ಮಾರ್ಚ್ 1ರಂದು ಸಾಗರದ ಗಾಂಧಿ ಮೈದಾನದ ನಗರಸಭೆ ಆವರಣದಲ್ಲಿ ಸಾಗರ ತಾಲ್ಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅ.ರಾ.ಶ್ರೀನಿವಾಸ

ಮಾರ್ಚ್ 1ರಂದು ಸಾಗರದ ಗಾಂಧಿ ಮೈದಾನದ ನಗರಸಭೆ ಆವರಣದಲ್ಲಿ
ಸಾಗರ ತಾಲ್ಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅ.ರಾ.ಶ್ರೀನಿವಾಸ

ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾರ್ಚ್ 01 ರಂದು ಶನಿವಾರ ಇಲ್ಲಿನ ಗಾಂಧಿ ಮೈದಾನ ನಗರಸಭೆ ಆವರಣದ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಅ.ರಾ.ಶ್ರೀನಿವಾಸ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವು ಬೆಳಗ್ಗೆ 9ಕ್ಕೆ ಧ್ವಜಾರೋಹಣದೊಂದಿಗೆ ಆರಂಭವಾಗಲಿದೆ ಎಂದು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಹೇಳಿದರು.

ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಗ್ಗೆ 9ಕ್ಕೆ ಯತೀಶ್ ಆರ್. ಭಾ.ಆ.ಸೇ ಉಪವಿಭಾಧಿಕಾರಿಗಳು ಸಾಗರ ಇವರು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸುವರು, ನಾಡಧ್ವಜವನ್ನು ಶಿವಪ್ರಕಾಶ್ ಬಿ.ಎಲ್ ಕಾರ್ಯನಿರ್ವಹಣಾಧಿಕಾರಿಗಳು ತಾಪಂ ಸಾಗರ, ಪರಿಷತ್ತಿನ ಧ್ವಜವನ್ನು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ನೆರವೇರಿಸುವರು. ಈ ಸಂಧರ್ಭದಲ್ಲಿ ರಮೇಶ್ ಆರ್., ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು, ಬಿಇಓ ಕಛೇರಿ, ಸಾಗರ, ಮದನ್, ಸಹಾಯಕ ನಿರ್ದೇಶಕರು, ಪರಿಸರ ವಿಭಾಗ, ನಗರಸಭೆ, ಸಾಗರ, ಉಮೇಶ್ ಹಿರೇನೆಲ್ಲೂರು, ಅಧ್ಯಕ್ಷರು, ಭಾರತ್ ಸೇವಾದಳ, ಸಾಗರ ಘಟಕ,ದತ್ತಾತ್ರೇಯ ಭಟ್, ಮುಖ್ಯ ಶಿಕ್ಷಕರು, ಸರ್ಕಾರಿ ಉರ್ದು ಪ್ರೌಢಶಾಲೆ, ಸಾಗರ, ಸತ್ಯನಾರಾಯಣ ಎಸ್.ಡಿ, ನಿವೃತ್ತ ಉಪ ತಹಸೀಲ್ದಾರರು, ಸಾಗರ ಇವರು ಉಪಸ್ಥಿತರಿರುವರು. ಧ್ವಜಾರೋಹಣವನ್ನು ಭಾರತ್ ಸೇವಾದಳ ಹಾಗೂ ಸ್ಕೌಟ್ ಮತ್ತು ಗೈಡ್ ಅವರು ನಿರ್ವಹಿಸುವರು.

ಸಮ್ಮೇಳನಾಧ್ಯಕ್ಷರ ಸರಳ ಮೆರವಣಿಗೆ : ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಪೌರಾಯುಕ್ತ ಹೆಚ್.ಕೆ.ನಾಗಪ್ಪ ಚಾಲನೆ ನೀಡುವರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅರವಿಂದ .ಎ.ಸಿ,ರೇವಪ್ಪ ಕೆ. ಹೊಸಕೊಪ್ಪ,ಬಿ.ಡಿ.ರವಿಕುಮಾರ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಆನಂದಪುರಂ ಘಟಕ, ರಮೇಶ್ ಕೆಳದಿ, ಅಧ್ಯಕ್ಷರು, ತಾಲ್ಲೂಕು ಪ್ರಗತಿಪರ ಯುವ ಒಕ್ಕೂಟ, ಸಾಗರ ಇವರು ಉಪಸ್ಥಿತರಿಸುವರು.

