ದರೋಡೆಗೆ ಹೊಂಚು ಹಾಕುತ್ತಿದ್ದ ಸಲ್ಮಾನ್ ಗೆ 5 ವರ್ಷದ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್*

*ದರೋಡೆಗೆ ಹೊಂಚು ಹಾಕುತ್ತಿದ್ದ ಸಲ್ಮಾನ್ ಗೆ 5 ವರ್ಷದ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್*

ಶಿವಮೊಗ್ಗದ ವಿದ್ಯಾನಗರದ ಮುಖ್ಯರಸ್ತೆ ಕಡೆಯಿಂದ ಮತ್ತೂರು ಕಡೆಗೆ ಹೋಗುವ ರಸ್ತೆ ಬಳಿ ನಿಂತು ಆಯುಧದೊಂದಿಗೆ ದರೋಡೆ ಮಾಡುವ ಉದ್ದೇಶದಿಂದ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಯಾಗಿದ್ದ ಉತ್ತರ ಪ್ರದೇಶ ಮೀರತ್ ನ ವಾಸಿ ಸಲ್ಮಾನ್ @ ಲಲ್ಲಾನಿಗೆ 5 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆ ಮತ್ತು 8 ಸಾವಿರ ರೂ., ಗಳ ದಂಡ ವಿಧಿಸಿ ಆದೇಶಿಸಿದೆ.

ಸಲ್ಮಾನ್ 2020ರ ಸೆಪ್ಟೆಂಬರ್ 16 ರಂದು ರಾತ್ರಿ ಕೋಟೆ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಟಿಪಿ ಚಂದ್ರಶೇಖರ್ ಮತ್ತು ಸಿಬ್ಬಂದಿಗಳ ಕೈಗೆ ಸಿಕ್ಕಿಬಿದ್ದಿದ್ದ.

ಆತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ನ್ಯಾಯಾಲಯಕ್ಕೆ ಆಗಿನ ಪಿಎಸ್ ಐ ಶಿವಾನಂದ ಕೋಳಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಪಿ.ಒ.ಪುಷ್ಪ ಪ್ರಕರಣದ ವಾದ ಮಂಡಿಸಿದ್ದು, ನ್ಯಾಯಾಧೀಶರಾದ ಶ್ರೀಮತಿ ಪಲ್ಲವಿ ಬಿ.ಆರ್. ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.