆ ಉಸ್ತುವಾರಿಯಾಗಿ ನನ್ನನ್ನು ಪಕ್ಷ ನೇಮಕ ಮಾಡಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಸೇರಿ  ತಾಲೂಕಿನಾದ್ಯಂತ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದೇವೆ ಎಂದು ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೊರಬ ತಾಲೂಕಿನಲ್ಲಿ ಮತದಾರರ ಮನೆ ಮನೆಗೆ, ಕಚೇರಿಗಳಿಗೆ ತೆರಳಿ ಮತಯಾಚಿಸಲಾಗುವುದು. ಹಾಗೂ ಬೂತ್ ಗಳಿಗೆ ಭೇಟಿ ನೀಡಲಾಗುವುದು ಎಂದರು.

ನೈರುತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ಡಾ.ಕೆ.ಕೆ. ಮಂಜುನಾಥ್ ಅವರು ಅಭ್ಯರ್ಥಿಯಾಗಿದ್ದು ಮತಯಾಚಿಸುವಾಗ ಅಭ್ಯರ್ಥಿಗಳ ಪರ ಮತದಾರರು ಹೆಚ್ಚಿನ ಒಲವು ತೋರಿಸುತ್ತಿರುವುದರಿಂದ ಅವರ ಗೆಲುವು ಖಚಿತ ಎಂದರು.

ಬಿಜೆಪಿ ಅಭ್ಯರ್ಥಿ ರೆಸಾರ್ಟ್ ಹಾಗೂ ಕ್ಲಬ್ ಗಳಲ್ಲಿ ಮತದಾರರನ್ನು ಸೇರಿಸಿಕೊಂಡು ಆಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮಾಜದ ಮುಖಂಡರಾದ ಧೀರರಾಜ್ ಹೊನ್ನವಿಲೆ, ತಿಮ್ಮರಾಜ್, ಹರ್ಷ ಭೋವಿ, ವೀರೇಶ್, ಪ್ರಮುಖರಾದ ಶಿ.ಜು. ಪಾಶಾ, ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.