ಉದ್ಘಾಟನಾಕಾರ್ಯಕ್ರಮ:

ಬೆಳಗ್ಗೆ 11ಕ್ಕೆ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಸಮ್ಮೇಳನವನ್ನು ಉದ್ಘಾಟಿಸುವರು.

ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಆಶಯನುಡಿಗಳನ್ನಾಡುವರು, ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಡಿ.ದಿಕ್ಸೂಚಿ ಮಾತುಗಳನ್ನಾಡುವರು, ವೇದಿಕೆಯಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ವಿ.ಗಣೇಶ್, ಸಮ್ಮೇಳನಾಧ್ಯಕ್ಷರಾದ ಅ.ರಾ.ಶ್ರೀನಿವಾಸ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ, ಸವಿತಾ ವಾಸು, ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಆರ್.ಜಯಂತ್, ಉಪವಿಭಾಧಿಕಾರಿ ಯತೀಶ್ ಆರ್. ಡಿವೈಎಸ್‍ಪಿ ಗೋಪಾಲಕೃಷ್ಣ ತಿ.ನಾಯ್ಕ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್, ಬಿಇಓ ಪರಶುರಾಮಪ್ಪ ಈ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಶ್‍ಕುಮಾರ್ ಎನ್., ಪ್ರಮುಖರಾದ ಟಿ.ಡಿ.ಮೇಘರಾಜ್, ಗಣಪತಿ ಮಂಡಗಳಲೆ, ಆರ್.ಶ್ರೀನಿವಾಸ್, ರಾಮು, ಕಲಸೆ ಚಂದ್ರಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ಕನ್ನಪ್ಪ ಬೆಳಲಮಕ್ಕಿ, ಮಾಲತೇಶಪ್ಪ, ಮಹಾಬಲೇಶ್ವರ, ಲಕ್ಷ್ಮಣ್ ಆರ್.ನಾಯ್ಕ್ ಮೊದಲಾದವರು ಉಪಸ್ಥಿತರಿರುವರು.

ವಿವಿಧ ಗೋಷ್ಠಿಗಳು :

ಮಲೆನಾಡಿನ ಪ್ರಸ್ತುತ ತಲ್ಲಣಗಳು ಅಧ್ಯಕ್ಷತೆಯನ್ನು ಡಾ.ಜಿ.ಎಸ್.ಭಟ್ ವಹಿಸಲಿದ್ದು ಸೀತಾರಾಮ ಕುರುವರಿ ವಿಷಯ ಮಂಡನೆ ಮಾಡಲಿದ್ದಾರೆ, ಮಲೆನಾಡಿನ ಸಾಹಿತ್ಯದ ಪ್ರಸ್ತುತ ಸ್ಥಿತಿಗತಿ ಕುರಿತು ಡಾ.ಕುಂಸಿ ಉಮೇಶ್ ವಿಷಯ ಮಂಡಿಸಲಿದ್ದು ವೇದಿಕೆಯಲ್ಲಿ ಪ್ರಮುಖರಾದ ಐ.ಎನ್.ಸುರೇಶ್ ಬಾಬು, ಕೆ.ಆರ್.ಗಣೇಶ್ ಪ್ರಸಾದ್, ಸೈಯದ್ ಜಾಕೀರ್, ಲಕ್ಷ್ಮಣ್ ಸಾಗರ್, ಸುಧೀರ್ ಶೆಟ್ಟಿ ಉಪಸ್ಥಿತರಿರುವರು.
ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಎಂ.ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದು ದೇವೇಂದ್ರ ಬೆಳೆಯೂರು ವಿಷಯ ಮಂಡಿಸಲಿದ್ದಾರೆ, ವೇದಿಕೆಯಲ್ಲಿ ಪ್ರಮುಖರಾದ ಸರೋಜ ಬಿ, ದಿನೇಶ್ ಶಿರವಾಳ,ತಿ.ನಾ.ಶ್ರೀನಿವಾಸ, ಪರಮೇಶ್ವರ ದೂಗೂರು, ನಾಗರಾಜ್ ಉಪಸ್ಥಿತರಿರುವರು.

ಕವಿಕಲರವ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಹಾ.ಉಮೇಶ್ ವಹಿಸಲಿದ್ದು ವೇದಿಕೆಯಲ್ಲಿ, ಚಂದ್ರಶೇಖರ ಸಿರಿವಂತೆ, ಆರ್.ಕುಸುಮ, ಮೋಹನ್ ಮೂರ್ತಿ, ವಿ.ಶಂಕರ್, ಸತ್ಯನಾರಾಯಣ,ಭಾವನ ಸಂತೋಷ್, ನಾಗರತ್ನ ನಾರಾಯಣಪ್ಪ, ಬಿ.ಹೆಚ್.ಲಿಂಗರಾಜ್, ಉಷಾಗುರುಮೂರ್ತಿ, ಸತೀಶ್, ಜನಾರ್ಧನ ಉಡುಪ, ಸತ್ಯನಾರಾಯಣ ಸಿರಿವಂತೆ, ಸದಾನಂದ ಶರ್ಮ ಉಪಸ್ಥಿತರಿರುವರು, ರಾಮಚಂದ್ರ ಸಾಗರ್, ಭಾಗೀರಥಿ, ಗಂಗಮ್ಮ, ಅಮಿತ್ ಆನಂದಪುರ, ಯೋಗೀಶ್ ಜಿ.ಭಟ್, ಚಂದ್ರಪ್ಪ ಅಳೂರು, ಸ್ಟ್ಯಾನಿ ಲೋಪಿಸ್, ಭವ್ಯ, ರವಿರಾಜ್ ಸಾಗರ, ಸುಲೋಚನಾ, ಗೀತಾ ಸಾಗರ್, ವಾಣಿ ಗಣಪತಿ, ಡಾ.ವ.ಮ.ಗಂಗಾಧರ್, ಧರ್ಮರಾಜ್ ಬೆಳಲಮಕ್ಕಿ, ಈಶ್ವ್ವರಪ್ಪ ಎಂ ಕವನ ವಾಚಿಸುವರು.

ಮಹಿಳೆ-ಪ್ರಸ್ತುತ ಸಾಮಾಜಿಕ ಮನೋಭಾವ ಗೋಷ್ಠಿಯ ಅಧ್ಯಕ್ಷತೆಯನ್ನು ಜ್ಯೋತಿ ಕೋವಿ ವಹಿಸಲಿದ್ದು ರಂಗ ಕಲಾವಿದೆ ವಿದ್ಯಾ ಹೆಗಡೆ ವಿಷಯ ಮಂಡಿಸಲಿದ್ದಾರೆ, ವೇದಿಕೆಯಲ್ಲಿ ಪ್ರಮುಖರಾದ ಮಧುರ ಶಿವಾನಂದ, ಎನ್.ಲಲಿತಮ್ಮ, ಮಧುಮಾಲತಿ, ಪ್ರೇಮ ಎಸ್, ಚೂಡಾಮಣಿರಾಮಚಂದ್ರ, ಭಾಗೀರಥಿ, ಡಾ.ಅನ್ನಪೂರ್ಣ, ನಂದಾಗೊಜನೂರು ಉಪಸ್ಥಿತರಿರುವರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಿದ್ದು ಶಾಕರಾದ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆ ವಹಿಸಲಿದ್ದು ಡಾ.ಕೆ.ಪ್ರಭಾಕರ ರಾವ್ ಸನ್ಮಾನಿತರ ಕುರಿತು ಮಾತನಾಡಲಿದ್ದಾರೆ, ವೇದಿಕೆಯಲ್ಲಿ ಪ್ರಮುಖರಾದ ಅಶ್ವಿನಿ ಕುಮಾರ್, ಎಸ್.ಬಿ,ಮಹಾದೇವ್, ಈಳಿ ಶ್ರೀಧರ್,ಚೇತನ್ ರಾಜ್ ಕಣ್ಣೂರು, ಎಲ್.ಚಂದ್ರಪ್ಪ, ಕೆ.ಸಿದ್ದಪ್ಪ, ವೈ.ಮೋಹನ್ ಉಪಸ್ಥಿತರಿರುವರು. ಎಸ್.ಆರ್.ಭಟ್ ಭಡ್ತಿ ಸಾಹಿತ್ಯ ಕ್ಷೇತ್ರ, ರೇವಣ ಸಿದ್ಧಪ್ಪ ಸಿ.ಎ ಶ್ರಮಿಜೀವಿ, ಕುಮಾರ್ ಶೆಟ್ರು ಕೃಷಿ, ಸುಭಾಷ್ ಕೌತಳ್ಳಿ ಸಮಾಜ ಸೇವೆ, ಮಹಾಬಲೇಶ್ವರ ಗೌಡ ಸಾಂಸ್ಕøತಿಕ, ಸೀತರಾಮ್ ಹಾರೆಗೊಪ್ಪ ಕಲೆ, ಸುಭಾಶ್ಚಂದ್ರ ತೇಜಸ್ವಿ ಯೋಧ, ಮರಿಯಾ ಲೀಮಾ ಮಹಿಳಾ ಕ್ಷೇತ್ರ, ಡಾ.ರಾಮಪ್ಪ ಕುಗ್ವೆ ಜಾನಪದ, ಕೆ.ಸಿ ದೇವಪ್ಪ ಸಹಕಾರ, ಎಚ್.ಜಿ.ಸುಬ್ರಮಣ್ಯ ಭಟ್ ಕ್ರೀಡೆ ಇವರನ್ನು ಸನ್ಮಾನಿಸಲಾಗುವುದು.

ಸಮಾರೋಪ ಸಮಾರಂಭದಲ್ಲಿ ಸಾಹಿತಿ ಡಾ.ಸಫ್ರ್ರಾ ಚಂದ್ರಗುತ್ತಿ ಸಮಾರೋಪನುಡಿಗಳನ್ನಾಡಲಿದ್ದು ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ, ಮಾಜಿ ಶಾಸಕಿ ಪ್ರಫುಲ್ಲ ಮಧುಕರ್, ಮಹೇಶ್ ವಿ, ತಸ್ರೀಫ್ ಅಹ್ಮದ್, ಎಸ್.ವಿ.ಹಿತಕರ್ ಜೈನ್, ಸುರೇಶ್ ಸಹನೆ, ಭೂಮೇಶ್, ಡಾ.ಲಕ್ಷ್ಮೀಶ್ ಎ.ಎಸ್. ಮೊದಲಾದವರು ಉಪಸ್ಥಿತರಿರುವರು.

ವಿವಿಧ ಗೋಷ್ಠಿಗಳ ನಂತರ ಗಾಯನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಲಾಗಿದ್ದು ಸಂಜೆ ವೈವಿಧ್ಯಮಯವಾದ ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮಗಳು ನಡೆಯಲಿವೆ ಆಯ್ದ ಕಲಾವಿದರು ಹಾಗೂ ಕಲಾ ತಂಡಗಳು ಭಾಗವಹಿಸಲಿದ್ದಾರೆ.

ಸಮ್ಮೇಳನದ ವಿಶೇಷ :

ರಕ್ತನಿಧಿ ಕೇಂದ್ರದಿಂದ ರಕ್ತದಾನ ಶಿಬಿರವನ್ನು ಆಯೋಜಿಸಿದೆ ಹಾಗೂ ಕರಕುಶಲ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವೈವಿಧ್ಯ ಆಹಾರಮೇಳವು ಸಹ ಇರುತ್ತದೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ನಡೆಯುವ ಈ ಸಮ್ಮೇಳನದಲ್ಲಿ, ಜನಪ್ರತಿನಿಧಿಗಳು, ಸಾಹಿತಿ,ಕಲಾವಿದರು,ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು,ಸಾಹಿತ್ಯ ಸಾಂಸ್ಕøತಿಕ ಸಂಘಟನೆಗಳು, ವಿವಿಧ ಕನ್ನಡ ಪರ ಸಂಘಗಳು, ಸಾಹಿತ್ಯ ಮನಸುಗಳು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಲ್ಲಿ ಭಾಗವಹಿಸಿ ಸಮ್ಮೇಳನದ ಯಶಸ್ವಿಗೆ ಸಹಕರಿಸುವಂತೆ ಕೋರಿದರು.

ಸಮ್ಮೇಳನದ ಸರ್ವಾಧ್ಯಕ್ಷರ ಕಿರುಪರಿಚಯ:

ಅ.ರಾ.ಶ್ರೀನಿವಾಸ ಅವರು ಶರಾವತಿ ಮುಳುಗಡೆ ಪ್ರದೇಶದ ಅರಬಳ್ಳಿ ಗ್ರಾಮದ ರಾಮಯ್ಯ ಮತ್ತು ಸರಸ್ವತಿ ದಂಪತಿಗಳ ಪುತ್ರರಾಗಿ 1951ರಲ್ಲಿ ಜನಿಸಿ ನಂತರ ಪ್ರಾಥಮಿಕ ಶಿಕ್ಷಣವನ್ನು ಅರಬಳ್ಳಿ ಹಾಗೂ ತುಮರಿಯಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಭಾರತಿ ಪ್ರೌಢಶಾಲೆ ಕೆಳದಿಯಲ್ಲಿ, ಎಲ್.ಬಿ.ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಪಡೆದು ಉನ್ನತ ಶಿಕ್ಷಣವನ್ನು ಮೈವಿವಿಯ ಕೊಣಾಜೆ ಸ್ನಾತ್ತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ ಹಾಗೂ ವಿಶೇಷ ಜಾನದಪ ವಿಷಯದೊಂದಿಗೆ 8ನೇ ರ್ಯಾಂಕ್ ಪಡೆದ ಹೆಗ್ಗಳಿಕೆ ಇವರದ್ದಾಗಿದೆ.

ನಂತರ ಕೆಲವು ತಿಂಗಳು ಕನ್ನಡ ಸಾಹಿತ್ಯ ಪರಿಷತ್ತಿನ ಜನಪದ ಪ್ರದರ್ಶನ ಕಲಾ ತಂಡಗಳ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಸ್ವಂತ ಮುದ್ರಣವನ್ನು ಆರಂಭಿಸುವ ಮೂಲಕ ತಮ್ಮ ಉದ್ಯೋಗವನ್ನು ಆರಂಭಿಸಿದ ಇವರು. ನಂತರ ಪತ್ರಿಕೋದ್ಯಮದ ಒಡನಾಟ ಸಾಗರ ವಾರ್ತಾಪತ್ರಿಕೆಯಲ್ಲಿ ಸಕ್ರಿಯರಾಗಿ ತಮ್ಮ ಬರಹಗಳನ್ನು ಆರಂಭಿಸಿದರು, ಸಮಾಜವಾದಿ ಚಿಂತಕ ಸಿಜಿಕೆ ರೆಡ್ಡಿಯವರು ಪ್ರಾಯೋಗಿಕವಾಗಿ ಸಾಗರ ಗ್ರಾಮ ವಿಕಾಸ ಪತ್ರಿಕೆಯಲ್ಲಿ ಅನೇಕ ಚಿಂತನಾರ್ಹ ಬರಹಗಳನ್ನು ಬರೆದಿದ್ದಾರೆ, 1989 ರ ಜನವರಿಯಿಂದ ಮಣ್ಣಿನ ವಾಸನೆ ವಾರ ಪತ್ರಿಕೆಯನ್ನು ಸ್ವಂತ ಆರಂಬಿಸುವ ಮೂಲಕ ಮಣ್ಣಿನ ವಾಸನೆ ಶ್ರೀನಿವಾಸ ಎಂದೇ ಪ್ರಸಿದ್ಧಿ ಪಡೆದರು.

ಮಲೆನಾಡು ಮಲ್ಲಿಗೆಯಲ್ಲಿ, ರೈತ ಹೋರಾಟ, ಚಾರ್ವಾಕ, ಜನಹೋರಾಟ, ಪ್ರಜಾವಾಣಿ, ಅಂತರಂಗ, ಉದಯವಾಣಿ, ತುಷಾರ, ಮೊದಲಾದ ಸ್ಥಳೀಯ, ಜಿಲ್ಲಾ ಹಾಗೂ ರಾಜ್ಯಮಟ್ಟದ ದಿನ ಪತ್ರಿಕೆ ಹಾಗೂ ವಾರ, ಮಾಸ ಪತ್ರಿಕೆಗಳಲ್ಲಿ ನಿರಂತರವಾಗಿ ಸಾಹಿತ್ಯ ಬರಹ ಹಾಗೂ ಅಂಕಣಗಳನ್ನು ಬರೆಯುವ ಮೂಲಕ ಪತ್ರಿಕೋದ್ಯಮದ ಛಾಪು ಮೂಡಿಸಿದ್ದಾರೆ. ಎಲ್.ಬಿ.ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಿಲಬಸ್ ಸಮಿತಿಯ ಓರ್ವ ಸದಸ್ಯರಾಗಿ ಹೀಗೆ ಪತ್ರಿಕೋದ್ಯಮದಲ್ಲಿ ತಮ್ಮದೆಯಾದ ರೀತಿಯಲ್ಲಿ ಗಮನ ಸೆಳೆದರು.
ಯಕ್ಷಗಾನ, ನಾಟಕ, ಸಂಗೀತ, ಸಾಹಿತ್ಯ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ ಇವರು ಪ್ರಾಥಮಿಕ ಶಾಲಾ ಹಂತದಲ್ಲಿಯೇ ನಾಟಕಾಭಿನಯ ನಂತರ ಉದಯಕಲಾವಿದರ ತಂಡದಲ್ಲಿ ಸಕ್ರಿಯ ಹಾಗೆಯೆ ಹೆಗ್ಗೋಡಿನ ನಿನಾಸಂನಲ್ಲಿ ತೊಡಗಿಸಿಕೊಂಡಿದ್ದ ಇವರು ಹಲವು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ, ಅಲ್ಲದೆ ಗೆಳೆಯರ ಬಳಗ ಅಭಿರುಚಿ ನಾಟಕ ಸಂಸ್ಥೆಯ ಮೂಲಕ ನಿರ್ದೇಶನ ಮತ್ತು ಅಭಿನಯಿಸಿ ಗಮನ ಸೆಳೆದಿದ್ದಾರೆ.
ಸಾಹಿತ್ಯ ಅಧ್ಯಯನ ಹಾಗೂ ಬರಹದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಇವರು ಕೇಂದ್ರ ಸರ್ಕಾರದ ಸಂಸ್ಕøತಿ ಮಂತ್ರಾಲಯ ಕೊಡಮಾಡುವ ಶಿಷ್ಯವೇತನ ಪಡೆದು ಪ್ರತಿಫಲಿತಗೊಂಡ ಭೂಮಿ ಹೋರಾಟಗಳು ಆಧುನಿಕ ಸೃಜನಶೀಲ ಸಾಹಿತ್ಯ ಕೃತಿಗಳ ಅವಲೋಕನ ಪ್ರಕಟವಾಗಿದ್ದು ಇವರು ಸಾಹಿತ್ಯಾಸಕ್ತಿಗೆ ಸಂದ ಗೌವರವಾಗಿದೆ.
ಇವರ ಪ್ರಕಟಿತ ಕೃತಿಗಳು: ನಾಟಕಗಳು: ಬೆಂಕಿ, ಮೂಡೂರಿನ ಪ್ರಸಂಗ, ಅಂತರಾಳ, ವಿರುದ್ಧ, ಆರು ಲಘು ನಾಟಕಗಳು, ರಂಗಸಮ್ಮುಖ ರಂಗ ಪ್ರಸ್ತುತಿ ಅವಲೋಕನ, ಮುಷ್ಠಿ, ಯಜ್ಞ, ಸ್ಥಿತ್ಯಂತರ, ವ್ಯಸ್ತ, ಕಾದಂಬರಿಗಳು, ಬೇನೆ, ಕವೂರೂ ಮುಗಿಯದ ಕಥೆಯೂ ಕಥೆಗಳು, ಈಗ ಇನ್ನೊಮ್ಮೆ, ಪ್ರಸ್ತುತ ವಿಮರ್ಶೆ,ಅಪ್ತಲಾಪ, ನಿಕಷ, ಗುಚ್ಚ ಅಂಕಣ ಬರಹ ಕೃತಿಗಳು, ಬಿಂಬಿ ಪ್ರತಿಬಿಂಬ ಲಘು ಸಂಶೋಧನಾ ಕೃತಿ ಹೀಗೆ ಅನೇಕ ಕೃತಿಗಳು ಪ್ರಕಟವಾಗಿವೆ.
ಇವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಮಿಂಚು ಶ್ರೀನಿವಾಸ್ ಜೀವಮಾನ ಸಾಧನೆ ಪ್ರಶಸ್ತಿ, ತಾಲ್ಲೂಕು ಪತ್ರಕರ್ತರ ಸಂಘದಿಂದ ಅಭಿನಂದನೆ ಹೀಗೆ ಅನೇಕ ಗೌರವ ಅಭಿನಂದನೆಗಳು ದೊರಕಿವೆ.
ಸಮಾಜಮುಖಿ ಚಿಂತನೆಯ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಅ.ರಾ.ಶ್ರೀನಿವಾಸ ಅವರು ಸಾಗರ ತಾಲ್ಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ಸಾಗರ ಸಾಹಿತ್ಯ ಕ್ಷೇತ್ರದಕ್ಕೊಂದು ಹೆಗ್ಗಳಿಕೆಯಾಗಿದೆ.

ಸುದ್ಧಿಗೋಷ್ಠಿಯಲ್ಲಿ ಜಿ.ನಾಗೇಶ್, ನಾರಾಯಣಮೂರ್ತಿ ಕಾನಗೋಡು, ಲೋಕೇಶ್ ಕುಮಾರ್, ಸರಸ್ವತಿ ನಾಗರಾಜ್, ಸಿರಿವಂತೆ ಚಂದ್ರಶೇಖರ್, ಸ್ಟ್ಯಾನಿ ಲೋಪೀಸ್ ಉಪಸ್ಥಿತರಿದ್ದರು.